- Advertisement -
ಮೈಸೂರಿನ ಶಾರದಾದೇವಿನಗರದ ರಾಯರ ಆರಾಧಕ ಹಾಗೂ ಆಚಾರ್ಯರಾದ ಶ್ರೀನಿವಾಸ ಮೂರ್ತಿ ಹಾಗೂ ಶ್ರೀಮತಿ ಅನುರಾಧ ಶ್ರೀನಿವಾಸ ಮೂರ್ತಿಯವರನ್ನು ಸಾಮಾಜಿಕ ಹಾಗೂ ಧಾರ್ಮಿಕ ಕ್ಷೇತ್ರದಲ್ಲಿ ಸಾಧನೆಗೈದು ಸೇವೆ ಸಲ್ಲಿಸಿ, ೭೦ ವರ್ಷಗಳು ಪೂರೈಸಿದ ಹಿನ್ನೆಲೆಯಲ್ಲಿ ಭೀಮರಥ ಶಾಂತಿಯನ್ನು ಅವರ ಅಭಿಮಾನಿಗಳು ಇಂದು ತೊಣಚಿಕೊಪ್ಪಲಿನ ರಾಯರ ಮಠದಲ್ಲಿ ಏರ್ಪಡಿಸಿ, ಸನ್ಮಾನಿಸಿ, ಗೌರವಿಸಿದರು.
ಸ್ನೇಹ ಬಳಗದ ಗೌರವ ಅಧ್ಯಕ್ಷರಾದ ನಿವೃತ್ತ ಮುಖ್ಯ ಶಿಕ್ಷಕ ಡಿ.ಎಸ್.ವೆಂಕಟೇಶಮೂರ್ತಿ, ಶ್ರೀಮತಿ ಪದ್ಮಾ ವೆಂಕಟೇಶ್, ಯಲಹಂಕ ಸತ್ಯನಾರಾಯಣರಾವ್, ಎನ್.ಕೃಷ್ಣಮೂರ್ತಿ, ಶ್ರೀಮತಿ ಸುಖನ್ಯ, ಗಾಯಕಿಯರಾದ ಶ್ರೀಮತಿ ಬಿಂದು ಎಸ್.ಮೂರ್ತಿ, ವಿಭಾ ಎಸ್.ಮೂರ್ತಿ, ಶ್ರೀಮತಿ ನಾಗವೇಣಿ ಭಾಗನೂರು, ಶ್ರೀಮತಿ ಉಷಾರಾಣಿ, ಭಾಗ್ಯಮ್ಮ, ಮಂಡ್ಯ ಗುಂಡುರಾವ್, ಬೇಬಿ, ಆಚಾರ್ಯರಾದ ಶ್ರೀಹರಿ, ಸರ್ವೋತ್ತಮ್ ಉಪಸ್ಥಿತರಿದ್ದರು.