spot_img
spot_img

ಭಕ್ತಿ ಎಂಬುದು ಪರಮ ಪವಿತ್ರ ಪ್ರೇಮ – ಬಸವಾನಂದ ಸ್ವಾಮೀಜಿ

Must Read

spot_img
- Advertisement -

ಸಿಂದಗಿ: ಎಲ್ಲಕ್ಕಿಂತ ದೊಡ್ಡ ಸಂಪತ್ತು ಭಕ್ತಿಯಲ್ಲಿ ಸಿಗುತ್ತದೆ. ಭಕ್ತಿ ಎಂಬುದು ಪರಮ ಪವಿತ್ರವಾದ ಪ್ರೇಮ ವಾಗಿದೆ. ಕಾರಣ ಎಲ್ಲರೂ ಗುರುವಿನಲ್ಲಿ ಶ್ರದ್ಧಾ ಭಕ್ತಿ ಇಟ್ಟರೆ ಜೀವನ ಪ್ರಾಪ್ತಿಯಾಗುತ್ತದೆ ಅಂತೆಯೇ ಮನದ ಮೈಲಿಗೆಯನ್ನು ತೊಳೆಯುವಂಥ ಕಾರ್ಯ ಶ್ರೀಮಠ ಮಾಡುತ್ತಿರುವ ಕಾರ್ಯ ಶ್ಲಾಘನೀಯ ಎಂದು ದಾರವಾಡ ಬಸವಾನಂದ ಸ್ವಾಮಿಗಳು ಹೇಳಿದರು.

ತಾಲೂಕಿನ ಆಸಂಗಿಹಾಳ ಗ್ರಾಮದ ಶ್ರೀ ಶ್ರೀ ಶ್ರೀ ಸಮರ್ಥ ಸದ್ಗುರು ಆರೂಢ ಸಂಗನಬಸವೇಶ್ವರ ಶಿವಯೋಗಿಗಳ ಜಾತ್ರಾ ಮಹೋತ್ಸವದ ನಿಮಿತ್ತ ಆರೂಢಮಠದಲ್ಲಿ ಹಮ್ಮಿಕೊಂಡ ಮಹಾಶಿವಶರಣಿ ಹೆಮರಡ್ಡಿ ಮಲ್ಲಮ್ಮ ಮಹಾ ಪುರಾಣ ಪ್ರವಚನದಲ್ಲಿ ಮಾತನಾಡಿ, ಶ್ರೀಮಠವು ಬಡವರ ಮಠವಾಗಿದ್ದು ಮಾನವ ಜನ್ಮದ ಉದ್ಧಾರಕ್ಕೆ ಅನೇಕ ಮಹಾಪುರಷ ಪುರಾಣ ಪ್ರವಚನಗಳನ್ನು ಹಾಕಿಕೊಳ್ಳುತ್ತಿದು ಮಾನವ ಆಧ್ಯಾತ್ಮಿಕ ಜ್ಞಾನವನ್ನು ರೂಢಿಸಿಕೊಳ್ಳಬೇಕು. ತಿಳಿವಳಿಕೆಗಾಗಿ ಇಂತಹ ಪುರಾಣ ಪ್ರವಚನ ಸಂತ್ಸಂಗಗಳನ್ನು ಆಲಿಸಬೇಕು. ಶರಣರ, ಸಂತರ, ಮಹಾಂತರ ಜೀವನ ಚರಿತ್ರೆಗಳನ್ನು ಅರಿತುಕೊಂಡು ಅವರ ತತ್ವಾದರ್ಶಗಳನ್ನು ಜೀವನದಲ್ಲಿ ಅಳವಡಿಕೊಳ್ಳಬೇಕು ಎಂದರು.

ಆರೂಢ ಆಶ್ರಮ ಶ್ರೀ ಸಮರ್ಥ ಸದ್ಗುರು ಶಂಕರಾನಂದ ಮಹಾರಾಜರು ಮಾತನಾಡಿ, ಶುಕ್ರವಾರ ದಿನಾಂಕ ೭-೦೨-೨೦೨೫ ರಂದು ಬೆಳಗ್ಗೆ ಕತ್ರ‍್ರು ಗದ್ದುಗೆಗೆ ಮಹಾರುದ್ರಾಭಿಷೇಕ ಹಾಗೂ ಸಹಸ್ರ ಬಿಲ್ವಾರ್ಚನೆ ಶ್ರೀ ವೇ. ಸಂಗಯ್ಯ ಹಿರೇಮಠ, ಆಸಂಗಿಹಾಳ ಇವರಿಂದ ಜರುಗುವುದು. ನಂತರ ಶ್ರೀಭೋಗಅಂಗೇಶ್ವರ ಮತ್ತು ಉಭಯ ಜಟಂಗೇಶ್ವರರ ಪಲ್ಲಕ್ಕಿಗಳನ್ನು ಆಸಂಗಿಹಾಳ ಗ್ರಾಮದಿಂದ ಸಕಲ ವಾದ್ಯ ವೈಭವಗಳದೊಂದಿಗೆ ಶ್ರೀ ಮಠಕ್ಕೆ ಬರಮಾಡಿಕೊಳ್ಳುವದು. ಮಧ್ಯಾಹ್ನ ೧-೩೫ ಗಂಟೆಯಿAದ ಆಗಮಿಸಿದ ಪೂಜ್ಯರ ಸಾನಿಧ್ಯದಲ್ಲಿ ಹಾಗೂ ಜನನಾಯಕರ ನೇತೃತ್ವದಲ್ಲಿ ಧರ್ಮಸಭೆ ಹಾಗೂ ಸಾಮೂಹಿಕ ವಿವಾಹ ಜರುಗುವದು. ಸಾಯಂಕಾಲ ೫-೦೦ ಗಂಟೆಗೆ ಗ್ರಾಮ ದೇವರ ಪಲ್ಲಕ್ಕಿಗಳು ಪ್ರರ ಪ್ರದೇಶದೊಂದಿಗೆ ಉಮ್ರಾ ದುಷÉÆÃತ್ಸದ ಮಹಾಮಂಗಲಗೊಳ್ಳುವುದು ಕಾರಣ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಕರೆ ನೀಡಿದರು.

