spot_img
spot_img

ಕರುನಾಡಿನ (ದೇವಿ) ತಾಯಿ ಭುವನೇಶ್ವರಿ

Must Read

spot_img
- Advertisement -

ಭಾರತ ಮಾತೆ ಭಾರತಾಂಬೆ, ಆದರೆ ಕರ್ನಾಟಕ ತಾಯಿ ಭುವನೇಶ್ವರಿ ಆಗಿದ್ದಾಳೆ. ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯ ಶಿರಸಿ ಸಿದ್ದಾಪೂರದಲ್ಲಿ ಭುವನೇಶ್ವರಿ ಮೂರ್ತಿ ಇದೆ.

“ಜಯ ಭಾರತ ಜನನಿಯ ತನುಜಾತೆ ಜಯಹೇ ಕರ್ನಾಟಕ ಮಾತೆ” ಎಂದು ಕುವೆಂಪು ಅವರು ಕಾವ್ಯ ಸೂಕ್ಷ್ಮದಲ್ಲಿ ಸಾರಿದ್ದಾರೆ. ಜಯ ಭಾರತ ಮಾತಾ ಎಂಬುದು ರಾಷ್ಟ್ರವ್ಯಾಪಿ ಚಳವಳಿಯ ಹಿಂದಿ ಮೂಲದ ಪ್ರಯೋಗ ಕನ್ನಡ ತಾಯಿಯನ್ನು ಭಾರತ ಮಾತೆಯ ಮಗಳು ಎಂದು ರಾಷ್ಟ್ರ ರಾಜ್ಯ ಹಾಗೂ ಭಾರತ ಕರ್ನಾಟಕ ಸಂಬಂಧಗಳನ್ನು ಪರಸ್ಪರ ಅವಲಂಬನೆಯನ್ನು ಸೂಚಿಸಿದ್ದಾರೆ.

ಮಗಳಾಗಿ ಕರ್ನಾಟಕ ಬೇರೆ ನಿಜ, ಆದರೆ ತಾಯಿಯಾದ ಭಾರತ ಮಾತೆಯ ಮಗಳೆಂಬುದು ಅಷ್ಟೇ ನಿಜ. ವಿಶ್ವ ಮಾತೆ ಭೂಮಿ, ತಾಯಿ ಭಾರತ ಮಾತೆ ಕನ್ನಡ ತಾಯಿ ತಾವರೆಯ ಕನ್ನಡ ತಾಯಿ ತಾವರೆಯ ಪರಮಳವುಂಡು ಬೀರುತಿಹ ಗಾಳಿ ಕನ್ನಡದ ತಾಯಿ ತಾವರೆಯ ಪರಿಮಳವು ತಾನು, ಎಂದು ಅದರ ಸುತ್ತ ಬೀರುತ್ತಿರುವ ಗಾಳಿ ಬೀರುತಿಹ ಗಾಳಿ ಕನ್ನಡದ ತಾಯಿ ತಾವರೆಯ ಪರಿಮಳವನ್ನು ತಾನು ಇಂದು, ಅದನ್ನು ಸುತ್ತ ಬೀರುತ್ತಿರುವ ಗಾಳಿ.

- Advertisement -

ದುರ್ಗೆಯ ಹತ್ತು ರೂಪಗಳಲ್ಲಿ ಕಾಶಿ, ತಾರಾ ಷೋಡಶಿ, ಭುವನೇಶ್ವರಿ, ಛಿನ್ನಮಸ್ತ, ಭೈರವಿ, ಧೂಪಮತಿ, ಬಗಲಮುಖಿ, ಮಾತಂಗಿ, ಕಮಲ ಭುವನೇಶ್ವರಿ ನಾಲ್ಕನೆಯವಳು.

ದನ ಕಾಯುವ ಬಾಲಕನು ತನ್ನ ಗೋವು ಎರಡು ಬಂಡೆಗಳ ನಡುವ ತನ್ನ ಕೆಚ್ಚಲಿನ ಹಾಲು ಸುರಿಸುವುದನ್ನು ನೋಡಿ ತನ್ನ ಮಾಲೀಕನಿಗೆ ತಿಳಿಸುತ್ತಾನೆ, ಒಡೆಯ ಒಂದು ಗೋವಿನ ಹಿಂದೆ-ಹಿಂದೆ ಬಂದು ಹಾಲು ನೀಡುವುದನ್ನು ಪತ್ತೆ ಹಚ್ಚಿ ಅಲ್ಲಿ ಪರೀಶಿಲಿಸಿದಾಗ ಭುವನೇಶ್ವರಿ ದೇವಿ ಉದ್ಭವ ಮೂರ್ತಿ ಇತ್ತು, ಅಲ್ಲಿ ದೇವಾಲಯ ನಿರ್ಮಿಸಿದರು ಎನ್ನಲಾಗುತ್ತದೆ.

