spot_img
spot_img

ಆಗಸ್ಟ್ 20ರಂದು ದರ್ಶನ್  ಕೆ ಟಿ ರವರ ಭರತನಾಟ್ಯ ರಂಗಪ್ರವೇಶ

Must Read

spot_img

ಸಾಯಿ ಆರ್ಟ್ಸ್  ಇಂಟರ್ನ್ಯಾಷನಲ್ ಆಯೋಜಿಸಿರುವ ಯುವ ಕಲಾವಿದ ದರ್ಶನ್ ಕೆ ಟಿ ರವರ ಭರತನಾಟ್ಯ ರಂಗಪ್ರವೇಶ ಶನಿವಾರ ಆಗಸ್ಟ್ 20 ಸಂಜೆ ಐದು ಮೂವತ್ತಕ್ಕೆ ನಗರದ ವೈಯಾಲಿಕಾವಲ್ ಚೌಡಯ್ಯ ಮೆಮೋರಿಯಲ್ ಹಾಲ್ ಹಿಂಬದಿಯ ತೆಲುಗು ವಿಜ್ಞಾನ ಸಮಿತಿ ಸಭಾಂಗಣದಲ್ಲಿ ನಡೆಯಲಿದೆ.

ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಇಂಡಿಯನ್ ಕೌನ್ಸಿಲ್ ಫಾರ್ ಕಲ್ಚರಲ್ ರಿಲೇಶನ್ಸ್ ಹಿರಿಯ ಪ್ರಾದೇಶಿಕ ನಿರ್ದೇಶಕ ಸುನಿಲ್ ಕುಮಾರ್ ಸಿಂಗ್ , ಸುರತ್ಕಲ್ ನಾಟ್ಯಾಂಜಲಿ ಕಲಾ ಅಕಾಡೆಮಿಯ ನಿರ್ದೇಶಕ ವಿದ್ವಾನ್ ಚಂದ್ರಶೇಖರ ನಾವಡ ,ಸುಬ್ರಹ್ಮಣ್ಯನಗರದ ಮಾಜಿ ಕಾರ್ಪೊರೇಟರ್ ಹೆಚ್.ಮಂಜುನಾಥ್ ಆಗಮಿಸುವರು.

ಗುರು ವಿದುಷಿ ಡಾ. ಸುಪರ್ಣ ವೆಂಕಟೇಶ್ ರವರ ಶಿಷ್ಯನಾಗಿ ಸಣ್ಣ ವಯಸ್ಸಿನಲ್ಲಿಯೇ ನೃತ್ಯಾಭ್ಯಾಸ ಆರಂಭಿಸಿ ಇದೀಗ ರಂಗಪ್ರವೇಶ ಮಾಡುತ್ತಿರುವ ಶ್ರೀಮತಿ ಲಕ್ಷ್ಮಿ ಮತ್ತು ಕೆ. ತಾರಕ ರಾಮುಡು ರವರ ಪುತ್ರ ದರ್ಶನ್ ಬಿಸಿಎ ವಿದ್ಯಾರ್ಥಿ. ಅವರ ತಂದೆ ದೃಷ್ಠಿಹೀನರಾಗಿದ್ದರು ಕೂಡ ಭರತನಾಟ್ಯ ಕಲಾವಿದರು .ದರ್ಶನ್ ಕೇವಲ ಭರತನಾಟ್ಯ ಬಲ್ಲದೆ ಶಾಸ್ತ್ರೀಯ ಸಂಗೀತ ಮತ್ತು ಚಿತ್ರಕಲೆಯನ್ನು ಅಭ್ಯಾಸ ಮಾಡುತ್ತಿರುವ ಬಹುಮುಖ ಪ್ರತಿಭಾವಂತ ಈ ಕಲಾವಿದ ಹಲವಾರು ವೇದಿಕೆಗಳಲ್ಲಿ ನೃತ್ಯ ಪ್ರದರ್ಶನವನ್ನು ನೀಡಿದ್ದಾರೆ .ಭರತನಾಟ್ಯ ಜೂನಿಯರ್ ಮತ್ತು ಸೀನಿಯರ್ ಪರೀಕ್ಷೆಯಲ್ಲಿ ತೇರ್ಗಡೆ ,ಕಥಕ್ ನಲ್ಲೂ ಆಸಕ್ತಿ ಹೊಂದಿದ್ದಾರೆ.

ನಟುವಾಂಗದಲ್ಲಿ ಕರ್ನಾಟಕ ಕಲಾಶ್ರೀ ಡಾ. ಸುಪರ್ಣ ವೆಂಕಟೇಶ್, ಗಾಯನದಲ್ಲಿ ವಿದ್ವಾನ್ ರೋಹಿತ್ ಭಟ್ ಉಪ್ಪೂರ್, ಮೃದಂಗದಲ್ಲಿ ವಿದ್ವಾನ್ ಹರ್ಷ ಸಾಮಗ , ಕೊಳಲು ವಿದ್ವಾನ್ ಜಯರಾಮ್ ಕಿಕ್ಕೇರಿ , ವಯೋಲಿನ್ ವಿದ್ವಾನ್ ಪ್ರಾದೇಶ ಆಚಾರ್ಯ, ಖಂಜಿರದಲ್ಲಿ ವಿದ್ವಾನ್ ಪ್ರಸನ್ನಕುಮಾರ್ ಸಹಕಾರ ನೀಡಿ ಕಲಾ ರಸಿಕರ ಮನತಣಿಸಲಿದ್ದಾರೆ.

- Advertisement -
- Advertisement -

Latest News

ಪಂಚಮಸಾಲಿ ಸಮಾಜದ ಹೋರಾಟಕ್ಕೆ ಬೆಂಬಲ ಘೋಷಿಸಿದ ಶಾಸಕ ಹಾಗೂ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ

ಕೂಡಲ ಸಂಗಮ ಜಯ ಮೃತ್ಯುಂಜಯ ಸ್ವಾಮಿಗಳ ಜೊತೆ ದೂರವಾಣಿ ಮೂಲಕ ಮಾತನಾಡಿ ಹೋರಾಟಕ್ಕೆ ಸಹಕಾರ ಘೋಷಣೆ ಮೂಡಲಗಿ: ಕೂಡಲಸಂಗಮ ಜಯ ಮೃತ್ಯುಂಜಯ ಸ್ವಾಮಿಗಳ ನೇತೃತ್ವದಲ್ಲಿ ಪಂಚಮಸಾಲಿ ಸಮಾಜಕ್ಕೆ...
- Advertisement -

More Articles Like This

- Advertisement -
close
error: Content is protected !!