spot_img
spot_img

ಭಜನಾ ಕಲಾವಿದ ಸತ್ಯಪ್ಪ ಮಂಟೂರ ‘ಗಾನ ಶ್ರದ್ಧಾಂಜಲಿ’ ‘ಕಲಾವಿದರ ಕಲೆ ಮತ್ತು ಹೃದಯ ಶ್ರೀಮಂತವಾದದ್ದು’

Must Read

- Advertisement -

ಮೂಡಲಗಿ: ‘ಕಲಾವಿದರು ಆರ್ಥಿಕವಾಗಿ ಬಡವರಾಗಿದ್ದರೂ ಸಹ ಅವರ ಕಲೆ ಮತ್ತು ಹೃದಯ ಶ್ರೀಮಂತಿಕೆಯು ದೊಡ್ಡದಾಗಿದೆ’ ಎಂದು ಸಾಹಿತಿ ಬಾಲಶೇಖರ ಬಂದಿ ಹೇಳಿದರು.

ತಾಲ್ಲೂಕಿನ ಕಲ್ಲೋಳಿಯ ಸಿದ್ಧಾರೂಢ ಮಠದ ಸತ್ಸಂಗ ಸಭಾಭವನದಲ್ಲಿ ಕೋವಿಡ್‍ದಲ್ಲಿ ಸಂದರ್ಭದಲ್ಲಿ ಅಕಾಲಿಕವಾಗಿ ನಿಧನರಾದ ಸಂಗೀತ, ಭಜನಾ ಕಲಾವಿದ ಸತ್ಯಪ್ಪ ಮಂಟೂರ ಅವರಿಗೆ ಏರ್ಪಡಿಸಿದ್ದ ‘ಗಾನ ಶ್ರದ್ಧಾಂಜಲಿ’ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದ ಅತಿಥಿಯಾಗಿ ಮಾತನಾಡಿದ ಅವರು, ಸತ್ಯಪ್ಪ ಮಂಟೂರ ಅವರು ಮೂರು ದಶಕಗಳ ಅನುಪಮವಾದ ಸಂಗೀತ ಕಲಾ ಸೇವೆಯು ಅಪ್ರತಿಮವಾಗಿದೆ ಎಂದರು.

ಸತ್ಯಪ್ಪ ಮಂಟೂರ ಅವರ ಅಭಿಮಾನಿಗಳು, ಕಲಾವಿದರು ಸೇರಿ ಅವರಿಗೆ ಅರ್ಪಿಸುತ್ತಿರುವ ಗಾಯನ ಸೇವೆಯು ಶ್ಲಾಘನೀಯವಾಗಿದೆ. ಭಜನಾ ಕಲಾವಿದರು ಬದುಕಿದ್ದಾಗ ದೇವರನ್ನು ಧ್ಯಾನಿಸುತ್ತಾರೆ, ಅವರೇ ಕಾಲವಾದಾಗ ಎಲ್ಲರ ಮನದಲ್ಲಿ ದೇವರಾಗಿ ಸ್ವರಿಸುವಂತಾಗುತ್ತಾರೆ ಎಂದರು.

- Advertisement -

ವಚನ ಸಾಹಿತ್ಯ, ತತ್ವ ಮತ್ತು ಅನುಭಾವ ಸಾಹಿತ್ಯವನ್ನು ಗಾಯನದ ಮೂಲಕ ಜನರಿಗೆ ಮುಟ್ಟಿಸಿ ಸಮಾಜದ ಸ್ವಾಸ್ಥ್ಯ ಕಾಯುವ ಭಜನಾ ಕಲಾವಿದರ ಕಾರ್ಯವು ಶ್ಲಾಘನೀಯವಾಗಿದೆ. ರಾಜ್ಯದಲ್ಲಿರುವ ಲಕ್ಷಾಂತರ ಭಜನಾ ಕಲಾವಿದರ ಬಗ್ಗೆ ಸರ್ಕಾರದ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ನಿರ್ಲಕ್ಷತೆ ಇರುವುದು ವಿಷಾದಿಸುವ ಸಂಗತಿ ಎಂದರು.

