spot_img
spot_img

ಸಿಂದಗಿ ಬ್ಲಾಕ್  ಕಾಂಗ್ರೆಸ್  ಸಮಿತಿ ವತಿಯಿಂದ ಭಾರತ ಜೋಡೋ

Must Read

ಸಿಂದಗಿ: ಮತಕ್ಷೇತ್ರದಲ್ಲಿ 75 ನೇ ಸ್ವಾತಂತ್ರ್ಯ ಅಮೃತ ಮಹೋತ್ಸವದ ಪ್ರಯುಕ್ತ ಸಿಂದಗಿ ಮತ್ತು ಆಲಮೇಲ ಬ್ಲಾಕ್ ಕಾಂಗ್ರೆಸ್  ಸಮಿತಿಯಿಂದ  ಚಿಕ್ಕಸಿಂದಗಿ ಗ್ರಾಮದಿಂದ  ರಾಂಪೂರ ಗ್ರಾಮದವರಿಗೆ ಸ್ವತಂತ್ರ ಭಾರತ ಜೋಡೋ ಪಾದಯಾತ್ರೆಯನ್ನು  ಹಮ್ಮಿಕೊಳ್ಳಲಾಯಿತು.

ಈ ಸಂದರ್ಭದಲ್ಲಿ ಸಿಂದಗಿ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ  ವಿಠ್ಠಲ.ಜಿ.ಕೊಳ್ಳೂರ, ರಾಜ್ಯ ಕಿಸಾನ ಕಾಂಗ್ರೆಸ್ ಘಟಕದ ಉಪಾಧ್ಯಕ್ಷ ಮಹಿಬೂಬ ಆರ್ ತಾಂಬೊಳಿ ಮಾತನಾಡಿ, ನಮ್ಮ ದೇಶಕ್ಕೆ ಸ್ವತಂತ್ರ ಸಿಕ್ಕು 75 ವರ್ಷಗಳು ಗತಿಸಿವೆ ಭಾರತ ಜೋಡೋ ಎಂದರೆ ಇಡೀ ಅಖಂಡ ದೇಶದಲ್ಲಿ ಅನೇಕ ಧರ್ಮ, ಜಾತಿ, ಭಾಷೆ, ಎಲ್ಲರೂ ಒಂದಾಗಬೇಕು ಎನ್ನುವ ಸಂದೇಶ ಮೂಡಿಸುವ ನಿಟ್ಟಿನಲ್ಲಿ ಭಾರತ ಜೋಡೋ ಕಾರ್ಯಕ್ರಮ ಹಾಕಿಕೊಂಡಿದೆ ಆದರೆ ಕೆಲ ಮತೀಯರು ಧರ್ಮಗಳನ್ನು ಒಡೆಯುವ ಹುನ್ನಾರ ನಡೆಸುತ್ತಿವೆ ಅದಕ್ಕೆ ಎಲ್ಲ ಧರ್ಮಗಳನ್ನು ಕೂಡಿಸಬೇಕು ಎಂದು ರಾಹುಲಗಾಂಧಿ ಅವರು ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ 3500 ಕೀ 150 ದಿನಗಳವರೆಗೆ ಪಾದಯಾತ್ರೆ ಹಮ್ಮಿಕೊಂಡಿದ್ದಾರೆ ಅವರ ನಿರ್ದೇಶನದ ಮೇರೆಗೆ 10 ಕೀಮೀ ಪಾದಯಾತ್ರೆ ನಡೆಸಲಾಗಿದೆ ಎಂದರು.

