spot_img
spot_img

ಬೆಳ್ಳಿ ತೆರೆಗೆ ಬಂದ ಭೂಮಿಕಾ

Must Read

- Advertisement -

ಬೆಳ್ಳಿತೆರೆ ಅಂದರೆ ಅದೊಂದು ಕಲಾವಿದರ ದೊಡ್ಡ ಸಮುದ್ರ ಅದರಲ್ಲಿ ಗುರುತಿಸಿಕೊಳ್ಳುವುದು ಅಂದರೆ ಸಾಮಾನ್ಯದ ವಿಷಯವಲ್ಲ. ಅಂತ ಸಮುದ್ರದಲ್ಲಿ ಈಜಿ ಇಂದು ದೊಡ್ಡಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ ಈ ಪ್ರತಿಭೆ ಭೂಮಿಕಾ.

ಭೂಮಿಕಾ ಮೂಲತಃ ರಾಜ್ಯದ ರಾಜಧಾನಿ ಬೆಂಗಳೂರಿನವರು. ಬೆಂಗಳೂರಿನಲ್ಲಿ ಜನಿಸಿದ ಇವರು ವಿದ್ಯಾಭ್ಯಾಸ ಎಲ್ಲಾ ಬೆಂಗಳೂರಿನಲ್ಲಿ ಮುಗಿಸಿದ್ದಾರೆ. ತಂದೆ ಮಂಜುನಾಥ, ತಾಯಿ ಪದ್ಮಾ.

ಭೂಮಿಕಾ ಚಿಕ್ಕಂದಿನಿಂದಲೂ ಪತ್ರಕರ್ತೆ ಆಗಬೇಕು ಎಂಬುದು ಅವರ ಕನಸಾಗಿತ್ತು. ಹೀಗಾಗಿ ಭೂಮಿಕಾ ಜರ್ನಲಿಸಂ ಮಾಸ್ ಕಮ್ಯುನಿಕೆಷನ್ ವ್ಯಾಸಂಗ ಮುಗಿಸಿದ್ದಾರೆ.

- Advertisement -

ಐದನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವಾಗ ಭೂಮಿಕಾ ಶಿಕ್ಷಕರು ಅಭಿನಯ ಮಾಡಲು ಅವಕಾಶ ಕಲ್ಪಿಸಿಕೊಡುತ್ತಾರೆ. ಆದರೆ ಇವರಿಗೆ ಆ ಸಮಯದಲ್ಲಿ ಅಭಿನಯಿಸಲು ಆಸಕ್ತಿ ಇರುವುದಿಲ್ಲ. ಕೊನೆಗೆ ಅಭಿನಯಿಸುತ್ತಾರೆ. ನಂತರ “ಕಲಾವಿಲಾಸಿ” ರಂಗಭೂಮಿ ತಂಡಕ್ಕೆ ಸೇರಿ ಅಭಿನಯ ಅಚ್ಚುಕಟ್ಟಾಗಿ ಕಲಿತು ಬೆಂಗಳೂರು ನಗರದಲ್ಲಿ ಕೆಲವೊಂದಿಷ್ಟು ಕಾರ್ಯಕ್ರಮದಲ್ಲಿ ಇವರು ಅಭಿನಯಿಸುತ್ತಾರೆ.

ಜೀವನದಲ್ಲಿ ಪತ್ರಕರ್ತೆ ಆಗಬೇಕು ಅಂತ ಅಂದುಕೊಂಡ ಸಮಯದಲ್ಲಿ ಭೂಮಿಕಾ ಹಿರೋಯಿನ್ ಆಗ್ತಾರೆ ಅಂತ ಅಂದುಕೊಂಡಿರಲಿಲ್ಲ ಆದರೆ ಅವಕಾಶಗಳು ಹುಡುಕಿಕೊಂಡು ಬಂದಾಗ ಅವರು ಅಭಿನಯಿಸಿದರು. ನಂತರ ಚಿತ್ರರಂಗದಲ್ಲಿ ಸಾಲು ಸಾಲಾಗಿ ಸಿನಿಮಾಗಳಲ್ಲಿ ಅಭಿನಯಿಸಿ ಇಂದು ರಾಜ್ಯಾದ್ಯಂತ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಗುರುತಿಸಿಕೊಂಡಿರುವ ಕೀರ್ತಿ ಭೂಮಿಕಾಗೆ ಸಲ್ಲುತ್ತದೆ.

