spot_img
spot_img

ಬೀದರ್: 27 ಲಕ್ಷ ರೂ. ಮೌಲ್ಯದ ಗಾಂಜಾ ಜಪ್ತಿ…

Must Read

ಬೀದರ: ಗಡಿ ಜಿಲ್ಲೆ ಬೀದರ್ ನಲ್ಲಿ ಲೇಡಿ ಸಿಂಗಮ್ ಪಿ ಎಸ್ ಐ ಸಂಗೀತಾ ಅವರಯ ಗಾಂಜಾ ದಂಧೆಕೋರರನ್ನು ಹೆಡೆಮುರಿ ಕಟ್ಟಿದ್ದಾರೆ ಎಂದು ಹೇಳಬಹುದು.

ಬೀದರ್ ಆಂದ್ರಪ್ರದೇಶ ಮತ್ತು ಮಹಾರಾಷ್ಟ್ರ ಗಡಿ ಹೊಂದಿರುವ ಬೀದರ್ ..ಹೈದರಾಬಾದ್ ದಿಂದ ಮಹಾರಾಷ್ಟ್ರ ಹೋಗಬೇಕೆಂದಾಗ ಬೀದರ್ ಸರಹದ್ದು ಮೇಲೆ ಯಿಂದ ಹೋಗ ಬೇಕು. ಇದು ಬಗದಲ ಪೊಲಿಸ್ ಠಾಣೆ ವ್ಯಾಪ್ತಿಯಲ್ಲಿ ಬರುತ್ತದೆ ಹೈವೆ ಗಾಂಜಾ ದಂಧೆಕೋರರು ಪೊಲೀಸರ ಕಣ್ಣು ತಪ್ಪಿಸಿ ಹೋಗಲು ಸಾಧ್ಯವಿಲ್ಲ ಎಂದು ಹೇಳಬಹುದು.

ನಿನ್ನೆ ಬಗದಲ್ ಪೋಲಿಸ್ ಠಾಣೆಯ ವ್ಯಾಪ್ತಿಯಲ್ಲಿ ಅಧಿಕಾರಿಗಳು ಭರ್ಜರಿ ಕಾರ್ಯಾಚರಣೆ ಕೈಗೊಂಡು ರೂ. 26,20,000 ರೂಪಾಯಿ ಮೌಲ್ಯದ 265Kg ಗಾಂಜಾ ಖದೀಮರಿಂದ ವಶಪಡಿಸಿಕೊಂಡರು.

ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳಾದ ಕಿಶೋರ್ ಬಾಬು ಅವರ ಮಾರ್ಗದರ್ಶನದಲ್ಲಿ ಖಚಿತವಾದ ಮಾಹಿತಿ ಕಲೆ ಹಾಕಿದ ಬಗದಲ್ ಪೋಲಿಸ್ ಠಾಣೆಯ ಅಧಿಕಾರಿಗಳಾದ ಪಿಎಸ್ಐ ಸಂಗೀತಾ ಅವರು ಮಿನಿ ಗೂಡ್ಸ್ ವಾಹನ ಟಾಟಾ ಎಸ್ ನಲ್ಲಿ ಹೈದರಾಬಾದ್ ನಿಂದ ಹುಮನಾಬಾದಗೆ ಸಾಗಾಣಿಕೆ ಮಾಡುತಿದ್ದ ಸುಮಾರು 26,20,000 ರೂಪಾಯಿ ಮೌಲ್ಯದ 262Kg ಗಾಂಜಾ ವನ್ನು ಬಗದಲ್ ಪೋಲಿಸ್ ರಾಷ್ಟ್ರೀಯ ಹೆದ್ದಾರಿ 65 ರ ಠಾಣೆಯ ವ್ಯಾಪ್ತಿಯಲ್ಲಿ ಬರುವ ಮೀನಕೆರಾ ಕ್ರಾಸ್ ಬಳಿ ವಶಕ್ಕೆ ಪಡೆದುಕೊಂಡ ಪೋಲಿಸರು ಅದರ ಜೊತೆಗೆ 150000ರೂಪಾಯಿ ಮೌಲ್ಯದ ಟಾಟಾ ಎಸ್ ಸೇರಿದಂತೆ ಒಟ್ಟು27,70000 ಮೌಲ್ಯದ ವಸ್ತುಗಳು ಮತ್ತು 700ರೂಪಾಯಿ ನಗದನ್ನು ವಶ ಪಡಿಸಿ ಕೊಂಡಿದ್ದಾರೆ.

ಪೋಲಿಸರ ಈ ಯಶಸ್ವಿ ