spot_img
spot_img

ಅಪಾಯದ ಅಂಚಿನಲ್ಲಿ ಭಾಲ್ಕಿಯ ಬಿಇಓ ಕಚೇರಿ ಕಟ್ಟಡ

Must Read

spot_img

ಶಾಸಕ ಈಶ್ವರ ಖಂಡ್ರೆ ಭೇಟಿ; ಪರಿಶೀಲನೆ

ಬೀದರ – ಗಡಿ ಜಿಲ್ಲೆ ಬೀದರ್ ನಲ್ಲಿ ಸತತವಾಗಿ ಮಳೆ ಬಿದ್ದ ಹಿನ್ನೆಲೆಯಲ್ಲಿ ಭಾಲ್ಕಿಯ ಬಿಇಓ ಕಚೇರಿ ಶಿಥಿಲಗೊಂಡಿದ್ದು ಕೆಪಿಸಿಸಿ ರಾಜ್ಯ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಭೇಟಿ ನೀಡಿ ಪರಿಶೀಲಿಸಿದರು.

ಕಚೇರಿಗೆ ಭೇಟಿ ನೀಡಿದ ಶಾಸಕರು ಕಚೇರಿಯ ಎಲ್ಲ ಕೋಣೆಗಳಿಗೆ ಸುತ್ತಾಡಿ ಮೇಲ್ಛಾವಣಿಯ ಸಿಮೆಂಟ್ ಕುಸಿಯುತ್ತಿರುವುದು, ಮಳೆಗೆ ಛಾವಣಿ ಧಂಡಿ ಹಿಡಿದಿರುವುದನ್ನು ವೀಕ್ಷಿಸಿದರು.

ಬಳಿಕ ಮಾತನಾಡಿದ ಅವರು, ನಮ್ಮ ತಂದೆ ಭೀಮಣ್ಣ ಖಂಡ್ರೆ ಶಾಸಕರಿದ್ದ ೬೦-೭೦ರ ದಶಕದ ಸಂದರ್ಭದಲ್ಲಿ ಕಚೇರಿ ನಿರ್ಮಾಣ ಆಗಿತ್ತು. ಇದೀಗ ಈ ಕಚೇರಿ ಶಿಥಿಲಾವಸ್ಥೆಗೆ ತಲುಪಿದೆ. ಇದಕ್ಕೆ ಹೊಸ ಕಟ್ಟಡದ ಅಗತ್ಯ ಇದೆ. ಶಿಕ್ಷಣಾಧಿಕಾರಿಗಳು ಕೂಡಲೇ ಪ್ರಸ್ತಾವನೆ ಸಲ್ಲಿದರೆ ಬರುವ ದಿನಗಳಲ್ಲಿ ಅಗತ್ಯ ಅನುದಾನ ಹೊಂದಿಸಿ ಹೊಸ ಕಟ್ಟಡ ನಿರ್ಮಿಸಿ ಕೊಡಲಾಗುವುದು.

ಅಲ್ಲಿಯ ವರೆಗೆ ಮಳೆಗೆ ಕಟ್ಟಡ ಕಟ್ಟಡ ಸೋರಿಕೆ ಆಗದಂತೆ ದುರಸ್ತಿ ಮಾಡಿ ಕೊಡಲಾಗುವುದು ಎಂದು ಭರವಸೆ ನೀಡಿದರು.

ಜತೆಗೆ ತಾಲೂಕಿನಲ್ಲಿ ಮಳೆಗೆ ಸರಕಾರಿ ಶಾಲೆಗಳು ಕುಸಿತ ಆಗಿರುವುದು, ಸೋರಿಕೆ ಆಗುತ್ತಿರುವ ಕಟ್ಟಡಗಳ ಮಾಹಿತಿ ಕೊಡುವಂತೆ ಬಿಇಓಗೆ ಸೂಚಿಸಿದರು.


ವರದಿ: ನಂದಕುಮಾರ ಕರಂಜೆ, ಬೀದರ

- Advertisement -

LEAVE A REPLY

Please enter your comment!
Please enter your name here

- Advertisement -

Latest News

ಸಾಹಿತ್ಯ ಕ್ಷೇತ್ರದಲ್ಲಿ ರಶ್ಮಿಯಾಗಿ ಹೊಳೆದ ವಿ.ಕೃ.ಗೋಕಾಕ್!

ಬೇರೆಯವರ ಮೇಲೆ ಅವಲಂಬಿತವಾದ ಬದುಕು, ಸಾಧನೆ “ಮರವನ್ನು ಆಶ್ರಯಿಸಿ ಬೆಳೆದ ಬಳ್ಳಿಯಂತೆ” ಆಶ್ರಯ ತಪ್ಪಿದಾಗ ಅದು ನೆಲಕಚ್ಚುವುದು ಎಂದವರು ವಿನಾಯಕ ಕೃಷ್ಣ ಗೋಕಾಕ್ (ವಿ.ಕೃ.ಗೋಕಾಕ್). ಕನ್ನಡಕ್ಕೆ...
- Advertisement -

More Articles Like This

- Advertisement -
close
error: Content is protected !!