ಸುಮಾರು 80 ಕೆಜಿ ತೂಕ ಇರುವ ಸಂದರ್ಭದಲ್ಲಿ ಫಿಟ್ನೆಸ್ ಕ್ಲಾಸ್ ಗೆ ಹೋಗಿ ಇಂದು 50 ಕೆಜಿ ತೂಕ ಆಗಿದ್ದಾರೆ ಭೂಮಿಕಾ. ಭೂಮಿಕಾ ಬರಿ ಚಿತ್ರ ನಟಿ ಅಲ್ಲದೆ ಫಿಟ್ನೆಸ್ ಇನ್ಫುಲೆನ್ಸರ್, ಮಾಡೆಲಿಂಗ್ ಕ್ಷೇತ್ರದಲ್ಲಿ ಕೂಡ ಗುರುತಿಸಿಕೊಂಡಿದ್ದಾರೆ.

- Advertisement -

ಸುಮಾರು 08 ಕಿರುಚಿತ್ರಗಳು, 01 ಟೆಲಿಫೀಲಂ, 02 ಆಲ್ಬಂ ಸಾಂಗ್, ಒಂದು ಓಟಿಟಿ ಪ್ಲಾಟ್ ಫಾರಂನಲ್ಲಿ ಬಿಡುಗಡೆಯಾಗುತ್ತಿರುವ ಸಿನಿಮಾದಲ್ಲಿ ನಾಯಕಿ ನಟಿಯಾಗಿ ಅಭಿನಯಿಸಿದ್ದಾರೆ.

ಇತ್ತಿಚೆಗೆ ನಿಂಗರಾಜ ಸಿಂಗಾಡಿ ತಂಡದ ಇದೆಂತಾ ಪ್ರೀತಿ ಕಿರುಚಿತ್ರದಲ್ಲಿ ನಾಯಕಿ ನಟಿಯಾಗಿ ಅಭಿನಯಿಸಿ ಉತ್ತರ ಕರ್ನಾಟಕದ ಜನರ ಗಮನ ಸೆಳೆದಿದ್ದಾರೆ. ಇವರ ಅಭಿನಯಕ್ಕೆ ಜನ ಫುಲ್ ಫಿದಾ ಆಗಿದ್ದಾರೆ.
ಜೀವನದಲ್ಲಿ ಸುಮ್ಮನೆ ಕುಳಿತುಕೊಳ್ಳಬಾರದು ಏನಾದರೂ ಸಾಧನೆ ಮಾಡಬೇಕೆಂಬ ಛಲದಿಂದ ಇಲ್ಲಿಯವರೆಗೆ ಸಿನಿಮಾ ಜರ್ನಿಯ ಯಶಸ್ವಿ ನಟಿಯರ ಸಾಲಿನಲ್ಲಿ ಭೂಮಿಕಾ ಕೂಡ ಮೊದಲ ಸಾಲಿನಲ್ಲಿ ನಿಲ್ಲುತ್ತಾರೆ.

ಇಷ್ಟೆಲ್ಲಾ ಪ್ರತಿಭೆ ಹೊಂದಿರುವ ನಟಿ ಭೂಮಿಕಾ ರಾಜ್ಯ ರಾಷ್ಟ್ರ ಮಟ್ಟದಲ್ಲಿ ಯಶಸ್ವಿಯಾಗಲಿ ಎಂದು ನಮ್ಮ ಪತ್ರಿಕೆ ಬಳಗದಿಂದ ಶುಭ ಹಾರೈಕೆಗಳು.


ವಿಶ್ವಪ್ರಕಾಶ ಮಲಗೊಂಡ
vishwaprakashmalagond@gmail.com
M No : 9964028644

- Advertisement -
- Advertisement -

Latest News

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಧಾರವಾಡ ಪ್ರಾದೇಶಿಕ ವಿಭಾಗಕ್ಕೆ ನಿರ್ದೇಶಕರಾಗಿ ಶ್ರೀಮತಿ ದಯಾಶೀಲ 

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಧಾರವಾಡ ಪ್ರಾದೇಶಿಕ ವಿಭಾಗಕ್ಕೆ ಬೆಳ್ತಂಗಡಿ ಮೂಲದ ಶ್ರೀಮತಿ ದಯಾಶೀಲರವರು ಧರ್ಮಸ್ಥಳದ ಪೂಜ್ಯ ವೀರೇಂದ್ರ ಹೆಗಡೆಯವರ ಆಶೀರ್ವಾದದೊಂದಿಗೆ ಯೋಜನೆಯ ಮುಖ್ಯ...
- Advertisement -

More Articles Like This

- Advertisement -
close
error: Content is protected !!
Join WhatsApp Group