ಸನ್ 1692 ರಲ್ಲಿ ಬೀಳಗಿಯ ಅರಸು ಮನೆತನದ ಬಸವೇಂದ್ರ ಅರಸರು ನಿರ್ಮಿಸಿದ ಎನ್ನಲಾಗುತ್ತದೆ. ವಿಶಾಲವಾದ ಕಲ್ಯಾಣಿ ಹಸಿರು ವನರಾಶಿಯ ಸುಂದರ ನಿಸರ್ಗ ತಾಣವಾಗಿದೆ.

- Advertisement -

ಭುವನೇಶ್ವರಿಯ ಬೆಳಕಿಗೆ ತಂದವರು ಕದಂಬರು ಅದನ್ನು ವಿಜಯನಗರದ ಅರಸರು ಮುಂದುವರೆಸಿದರು. ಯುದ್ದಕ್ಕೆ ಹೋಗುವ ಮುನ್ನ ಭುವನೇಶ್ವರಿ ದೇವಿಯನ್ನು ಸ್ಮರಿಸಿ ಪೂಜೆ ಗೈದು ಮುಂದೆ ಸಾಗುತ್ತಿದ್ದರು. ವೀರಶೈವ ಧರ್ಮದ ಬಸವೇಂದ್ರ ಹಂಪೆಯ ಭುವನೇಶ್ವರಿಯ ಪ್ರೇರಣೆಯಿಂದ ವಿಜಯನಗರದ ಸಾಮಂತರ ಅರಸರಾಗಿದ್ದ ಬೀಳಗಿ ವಂಶದ ಕೊನೆಯ ಅರಸನಾದ ಬಸವೇಂದ್ರ ನಿರ್ಮಿಸಿರಬಹುದು. ಬೀಳಗಿ ಅರಸರ ಆಸ್ಥಾನ ಗುರುವಾಗಿದ್ದರು, ತರ್ಕ, ನ್ಯಾಯಶಾಸ್ತ್ರ, ಗಣಿತ ಜ್ಯೋತಿಷ್ಯ ಶಾಸ್ತ್ರಗಳಲ್ಲಿ ಪ್ರವೀಣರಾಗಿದ್ದರು.

ಭುವನ ಗಿರಿಯಿಂದ 4 ಕಿ.ಮೀ ದೂರದಲ್ಲಿರುವ ಬೀಳಗಿಯಲ್ಲಿ ವಾಸಿಸುತ್ತಿದ್ದ ಕನ್ನಡ ಸಂಸ್ಕೃತ ಭಾಷಾ ಪಂಡಿತನಾಗಿದ್ದನು. ಒಂದು ಕರದಲ್ಲಿ ನಾಡಿನ ಬಾವುಟ, ಮತ್ತೊಂದು ಕರದಲ್ಲಿ ಕಲಶ, ಓಲೇಗರಿ ಗ್ರಂಥ ಆಶಿರ್ವದಿಸುವ ಹಸ್ತ ಹೀಗೆ ನಾಲ್ಕು ಕೈಗಳಿವೆ.

ಭುವನೇಶ್ವರಿ ಕನ್ನಡಿಗರ ಕನ್ನಡ ನಾಡಿನ ಮಾತೆ ನಿತ್ಯ ಪೂಜೆ ನವ ರಾತ್ರಿಯಲ್ಲಿ ಒಂಭತ್ತು ದಿನಗಳ ಕಾಲ ಅದ್ಧೂರಿಯಾಗಿ ಪೂಜೆ ನಡೆಯುವುದು.

ಭುವನಗಿರಿ ಪ್ರದೇಶದಲ್ಲಿ ಸುಮಾರು 300 ಅಡಿ ಎತ್ತರದ ಬೆಟ್ಟದಲ್ಲಿ ಹಸಿರು ಹೊದಿಕೆಯ ನಿಸರ್ಗ ಮಧ್ಯೆ ನೆಲೆಸಿದ್ದಾಳೆ ಭುವನಗಿರಿಯಲ್ಲಿ ಮುನ್ನೂರು ವರ್ಷಗಳನ್ನು ಪುರಾತನವಾದ ನೀರು ಬತ್ತದ ಪುಷ್ಕರಣೆ ಇದೆ ಪುಷ್ಕರಣೆಯ ಮಧ್ಯ ಭಾಗದಲ್ಲಿ ಗದ್ದುಗೆ ಇದೆ.

