ವಿಶೇಷ ವರದಿ: ನಂದಕುಮಾರ ಕರಂಜೆ, ಬೀದರ್
ಬೀದರ: ಬಸವಣ್ಣನವರ ಕರ್ಮಭೂಮಿ ಬಸವಕಲ್ಯಾಣದಲ್ಲಿ ಹೊರಗಿನವರು ಒಳಗಿನವರ ಮಧ್ಯೆ ಅಕ್ಷರಶಃ ಮಾರಾಮಾರಿ ಗಲಾಟೆಯೇ ನಡೆದಿದೆಯೆನ್ನಬಹುದು.
ತಮಗೆ ಅಚ್ಚರಿಯಾಗಬಹುದು ಈ ಹೊರಗಿನವರು ಯಾರು, ಒಳಗಿನವರು ಯಾರು ಅಂತ. ಹಾಗೆ ನೋಡಿದರೆ ಇತಿಹಾಸದ ಪುಟಗಳನ್ನು ತಿರುಚಿ ನೋಡಿದಾಗ ಬಸವಣ್ಣನವರನ್ನು ಹೊಡೆದು ಬಸವಕಲ್ಯಾಣದಿಂದ ಹೊರಗೆ ಕಳಿಸಿದರೆಂಬ ಇತಿಹಾಸ ಬಸವಕಲ್ಯಾಣ ನಲ್ಲಿ ನಡೆದ ಬಗ್ಗೆ ಸಾಕ್ಷಿಗಳಿವೆ ಅದು ಆ ಕಾಲದಲ್ಲಿ ಆದರೆ ಈ ಕಲಿಯುಗದಲ್ಲಿಯೂ ಅದೇ ಮಾದರಿ ನಡೆದು ಕೊಂಡು ಬಂದಿದೆಯೆನ್ನಲಾಗುತ್ತಿದೆ.
ಈ ಪೀಠಿಕೆಗೆಲ್ಲ ಕಾರಣವೆಂದರೆ, ಬೀದರ ಜಿಲ್ಲಾ ಕಾಂಗ್ರೆಸ್ ನ ಇಬ್ಬರು ನಾಯಕರು ಟಿಕೆಟ್ ವಿಷಯವಾಗಿ ಹೊಡೆದಾಡಿಕೊಂಡಿದ್ದು ಅವರ ಗಲಾಟೆಯ ನಂತರ ಬೀದರ ಜಿಲ್ಲೆಯ ಬಸವಕಲ್ಯಾಣಕ್ಕೆ ಸಂಬಂಧಿಸಿದಂತೆ ಸ್ಥಳೀಯರು ಹೊರಗಿನವರು ಎಂಬ ಮಾತುಗಳು ಹರಿದಾಡುತ್ತಿವೆ.
ಮಾಜಿ ಮುಖ್ಯಮಂತ್ರಿ ಎನ್ ಧರ್ಮಸಿಂಗ ಪುತ್ರ ವಿಜಯ ಸಿಂಗ್ ಬಸವಕಲ್ಯಾಣ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಆದರೆ ಅವರು ಹೊರಗಿನ ಅಭ್ಯರ್ಥಿ ಎಂದು ಒಳಗಿನ ವರು ಬಿಂಬಿಸಲು ಯತ್ನಿಸಿದರು ಆದರೆ ಧರ್ಮಸಿಂಗ್ ಪುತ್ರ ವಿಜಯ ಸಿಂಗ್ ಇದರ ಬಗ್ಗೆ ಯಾವುದೇ ತಲೆ ಕೆಡಿಸಿಕೊಳ್ಳದೆ ಬಸವಕಲ್ಯಾಣದಲ್ಲಿ ತನ್ನ ಛಾಪು ಮೂಡಿಸಿದ್ದಾರೆ.