ಕಲೆಗಳು ಉಳಿಯಬೇಕಾದರೆ ಕಲಾವಿದರನ್ನು ಪ್ರೋತ್ಸಾಹಿಸಬೇಕು. ಯುವ ಪೀಳಿಗೆಗೆ ಹಿರಿಯ ಕಲಾವಿದರ ಪ್ರೇರಣೆಯಿಂದ ಕಲೆಗಳು ಬೆಳೆಯಬೇಕು ಎಂದರು.

ಬಳೋಬಾಳದ ಸಂಗನಬಸವ ಸ್ವಾಮೀಜಿ, ಮಧುರಖಂಡಿಯ ಮಲ್ಲಯ್ಯ ಸ್ವಾಮೀಜಿ ಮಾತನಾಡಿ ಸತ್ಯಪ್ಪ ಮಂಟೂರ ಅವರು ತಾವು ಬೆಳೆಯುವದಷ್ಟೆ ಅಲ್ಲ ಅನೇಕ ಭಜನಾ ಕಲಾವಿದರನ್ನು ಸೃಷ್ಟಿಸಿ ಅವರನ್ನು ಬೆಳೆಸಿದರು. ಸತ್ಯಪ್ಪ ಮಂಟೂರರಂತ ಕಲಾವಿದರ ಅಗಲಿಕೆಯು ಕಲಾ ಕ್ಷೇತ್ರಕ್ಕೆ ತುಂಬಲಾರದ ನಷ್ಟವಾಗಿದೆ ಎಂದರು.

- Advertisement -

ಪಾರಿಜಾತ ಪಿತಾಮಹ ಕುಲಗೋಡ ತಮ್ಮಣ್ಣ ಪ್ರತಿಷ್ಠಾನದ ಸಂಸ್ಥಾಪಕ ಅಧ್ಯಕ್ಷ ರಮೇಶ ಕೌಜಲಗಿ ಸತ್ಯಪ್ಪ ಮಂಟೂರ ಅವರ ಕಲಾ ಸಾಧನೆಯ ಬಗ್ಗೆ ಮಾತನಾಡಿದರು.

ಯುವ ಗಾಯಕ ಶ್ರೀಕಾಂತ ನಾಯ್ಕ್ ಸ್ವರಚಿತ ಹಾಡು ‘ಮರುಜನ್ಮ ಪಡೆದು ಬಾ ಸತ್ಯಪ್ಪ’ ಗಾಯನದ ಮೂಲಕ ಸತ್ಯಪ್ಪ ಮಂಟೂರ ಅವರನ್ನು ಸ್ಮರಿಸಿದರು.

ಗಣ್ಯರಾದ ಹಿರಿಯ ಕಲಾವಿದ ಭೀಮಪ್ಪ ಕಡಾಡಿ ಅವರು ಅಧ್ಯಕ್ಷತೆವಹಿಸಿದ್ದರು.

ಬಳೋಬಾಳದ ಶರಣೆ ನೀಲಾಂಬಿಕೆ ತಾಯಿ, ಜಿಲ್ಲಾ ಪಂಚಾಯ್ತಿ ಮಾಜಿ ಅಧ್ಯಕ್ಷ ಬಸಗೌಡ ಪಾಟೀಲ, ಕಲಾವಿದ ಹುಲ್ಯಾಳ ಮಹಾದೇವಪ್ಪ, ಸಿದ್ಧಾರೂಢ ಮಠದ ಟ್ರಸ್ಟ್ ಕಮಿತಿ ಮುಖ್ಯಸ್ಥ ಸಾತಪ್ಪ ಮಲ್ಲಪ್ಪ ಖಾನಾಪುರ, ರಾಜ್ಯೋತ್ಸವ ಪುರಸ್ಕøತ ಕಲಾವಿದ ರಾಯಪ್ಪ ಕುಂಚನೂರ, ಪತ್ರೆಪ್ಪಣ್ಣ ಮುಗಳಿ, ಗಂಗಪ್ಪ ಮಾಸ್ತರ ಜುಂಜುರವಾಡ ಅತಿಥಿಯಾಗಿ ವೇದಿಕೆಯಲ್ಲಿದ್ದರು.