ಕಾರ್ತಿಕ ಮಾಸದಲ್ಲಿ ತೆಪ್ಪೋತ್ಸವ ನಡೆಯುತ್ತದೆ, ತೆಪ್ಪದ ಮೇಲೆ ದೇವಿಯ ಉತ್ಸವ ಮೂರ್ತಿ ತಂದು ಗದ್ದುಗೆಯಲ್ಲಿ ಸ್ಥಾಪಿಸಿ ಅಷ್ಟಾಂಗ ಸೇವೆಯನ್ನು ಸಲ್ಲಿಸುತ್ತಾರೆ. ಈ ದೇವಾಲಯಕ್ಕೆ ನೂರಾ ಹನ್ನೊಂದಕ್ಕೂ ಹೆಚ್ಚು ಮೆಟ್ಟಿಲು ಇದ್ದು ದೇವಾಲಯದ ಮೆಟ್ಟಿಲುಗಳ ಎರಡೂ ಬದಿಗಳಲ್ಲಿ ಗರ್ಜಿಸುತ್ತಿರುವ ಸಿಂಹದ ಶಿಲಾಮೂರ್ತಿಗಳು ಇವೆ. ದೇವಾಲಯದಲ್ಲಿ ಶಿಲಾ ಕಂಬಗಳು ಇದ್ದು ಆಕರ್ಷಕವಾಗಿದೆ ದೇವಾಲಯದ ಮುಂಭಾಗದಲ್ಲಿ ಸಿಂಹಾರೂಢ ದೇವತೆ ಇದ್ದು, ದೇವಿಯ ಗರ್ಭ ಗುಡಿಯ ಹೊರಭಾಗದ ಶಿಲಾ ಗೋಡೆಗಳಲ್ಲಿ ರಾಜ ಮಹಾರಾಜರ ಲಾಂಛನಗಳು ಕಂಡುಬರುತ್ತವೆ.

ಗರ್ಭ ಗುಡಿಯ ಪ್ರವೇಶದ್ವಾರ ಮಾತ್ರ ಚಿಕ್ಕದಾಗಿದೆ. ಒಳಗೆ ಕನ್ನಡ ದೇವಿ ಶಾಂತಳಾಗಿ ರಾರಾಜಿಸುತ್ತಿದ್ದಾಳೆ. ದೇವಿಯ ಬಲಭಾಗದಲ್ಲಿ ಗಣಪತಿ ಇದೆ, ನಿರಾಭರಣ ಸುಂದರಿ ಕನ್ನಡ ತಾಯಿ ನಿಂತು ಆಶೀರ್ವದಿಸುತ್ತಿದ್ದಾಳೆ.

ಕನ್ನಡ ಭುವನೇಶ್ವರಿ, ಎಂದರೆ ಯಾವುದೇ ಸಂಕುಚಿತ ಭಾವನೆಗೆ ಎಡೆಗೊಡದೆ ಕನ್ನಡ ನಾಡಿನಲ್ಲಿ ಬಾಳಿ ಬದುಕುತ್ತಿರುವ ಎಲ್ಲರ ಹೃದಯಗೂಡದ ಕನ್ನಡ ನಾಡಿನಲ್ಲಿ ಬಾಳಿ ಬದುಕುತ್ತಿರುವ ಎಲ್ಲರ ಹೃದಯೇಶ್ವರಿ ಜಾತಿ, ಮತ-ಪಂಥಗಳನ್ನು ಮೀರಿದ ನಾಡಿನ ಸರ್ವ ಶಕ್ತಿಯ ಸಂಕೇತವಾಗಿದೆ.

ಅಲ್ಲದೇ ಕರ್ನಾಟಕದ ಮೈಸೂರು ಗುಬ್ಬಿ ತಾಲೂಕು ನಿಟ್ಟೂರು ಶೃಂಗೇರಿ ಯಾದಗಿರುಗಳಲ್ಲಿವೆ. ಹೊರ ರಾಜ್ಯಗಳಲ್ಲೂ ದೇವಾಲಯಗಳಿವೆ. ನಮ್ಮ ನಾಡಿನ ದೇವತೆ ಎಲ್ಲರಿಗೂ ಹರಿಸಲಿ.


ಎಂ.ವೈ. ಮೆಣಸಿನಕಾಯಿ
ಮನೆ ನಂ. 7360, ಸೆಕ್ಟರ 10,
ಆಂಜನೆಯ ನಗರ, ಬೆಳಗಾವಿ-17
ಮೊ: 9449209570

- Advertisement -
- Advertisement -

Latest News

ರಾಜ್ಯದ ರಸ್ತೆ ಕಾಮಗಾರಿಗಳು ಸೆ.2024 ರೊಳಗೆ ಪೂರ್ಣ ; ಮೇಲ್ಮನೆಗೆ ಗಡಕರಿ ಉತ್ತರ

ಮೂಡಲಗಿ: ಕೇಂದ್ರ ರಸ್ತೆ ಮತ್ತು ಮೂಲಸೌಕರ್ಯ ನಿಧಿ ಯೋಜನೆಯಡಿ ಕರ್ನಾಟಕ ರಾಜ್ಯದಲ್ಲಿ 663 ಕೋಟಿ ರೂ.ಗಳ ವೆಚ್ಚದಲ್ಲಿ ಸುಮಾರು 241 ಕಿ.ಮೀ ಉದ್ದದ 36 ರಾಜ್ಯ...
- Advertisement -

More Articles Like This

- Advertisement -
close
error: Content is protected !!
Join WhatsApp Group