ಇನ್ನು ಒಳಗಿನ ಅಭ್ಯರ್ಥಿ ಎನಿಸಿಕೊಂಡಿರುವ ಆನಂದ್ ದೇವಪ್ಪ ಕೂಡ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಟಿಕೆಟ್ ಆಕಾಂಕ್ಷೆ ಹೊಂದಿದ್ದು ಅದೇ ಕಾರಣಕ್ಕಾಗಿ ಇವತ್ತು ಇವರಿಬ್ಬರ ನಡುವೆ ಮಹಾಯುದ್ಧ ನಡೆದು ಹೋಗಿದೆ ಎಂದು ಹೇಳಬಹುದು.
ಕಾಂಗ್ರೆಸ್ ಪಕ್ಷದ ಸ್ಥಳೀಯ ನಾಯಕರು ಒಂದು ಕಡೆ ಹೊರಗಿನ ವಿಜಯ ಸಿಂಗ್ ಒಂದು ಕಡೆ..ಇವರ ಇಬ್ಬರ ನಡುವೆ ವೈಮನಸ್ಯ ಬೆಳೆದು ಹುಟ್ಟಿದ ಒಂದು ಕಾರಣಕ್ಕೆ ಮಾತ್ರ ಬಸವಕಲ್ಯಾಣ ಟಿಕೆಟ್ ಪಡೆಯುವ ಗೋಸ್ಕರ ಒಬ್ಬರ ವಿರುದ್ಧ ಒಬ್ಬರ ವೈಮನಸು ಕೆಲವು ದಿನಗಳಿಂದ ನಡೆಯುತ್ತಿದೆ.
ಆನಂದ್ ದೇವಪ ಸ್ಥಳೀಯ ಕಾಂಗ್ರೆಸ್ ಪಕ್ಷದ ಮುಖಂಡರು ಮತ್ತು ಕಾಂಗ್ರೆಸ್ ಪಕ್ಷದ ಬಸವಕಲ್ಯಾಣ ಕ್ಷೇತ್ರದ ಟಿಕೆಟ್ ಆಕಾಂಕ್ಷಿ. ಆನಂದ್ ದೇವಪ್ಪ ಹೇಳಿಕೆ ಪ್ರಕಾರ, ಮಾಜಿ ಮುಖ್ಯ ಮಂತ್ರಿ ಎನ್ ಧರ್ಮಸಿಂಗ್ ಪುತ್ರ ಅವರ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಆರೋಪ ಮಾಡಿದ್ದರು. ಈ ಬಗ್ಗೆ ವಿಡಿಯೋ ಕೂಡ ಬಿಡುಗಡೆ ಮಾಡಿದ್ದಾರೆ. ಇದು ಎಲ್ಲಿಗೆ ತಲುಪುತ್ತದೆಯೆಂಬುದು ದೊಡ್ಡ ಪ್ರಶ್ನೆಯಾಗಿದೆ.
ಆದರೆ ಈ ಇಬ್ಬರ ಗಲಾಟೆ ಕಾಂಗ್ರೆಸ್ ಪಕ್ಷಕ್ಕೆ ಬಿಸಿತುಪ್ಪವಾಗಿ ಪರಿಣಮಿಸಿದೆ. ಯಾಕೆಂದರೆ ನಾಳೆ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಬಸವಕಲ್ಯಾಣ ನಲ್ಲಿ ಪ್ರಜಾಧ್ವನಿ ಸಮಾವೇಶದಲ್ಲಿ ಭಾಗವಹಿಸಲು ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಇಲ್ಲಿನ ನಾಯಕರಿಗೆ ಈ ಪ್ರಕರಣವನ್ನು ನಿಭಾಯಿಸುವುದು ಸವಾಲಾಗಿ ಪರಿಣಮಿಸಿದೆ. ಸಿದ್ಧರಾಮಯ್ಯ ಅವರೆದುರು ಈ ಗಲಾಟೆಯೇನಾದರೂ ಸ್ಫೋಟಗೊಂಡರೆ ಕಾಂಗ್ರೆಸ್ ಪಕ್ಷಕ್ಕೆ ಮುಜುಗರ ಉಂಟಾಗುವ ಸನ್ನಿವೇಶವನ್ನು ನಿರಾಕರಿಸಲಾಗದು. ಎಲ್ಲದಕ್ಕೂ ನಾಳೆಯೇ ಉತ್ತರ ಹೇಳಲಿದೆ.