spot_img
spot_img

ಬಮ್ಮನಹಳ್ಳಿ – ಆಲಮೇಲ ರಸ್ತೆಗೆ ಭೂಮಿಪೂಜೆ

Must Read

ಸಿಂದಗಿ: ರಾಜಕಾರಣದಲ್ಲಿ ಬದ್ದತೆ ಎನ್ನುವುದು ಬೇಕು ಅಂದಾಗ ಮತದಾರರ ರಾಜಕಾರಣಿಗಳ ಕೈ ಹಿಡಿಯುತ್ತಾನೆ. ರೈತರಿಗೆ ತಿರುಗಾಡಲು ಅಚ್ಚುಕಟ್ಟು ರಸ್ತೆ ಆಗಬೇಕು ಎನ್ನುವ ಬೇಡಿಕೆಯನ್ನು ಉಪಚುನಾವಣೆಯಲ್ಲಿ ಇಟ್ಟಿದ್ದರು ಮತದಾರರಿಗೆ ಕೊಟ್ಟ ಮಾತಿನಂತೆ ಸರಕಾರ ಬದ್ಧವಿದೆ ರೂ 4.33 ಕೋಟಿ ರೂ.ವೆಚ್ಚದಲ್ಲಿ ಬಮ್ಮನಹಳ್ಳಿಯಿಂದ ಆಲಮೇಲಕ್ಕೆ ತೆರಳುವ ರಸ್ತೆ ಮಾರ್ಗದಲ್ಲಿ ಸುಮಾರು 5 ರಿಂದ 7 ಕಿಮಿ ರಸ್ತೆ ಸಂಚಾರ ಕಡಿಮೆಯಾಗುವುದು ಇದು ಪ್ರಯಾಣಿಕರ ಸಮಯ ಮತ್ತು ವೆಚ್ಚವನ್ನು ಉಳಿಸುತ್ತದೆ  ಆ ಕಾರಣಕ್ಕೆ ಈ ರಸ್ತೆ ನಿರ್ಮಿಸಲಾಗುತ್ತಿದೆ ಎಂದು ಶಾಸಕ ರಮೇಶ ಭೂಸನೂರ ಹೇಳಿದರು.

ತಾಲೂಕಿನ ಬಮ್ಮನಹಳ್ಳಿ ಗ್ರಾಮದಲ್ಲಿ ನಡೆದ ಬಮ್ಮನಹಳ್ಳಿ ಆಲಮೇಲ ರಸ್ತೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿ,  ನಮ್ಮ ಸರಕಾರದ 16 ತಿಂಗಳ ಅವಧಿಯಲ್ಲಿ ಸಮಯಕ್ಕನುಸಾರ ಅತೀ ಹೆಚ್ಚು ಕಾರ್ಯ ಪ್ರವೃತ್ತರಾಗುತ್ತೇನೆ ಅಲ್ಲದೆ ಇಲ್ಲಿನ ಸರಕಾರಿ ಪ್ರೌಢಶಾಲೆಗೆ ಕಟ್ಟಡದ ಕೊರತೆ ಇದೆ ಗ್ರಾಮಸ್ಥರು ಜಾಗ ನೀಡಿ ಸಹಕರಿಸಿದರೆ ಅದರ ಕಟ್ಟಡ ನಿರ್ಮಿಸಲು ಸರಕಾರದಿಂದ ಹಣ ಮಂಜೂರು ಮಾಡಿಸಿ ಸುಸಜ್ಜಿತ ಕಟ್ಟಡ ನಿರ್ಮಿಸುವುದಾಗಿ ಭರವಸೆ ನೀಡಿದರು.

ಮುಖಂಡ ಬಿ.ಎಚ್.ಬಿರಾದಾರ ಮಾತನಾಡಿ, ಚುನಾವಣೆಯಲ್ಲಿ ನೀಡಿದ ಭರವಸೆಗಳಂತೆ ಪ್ರತಿ ಗ್ರಾಮಗಳ ರಸ್ತೆ ಸುಧಾರಣೆಗೆ ಶಾಸಕರು ಕ್ರಮ ಕೈಗೊಂಡಿದ್ದಾರೆ ರೈತರು, ಸಾರ್ವಜನಿಕರು ಗುತ್ತಿಗೆದಾರರೊಂದಿಗೆ ಸಹಕಾರ ನೀಡಬೇಕು, ಗುತ್ತಿಗೆದಾರರು ರಸ್ತೆಯ ಗುಣಮಟ್ಟ ಉತ್ತಮವಾಗಿರುವಂತೆ ನೋಡಿಕೊಳ್ಳಬೇಕು ಎಂದರು.

ವೇ.ಸಂಗಯ್ಯ ಹಿರೇಮಠ, ಚಂದ್ರಕಾಂತ ಸಗರ, ಸಿದ್ದು ಸಗರ, ಬಲವಂತ್ರಾಯಗೌಡ ಬಿರಾದಾರ, ಬಸವರಾಜ ಬಿರಾದಾರ, ರವಿಕಾಂತ ನಾಯ್ಕೋಡಿ, ಗುರುಪಾದಪ್ಪ ಭಾಸಗಿ, ಆರ್.ಎನ್.ಕುಲಕರ್ಣಿ, ತಾರಾಸಿಂಗ ದೊಡ್ಡಮನಿ, ರಾಜಕುಮಾರ ಬಿರಾದಾರ ಸೇರಿದಂತೆ ಅನೇಕರಿದ್ದರು.

- Advertisement -

LEAVE A REPLY

Please enter your comment!
Please enter your name here

- Advertisement -

Latest News

ವಿರಾಟಪುರ ವಿರಾಗಿ ಚಿತ್ರದ ವಾಲ್ ಪೋಸ್ಟರ್ ಬಿಡುಗಡೆ

ಸಿಂದಗಿ: ಹಾನಗಲ್ಲ ಗುರುಕುಮಾರ ಮಹಾಸ್ವಾಮಿಗಳವರ ಉಸಿರೇ ಸಮಾಜವಾಗಿತ್ತು ತಮ್ಮ ಬಗ್ಗೆ ಕಿಂಚಿತ್ತೂ ವಿಚಾರ ಮಾಡಿದವರಲ್ಲ ಎಂದು ಡಾ. ಪ್ರಭುಸಾರಂಗದೇವ ಶಿವಾಚಾರ್ಯರು ಹೇಳಿದರು. ಪಟ್ಟಣದ ಸಾರಂಗಮಠದಲ್ಲಿ ಹಾನಗಲ್ಲ ಶ್ರೀ...
- Advertisement -

More Articles Like This

- Advertisement -
close
error: Content is protected !!