ರೈತರ ಹೊಲಗಳ ರಸ್ತೆ ಅವಶ್ಯಕತೆ ಇದೆ – ರಮೇಶ ಭೂಸನೂರ
ಸಿಂದಗಿ: ರೈತರು ನಿತ್ಯ ಸಂಚರಿಸುವ ಹೊಲಗಳ ರಸ್ತೆ ಹಾಗೂ ಬೆಳೆದ ಬೆಳೆಗಳನ್ನು ಸಾಗಿಸುವ ರಸ್ತೆಗಳ ಸುಧಾರಣೆ ಅಗತ್ಯವಿದೆ ಎಂದು ಶಾಸಕ ರಮೇಶ ಭೂಸನೂರ ಹೇಳಿದರು.
ತಾಲೂಕಿನ ಕುರುಬತಹಳ್ಳಿ ಗ್ರಾಮದಿಂದ ತಾವರಖೇಡ ರಸ್ತೆಯ ಹಳ್ಳಕ್ಕೆ ಕರ್ನಾಟಕ ನೀರಾವರಿ ನಿಗಮ ನಿಯಮಿತ ಯೋಜನೆ ಅಡಿಯಲ್ಲಿ, ರೂ.178 ಲಕ್ಷ ಗಳಲ್ಲಿ ಸೇತುವೆ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿ, ಗ್ರಾಮೀಣ ಭಾಗದ ಜನರಿಗೆ ಹೊಲಗಳಿಗೆ ಹೋಗುವ ರಸ್ತೆಯ, ಕಿರು ಸೇತುವೆಯ ಅವಶ್ಯಕತೆಗಳನ್ನು ಮನಗಂಡು ದೊರೆತಿರುವ ಅಲ್ಪ ಅವಧಿಯಲ್ಲಿ ಜನರ ತುರ್ತು ಅವಶ್ಯಕ ಕಾರ್ಯಗಳನ್ನು ಮಾಡಲಾಗುತ್ತಿದೆ ಇವುಗಳು ಸುಧಾರಣೆಯಾದರೆ ಮಾತ್ರ ಕಬ್ಬು ಸೇರಿದಂತೆ ರೈತರ ಸರಕುಗಳನ್ನು ಸರಬರಾಜು ಮಾಡಲು ಅನುಕೂಲವಾಗುವುದು ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಕಾರ್ಯ ಮಾಡುವುದಾಗಿ ಹೇಳಿದರು.
ಈ ಸಂದರ್ಭದಲ್ಲಿ ವಿಜುಗೌಡ ಪಾಟೀಲ, ಬಸವರಾಜ ತಾವರಖೇಡ, ಬಾಬುಗೌಡ ಪಾಟೀಲ, ಗಾಂಧೀಗೌಡ ಪಾಟೀಲ, ಧರ್ಮರಾಯಗೌಡ ಪಾಟೀಲ, ಬಸುಗೌಡ ಪಾಟೀಲ, ದೇವಪ್ಪ ಗುಣಾರಿ, ಉಮರ ಬಿಳವಾರ, ಸಂತೋಷಕುಮಾರ ಬಗಲಿ, ಮಲಕಣ್ಣ ಬಳೂಂಡಗಿ, ಬಾಷಾಸಾಬ ವಸ್ತಾದ, ಚಂದ್ರಾಮ ಸಾಲೋಟಗಿ, ಶಿವಪುತ್ರಗೌಡ ಪಾಟೀಲ ಇದ್ದರು.