spot_img
spot_img

ಸಿದ್ದಾರೂಢ ಸಾಂಸ್ಕೃತಿಕ ಭವನ ನಿರ್ಮಾಣಕ್ಕೆ ಭೂಮಿ ಪೂಜೆ ನೇರವೇರಿಸಿದ- ಸಂಸದ ಈರಣ್ಣ ಕಡಾಡಿ

Must Read

- Advertisement -

ಮೂಡಲಗಿ: ಸಿದ್ದಾರೂಢರು ಅದೈತ ತತ್ವದ ಪ್ರತಿಪಾದಕರಾಗಿದ್ದರು, ಸಿದ್ದಾರೂಢರಿಗೆ ಯಾವುದೇ ಜಾತಿ-ಮತ ಭೇದವಿಲ್ಲ, ಎಲ್ಲಾ ಸಮುದಾಯದ ಜನರು ಸಿದ್ದಾರೂಢರ ಅನುಯಾಯಿಗಳಿದ್ದಾರೆ. ಹೀಗಾಗಿ ಬೀರನಗಡ್ಡಿಯ ಸಿದ್ದಾರೂಢ ಸಾಂಸ್ಕೃತಿಕ ಭವನವನ್ನು ಗ್ರಾಮದ ಎಲ್ಲ ಜನರು ಸದುಪಯೋಗ ಪಡಿಸಿಕೊಳ್ಳಬೇಕೆಂದು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಹೇಳಿದರು.

ರವಿವಾರ ಫೆ-13 ರಂದು 2020-21ನೇ ಸಾಲಿನ ಸಂಸದರ ಪ್ರದೇಶಾಭಿವೃದ್ಧಿ ಯೋಜನೆಯಡಿ ಗೋಕಾಕ ತಾಲೂಕಿನ ಬೀರನಗಡ್ಡಿ ಗ್ರಾಮದಲ್ಲಿ ಸಿದ್ದಾರೂಢ ಸಾಂಸ್ಕೃತಿಕ ಭವನ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೇರವೇರಿಸಿ ಮಾತನಾಡಿದ ಸಂಸದ ಈರಣ್ಣ ಕಡಾಡಿ ಅವರು, ಬೀರನಗಡ್ಡಿ ಗ್ರಾಮವು ನನ್ನ ಹಳೆ ಜಿಲ್ಲಾ ಪಂಚಾಯತ ವ್ಯಾಪ್ತಿಯ ಗ್ರಾಮವಾಗಿದ್ದು, ಇಲ್ಲಿಯ ಜನರ ಬೆಂಬಲ, ಸಹಕಾರ ನನ್ನ ಜಯಕ್ಕೆ ಕಾರಣವಾಗಿತ್ತು. ಸಂಸದನಾದ ನಂತರ ಮೊದಲ ಅನುದಾನವನ್ನು ಬೀರನಗಡ್ಡಿ ಗ್ರಾಮದ ಅಭಿವೃದ್ಧಿ ಕೆಲಸಕ್ಕೆ ವಿನಿಯೋಗಿಸುತ್ತಿರುವುದು ಹರ್ಷವೆನಿಸುತ್ತದೆ ಎಂದರು.

- Advertisement -

ಇದೇ ಸಂದರ್ಭದಲ್ಲಿ ಗ್ರಾಮದಿಂದ ಬಸವೇಶ್ವರ ದೇವಸ್ಥಾನದವರೆಗೆ ರಸ್ತೆ ನಿರ್ಮಾಣ ಕಾಮಗಾರಿಗೆ ಪೂಜೆ ನೆರವೇರಿಸಿ ಮಾತನಾಡಿದ ಸಂಸದ ಈರಣ್ಣ ಕಡಾಡಿ ಅವರು, 12 ನೇ ಶತಮಾನದಲ್ಲಿಯೇ ಕಾಯಕ, ಪ್ರಸಾದ, ದಾಸೋಹ ತತ್ವಗಳನ್ನು ಸಾರಿದ ಹಾಗೂ ಅನುಭವ ಮಂಟಪದ ಮೂಲಕ ಜಾತ್ಯತೀತ ಪ್ರಜಾಪ್ರಭುತ್ವ ವ್ಯವಸ್ಥೆಗೆ ಅಡಿಪಾಯ ಹಾಕಿದ ವಿಶ್ವಗುರು ಬಸವಣ್ಣ ಜಗತ್ತಿಗೆ ಆದರ್ಶಪ್ರಾಯವಾಗಿದ್ದಾರೆ. ಅಂತಹ ಜಗಜ್ಯೋತಿ ಬಸವೇಶ್ವರ ದೇವಸ್ಥಾನಕ್ಕೆ ಹೋಗುವ ಭಕ್ತಾದಿಗಳ ಸುಗಮ ಸಂಚಾರಕ್ಕೆ ಅನುಕೂಲವಾಗುವ ದೃಷ್ಟಿಯಿಂದ ಬೆಳಗಾವಿ ಕಾಡಾ ಇಲಾಖೆ ಅನುದಾನದಡಿ ಈ ರಸ್ತೆಯನ್ನು ನಿರ್ಮಿಸಲಾಗುತ್ತಿದೆ ಎಂದರು.

ಗ್ರಾಮ ಪಂಚಾಯತ ಸದಸ್ಯರಾದ ಬಸಗೌಡ ಕೋಟಗಿ, ಬಸವರಾಜ ಕುರಿ, ಲಕ್ಕಪ್ಪಾ ಕುರಿ, ಸುನೀಲ ಈರೇಶನವರ, ಪ್ರಮುಖರಾದ ಗೌಡಪ್ಪ ಕೋಟಗಿ, ಅಲ್ಲಯ್ಯ ಪೂಜೇರಿ, ಶಂಕರ, ಮುದ್ಯಾಪಗೋಳ, ಕಲ್ಲಪ್ಪ ಪಾಗಾದ, ಭೀಮಶೆಪ್ಪ ಕಡೆಪ್ಪಗೋಳ, ರಮೇಶ ಸಂಪಗಾಂವ, ಬಸಲಿಂಗಯ್ಯ ಪೂಜೇರಿ, ನಾಗೇಂದ್ರ ಕುದರಿ, ಬಸಲಿಂಗ ಭರಮಣ್ಣವರ, ನಿರ್ಮಿತಿ ಕೇಂದ್ರ ಬೆಳಗಾವಿ ಅಭಿಯಂತರ ರವಿಕಿರಣ ಪಾಟೀಲ, ಗುತ್ತಿಗೆದಾರರಾದ ಮಹಾಂತೇಶ ಬಿ.ಪಾಟೀಲ. ಈರಣ್ಣ ಮುನ್ನೋಳಿಮಠ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.

- Advertisement -
- Advertisement -

Latest News

ಸ್ವಾಮಿ ವಿವೇಕಾನಂದರ ಬೆಳಗಾವಿ ಭೇಟಿಯ ಸ್ಮಾರಕ ಭವನ

ಬೆಳಗಾವಿ- ಭಾರತದ ಶೂರ ಸನ್ಯಾಸಿ ಸ್ವಾಮಿ ವಿವೇಕಾನಂದ ಅವರು ಸನ್ ೧೮೯೨ ರಲ್ಲಿ ಕರ್ನಾಟಕದ ಬೆಳಗಾವಿಗೆ ಭೇಟಿ ಕೊಟ್ಟು ಅಕ್ಟೋಬರ್ ೧೬ ರಿಂದ ೨೭ ರ...
- Advertisement -

More Articles Like This

- Advertisement -
close
error: Content is protected !!
Join WhatsApp Group