- Advertisement -

ಆರೂಢ ಆಶ್ರಮ ಪೀಠಾಧಿಪತಿ ಶ್ರೀ ಸಮರ್ಥ ಸದ್ಗುರು ವೈಜನಾಥ ಮಹಾರಾಜರು ನೇತೃತ್ವ ವಹಿಸಿದ್ದರು. ತಾಲೂಕಾ ಪಂಚಮಸಾಲಿ ಸಮಾಜದ ಅಧ್ಯಕ್ಷ ಎಂ.ಎಂ.ಹಂಗರಗಿ, ಟಿಎಸ್‌ಪಿಎಸ್ ಮಂಡಳೀಯ ನಿರ್ದೆಶಕ ವ್ಹಿ.ಬಿ.ಕುರುಡೆ, ಮಾಜಿ ರಾಜ್ಯ ಪರಿಷತ್ತ ಸದಸ್ಯ ಸಂಗನಗೌಡ ಪಾಟೀಲ ಅಗಸಬಾಳ, ಕಸಪ ಅಧ್ಯಕ್ಷ ಶಿವಾನಂದ ಬಡಾನೂರ, ಪತ್ರಕರ್ತರ ಸಂಘದ ಅಧ್ಯಕ್ಷ ಪಂಡಿತ ಯಂಪೂರೆ, ಅಮೀರಹ್ಮಜಾ ಮುಜಾವರ, ಗುತ್ತಿಗೆದಾರ ಚೆನ್ನು ಹೊಡ್ಲ, ಪುರಾಣ ಪ್ರವಚನಕಾರ ಮುಧೋಳ ರನ್ನ ಬೆಳಗಲ ಶ್ರೀ ಸಿದ್ಧಾರೂಢ ಮಠ, ಶಿವಯೋಗಾಶ್ರಮ ಪೂಜ್ಯ ಶ್ರೀ ಸಿದ್ಧರಾಮ ಶಿವಯೋಗಿಗಳು, ಸಂಗೀತಗಾರ ಕಲ್ಯಾಣಕುಮಾರ ಗವಾಯಿಗಳು, ಕಾರಭೋಸಗಾ ಪ್ರಭುಕುಮಾರ ಮದರಿ, ತಬಲಾವಾದಕ ಸುಭಾಸ ಚವಡಾಪೂರ, ಸಂಚಾಲಕ ಬಸಅಂಗಯ್ಯಾ ರು. ಹಿರೇಮಠ, ಈರಣ್ಣಗೌಡ ಮಾ. ಪಾಟೀಲ, ಬಸವರಾಜ ಕೆ. ವಾರಕಾರ ಸೇರಿದಂತೆ ಅನೇಕರು ವೇದಿಕೆ ಮೇಲಿದ್ದರು.
ವಿಶ್ವನಾಥ ಶ. ಹೊಡ್ಡ, ಉಪನ್ಯಾಸಕರು ನಿರೂಪಿಸಿದರು.

- Advertisement -
- Advertisement -

Latest News

ಮಹಿಳೆಯರು ಒಳ್ಳೆಯ ಗೃಹಿಣಿಯಾಗುವುದರ ಜೊತೆಗೆ ಸಾಹಿತಿಗಳಾಗಿಯೂ ಹೊರಹೊಮ್ಮುತ್ತಿದ್ದಾರೆ – ಶಾಸಕ ವಿಶ್ವಾಸ ವೈದ್ಯ

ಸವದತ್ತಿ : ಈಗಿನ ಮಹಿಳೆಯರು ಮನಸ್ಸು ಮಾಡಿದರೆ ಏನೆಲ್ಲವನ್ನು ಸಾಧಿಸಬಹುದು ಈಗಿನ ಮಹಿಳೆಯರು ಎಲ್ಲ ರಂಗಗಳಲ್ಲಿಯೂ ಮುಂದೆ ಇದ್ದಾರೆ ಅದರಂತೆ ಸಾಹಿತ್ಯದಲ್ಲಿಯೂ ಕೂಡ ಅವರು ಮುಂದೆ...
- Advertisement -

More Articles Like This

- Advertisement -
close
error: Content is protected !!
Join WhatsApp Group