spot_img
spot_img

Bidar: ಬಿಜೆಪಿ ಮುಳುಗುತ್ತಿರುವ ದೋಣಿ: ಸಚಿವ ಭೈರೇಗೌಡ

Must Read

spot_img
- Advertisement -

ಬೀದರ – ಬಿಜೆಪಿ ನಾವಿಕನಿಲ್ಲದ ದೋಣಿಯಾಗಿದೆ, ಅವರು ಯಾರನ್ನ ನಾಯಕ‌ ಮಾಡಿದರೂ ನಮಗೆ ಸಂಬಂಧವಿಲ್ಲ. ಬಿಜೆಪಿ ಪಕ್ಷ ಮುಳುಗುತ್ತಿದೆ ಅನ್ನೋ ಭಯ ಬಿಜೆಪಿ ಶಾಸಕರಿಗೆ‌ ಕಾಡುತ್ತಿದೆ. ಸರ್ಕಾರ ರಚನೆಯಾಗಿ 100 ದಿನ ಕಳೆಯುತ್ತಾ ಬಂದರೂ, ವಿಪಕ್ಷ ನಾಯಕನ ಆಯ್ಕೆ‌ ಮಾಡೊ‌ ಸಾಮರ್ಥ್ಯ ವಿಪಕ್ಷಗಳಿಗೆ ಇಲ್ಲವಾಗಿದೆ ಎಂದು ಕಂದಾಯ ಸಚಿವ ಭೈರೇಗೌಡ ವ್ಯಂಗ್ಯವಾಡಿದ್ದಾರೆ.

ಬೀದರನಲ್ಲಿ ಪತ್ರಕರ್ತರೊಡನೆ ಅವರು ಮಾತನಾಡಿದರು.

ವಿಪಕ್ಷ ನಾಯಕನ್ನ ಶ್ಯಾಡೋ ಸಿಎಂ ಅಂತಾರೆ. ಆದರೆ ರಾಜ್ಯದಲ್ಲಿ ವಿಪಕ್ಷ ನಾಯಕನ ಆಯ್ಕೆ ಮಾಡದೇ ರಾಜ್ಯಕ್ಕೆ ಅಪಮಾನ ‌ಮಾಡಲಾಗುತ್ತಿದೆ. ಬಿಜೆಪಿಯಲ್ಲಿ ಆಂತರಿಕ ಕಚ್ಚಾಟವೇ ಹೆಚ್ಚಾಗಿದೆ. ರಾಜ್ಯಾಧ್ಯಕ್ಷ, ವಿಪಕ್ಷ ನಾಯಕನ ಆಯ್ಕೆ ಮಾಡಲಾಗದೆ ಒದ್ದಾಡುತ್ತಿದೆ. ಬಿಜೆಪಿ ಸಂಪೂರ್ಣ ಗೊಂದಲದ ಗೂಡಾಗಿದೆ ಎಂದರು.

- Advertisement -

ಜೆಡಿಎಸ್ ಪಕ್ಷ ‌ಕೂಡಾ ಅದೇ ರೀತಿಯಾಗಿದೆ. ಬೇರೆ ಪಕ್ಷಗಳಿಗೆ ಹೋಲಿಸಿದರೆ ನಮ್ಮ ಪಕ್ಷ ಜನಪರವಾಗಿದೆ. ಹಾಗಾಗಿ ಬೇರೆ ಶಾಸಕರು ನಮ್ಮ‌ ಪಕ್ಷಕ್ಕೆ ಬರೋಕೆ ಮನಸ್ಸು ಮಾಡಿರಬಹುದು. ನನಗೆ ಎಷ್ಟು ಜನ ಬರ್ತಾರೆ ಅನ್ನೊ ಮಾಹಿತಿ‌ ಇಲ್ಲ ಎಂದು ಸಚಿವ ಬೈರೇಗೌಡ ನುಡಿದರು.

ಎಸ್ ಟಿ ಸೋಮಶೇಖರ ಪಕ್ಷ ಸೇರೊ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಅದು ಅವರ ವೈಯಕ್ತಿಕ ವಿಚಾರ, ಬರುತ್ತೇವೆ ಅನ್ನೋರ ಬಗ್ಗೆ ಪಕ್ಷದ ‌ಮುಖಂಡರು ತೀರ್ಮಾನ ತೆಗೆದುಕೊಳ್ಳುತ್ತಾರೆ. ಶಾಸಕರನ್ನು ಕರೆತರಬೇಕು ಅನ್ನೋ ಅವಶ್ಯಕತೆ ನಮಗೆ ಇಲ್ಲಾ, ನಮ್ಮ ಸರ್ಕಾರ ಸುಭದ್ರವಾಗಿದೆ ಎಂದು ಭೈರೇಗೌಡ ಹೇಳಿದರು

ಸಚಿವ ಸಂಪುಟ ಬದಲಾವಣೆ ವಿಚಾರ ಮಾತನಾಡಿದ ಅವರು, ಅದು ನಮ್ಮ‌ ವರಿಷ್ಠರು, ಸಿಎಂ ವಿವೇಚನೆಗೆ ಬಿಟ್ಟಿದ್ದು ಎಂದರು.


- Advertisement -

ವರದಿ: ನಂದಕುಮಾರ ಕರಂಜೆ, ಬೀದರ

- Advertisement -
- Advertisement -

Latest News

ಯೋಗ ಸ್ಪರ್ಧಾ ವಿಜೇತರಿಗೆ ಕಡಾಡಿ ಸನ್ಮಾನ

ಮೂಡಲಗಿ: ಗ್ರಾಮೀಣ ಪ್ರದೇಶದ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳು ಯೋಗದಲ್ಲಿ ಅತ್ಯುತ್ತಮ ಸಾಧನೆ ಮಾಡುವ ಮೂಲಕ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದ್ದಾರೆ ಇಂತಹ ಪ್ರತಿಭೆಗಳು ಬೆಳಕಿಗೆ ಬಂದು ನಾಡಿನ...
- Advertisement -

More Articles Like This

- Advertisement -
close
error: Content is protected !!
Join WhatsApp Group