ಶಿವಶಂಕರ ಖಾನಾಪುರ, ಸಿದ್ದಾರೂಢ ಖಾನಾಪುರ, ಭೀಮಶೆಪ್ಪ ಖಾನಾಪುರ, ಶಿವಾನಂದ ಖಾನಾಪುರ, ಮಹಾಲಿಂಗ ಚೌಗಲಾ, ಶಿವಾನಂದ ಮಂಟೂರ, ಮಹಾಂತೇಶ ಹೂಗಾರ, ಸುರೇಶ ಪಾಲಭಾವಿ, ರಾಜು ಪಾಟೀಲ, ಅಡಿವೆಪ್ಪ ಗಿನಿಗಾರ, ಈರಣ್ಣ ದೇಸಾಯಿ ಉಪಸ್ಥಿತರಿದ್ದರು.

ನಿರುಪಾದಯ್ಯ ಹಿರೇಮಠ ಸ್ವಾಗತಿಸಿದರು, ಬಸವರಾಜ ಮರಗನ್ನವರ ನಿರೂಪಿಸಿದರು, ದುಂಡಪ್ಪ ಬೀಸನಕೊಪ್ಪ ವಂದಿಸಿದರು.

ಭಜನಾ ಗಾಯನ: ಬಸಲಿಂಗಯ್ಯ ಹಿಡಕಲ್, ನಾಗಪ್ಪ ಹೊಸಳ್ಳಿ, ಶಂಕರಯ್ಯ ಮಧುರಖಂಡಿ, ಮಹಾಲಿಂಗಯ್ಯ ಮಧುರಖಂಡಿ, ಶಿವು ಮಂಕನಿ, ಲಕ್ಷ್ಮೀಬಾಯಿ ಕುಳಲಿ, ದ್ರೌಪದಿ ಶಿಂಧಿಕುರಬೇಟ, ಗುರುಸ್ವಾಮಿ ಕೊಕಟನೂರ, ಮುದಕಣ್ಣ ಹಿರೇಪಡಸಲಗಿ, ಪ್ರಭು ಪೂಜೇರಿ, ರಾಮಚಂದ್ರ ಮದೆಳ್ಳಿ ಸೇರಿದಂತೆ 40ಕ್ಕೂ ಅಧಿಕ ವಿವಿಧೆಡೆಯಿಂದ ಆಗಮಿಸಿದ್ದ ಭಜನಾ ಕಲಾ ತಂಡಗಳು ಗಾಯನ ಮೂಲಕ ಸತ್ಯಪ್ಪ ಮಂಟೂರ ಅವರಿಗೆ ಶ್ರದ್ಧಾಂಜಲಿ ಅರ್ಪಿಸಿದರು.

- Advertisement -
- Advertisement -

Latest News

ಇದು ಇಂದಿನ ಹಾಸ್ಟೆಲ್ ಹುಡುಗ ಹುಡುಗಿಯರಿಗೆ ನಾವೆಲ್ಲ ಹೇಳಬೇಕಾದ ಖಾಸ್ ಬಾತ್

ಸರ್... ಓ ಸರ್...ಕಾಂಬಳೆ ಸರ್  ... ಸರ್ ನಮಸ್ಕಾರ್ರಿ ಆರಾಮ ಅದೀರಿ?? ನಾ ಯಾರ್ ಹೇಳ್ರಿ ಅನ್ನುತ್ತಿದ್ದಂತೆಯೇ ನಿವೃತ್ತಿ ಹೊಂದಿ ಐದಾರು ವರ್ಷ ಆಗಿದ್ದ ಬಿಸಿಎಮ್...
- Advertisement -

More Articles Like This

- Advertisement -
close
error: Content is protected !!
Join WhatsApp Group