ರಾಜಶೇಖರ ಕೂಚಬಾಳ ಮಾತನಾಡಿ, 130 ವರ್ಷಗಳ ಇತಿಹಾಸ ಹೊಂದಿದ ಕಾಂಗ್ರೆಸ್ ಪಕ್ಷ ಭಾರತದ ಸ್ವಾತಂತ್ರ್ಯಕ್ಕಾಗಿ ಹುಟ್ಟಿರತಕ್ಕ ಪಕ್ಷವಾಗಿದೆ ಯಾವುದೇ ಅಧಿಕಾರಕ್ಕಾಗಿ ಹುಟ್ಟದಂತ ಪಕ್ಷವಲ್ಲ. ತನು ಧನ ಹೋರಾಟ ದೇಶದ ಎಲ್ಲ ಸ್ವತಂತ್ರ ಹೋರಾಟಗಾರರ ತ್ಯಾಗ ಬಲಿದಾನದಿಂದ ಹುಟ್ಟಿದೆ ಸ್ವಾತಂತ್ರ್ಯ ತಂದುಕೊಟ್ಟ ಪಕ್ಷವಾಗಿದೆ ಸ್ವಾತಂತ್ರ ಸಂಗ್ರಾಮದಲ್ಲಿ ಹೋರಾಡಿದ ಮಹಾನ ನಾಯಕರನ್ನು ನೆನಪು ಮಾಡುವಂತ ಕಾರ್ಯಕ್ರಮವನ್ನು ರಾಹುಲಗಾಂಧಿ, ಡಿ.ಕೆ.ಶಿವಕುಮಾರ ಅವರ ನೇತೃತ್ವದಲ್ಲಿ ಇಡೀ ದೇಶ್ಯಾದ್ಯಂತ ಭಾರತ ಜೋಡೋ ಕಾರ್ಯಕ್ರಮ ಹಾಕಿಕೊಂಡಿದ್ದಾರೆ. ಈ ಕಾರ್ಯಕ್ರಮಕ್ಕೆ ಎಲ್ಲರೂ ಕೈ ಜೋಡಿಸಬೇಕಾಗಿದೆ ಎಂದರು.

ಮಾಜಿ ಶಾಸಕ ಶರಣಪ್ಪ ಸುಣಗಾರ, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ವಿದ್ಯಾ ರಾಣಿ ತುಂಗಳ,  ಆಲಮೇಲ ಬ್ಲಾಕ್ ಅಧ್ಯಕ್ಷ ಅಯುಬ್ ದೇವರಮನಿ, ಮಲಣ್ಣ ಸಾಲಿ, ಶಾರದಾ ಬೇಟಗೇರಿ, ಚಂದ್ರಕಾಂತ ಸಿಂಗೆ, ಎಸ್.ಕೆ.ಪೂಜಾರಿ ವಕೀಲರು, ಬಿ.ಸಿ.ಕೊಣ್ಣುರ ವಕೀಲರು, ರಾಮಚಂದ್ರ ರಾಠೋಡ, ಮಹಾದೇವ ರಾಠೋಡ, ಚಂದ್ರಕಾಂತ ಬೂದಿಹಾಳ, ಹಾಗೂ ಮುಂತಾದ ಕಾಂಗ್ರೆಸ್ ನಾಯಕರು, ಕಾರ್ಯಾಕರ್ತರು ಸೇರಿದಂತೆ ಅನೇಕರಿದ್ದರು.

ತಾಲೂಕಿನ ಚಿಕ್ಕ ಸಿಂದಗಿಯ ಬೈಪಾಸ್ ಹತ್ತಿರ ಬ್ಲಾಕ್ ಕಾಂಗ್ರೆಸ್ ಕಮಿಟಿ ವತಿಯಿಂದ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ನಿಮಿತ್ಯ “ಭಾರತ್ ಜೋಡೋ” ಹಮ್ಮಿಕೊಂಡ ಪಾದಯಾತ್ರೆಯನ್ನು  ಪ್ರಾರಂಭಗೊಂಡು ರಾಂಪುರದ ನಿತ್ಯಾನಂದ ಆಶ್ರಮದ ಆರೂಢ ಮಠದವರೆಗೆ ಸಾಗಿ ಅಲ್ಲಿ ಸಮಾವೇಶಗೊಂಡಿತು.

- Advertisement -
- Advertisement -

Latest News

ವಿಶೇಷ ಅಗತ್ಯತೆಯುಳ್ಳ ಮಕ್ಕಳ ವೈದ್ಯಕೀಯ ಮೌಲ್ಯಾಂಕನ ಶಿಬಿರ

ಯರಗಟ್ಟಿಃ ಇಲ್ಲಿನ ಸರಕಾರಿ ಹಿರಿಯ ಪ್ರಾಥಮಿಕ ಮಾದರಿ ಶಾಲೆಯಲ್ಲಿ ೨೦೨೨-೨೩ ನೇ ಸಾಲಿನ ಯರಗಟ್ಟಿ ಹಾಗೂ ಮುರಗೋಡ ವಲಯಗಳ ವಿಕಲಚೇತನ ಮಕ್ಕಳ ಮೌಲಾಂಕನ ಶಿಬಿರ ಜರುಗಿತು. ಕಾರ‍್ಯಕ್ರಮದ...
- Advertisement -

More Articles Like This

- Advertisement -
close
error: Content is protected !!