Bidar: ಇಬ್ಬರು ರೆಮ್ಡಿಸಿವಿರ್ ಖದೀಮರ ಬಂಧನ ; ತಲೆಮರೆಸಿಕೊಂಡ ವೈದ್ಯೆ

Must Read

ಬೀದರ – ಬೀದರ್ ನಲ್ಲಿ ರೆಮ್ಡಿಸಿವರ್ ಔಷಧವನ್ನು ದುಪ್ಪಟ್ಟು ಹಣಕ್ಕೆ ಅಕ್ರಮವಾಗಿ ಮಾರಾಟ ಮಾಡುತ್ತಿರುವ ದಂಧೆ ಜೋರಾಗಿದ್ದು ಕಾಳಸಂತೆಯಲ್ಲಿ ಅಕ್ರಮವಾಗಿ ರೆಮ್ಡಿಸಿವರ್ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಅಭಿಷೇಕ್ ಹಾಗೂ ಆಸಿಫ್ ಅಹ್ಮದ್ ಬಂಧಿತ ಆರೋಪಿಗಳು.

ಇವರಿಬ್ಬರೂ ವಿಜಯಾ ಖಾಸಗಿ ಆಸ್ಪತ್ರೆ ಸಿಬ್ಬಂದಿ ಎಂದು ತಿಳಿದು ಬಂದಿದೆ.

ಖಾಸಗಿ ಆಸ್ಪತ್ರೆ ಆಡಳಿತ ಮಂಡಳಿ ಡಾ. ವಿಜಯಾ ಹತ್ತಿ ಪೋಲಿಸರ ಕೈಗೆ ಸಿಗದೆ ತಲೆ ಮರೆಸಿಕೊಂಡಿದ್ದು ಹುಡುಕಾಟ ಆರಂಭವಾಗಿದೆ.

ಇವರು ನಗರದ ಬ್ರಿಮ್ಸ್ ಆಸ್ಪತ್ರೆಯ ಬಳಿ ಅಕ್ರಮವಾಗಿ ರೆಮ್ಡಿಸಿವಿರ್ ಔಷಧವನ್ನು ೨೦ ರಿಂದ ೨೫ ಸಾವಿರ ಬೆಲೆಗೆ ಮಾರಾಟ ಮಾಡುತ್ತಿದ್ದರು. ಈ ಬಗ್ಗೆ ಖಚಿತ ಮಾಹಿತಿ ಪಡೆದ ನ್ಯೂ ಟೌನ್ ಪೊಲೀಸರು ದಾಳಿ ಮಾಡಿ ಇಬ್ಬರನ್ನು ಬಂಧಿಸಿದರು ಎನ್ನಲಾಗಿದೆ.

 

ನಿನ್ನೆ ಕೂಡಾ ಇಬ್ಬರು ಆರೋಪಿಗಳನ್ನು ಬಂಧನ ಮಾಡಿದ್ದ ನಗರ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.

ವರದಿ: ನಂದಕುಮಾರ ಕರಂಜೆ, ಬೀದರ

Latest News

ಸಾಮೂಹಿಕ ಪ್ರಾರ್ಥನೆ ವಚನ ವಿಶ್ಲೇಷಣೆ ಕಾರ್ಯಕ್ರಮ

ಬೆಳಗಾವಿ - ವಚನ ಪಿತಾಮಹ ಡಾ ಫ ಗು ಹಳಕಟ್ಟಿ ಭವನ ಮಹಾಂತೇಶ ನಗರ ಲಿಂಗಾಯತ ಸಂಘಟನೆ ಬೆಳಗಾವಿಯಲ್ಲಿ ದಿನಾಂಕ.09.11.2025ರಂದು ಸಾಮೂಹಿಕ ಪ್ರಾರ್ಥನೆ ವಚನ ವಿಶ್ಲೇಷಣೆ,...

More Articles Like This

error: Content is protected !!
Join WhatsApp Group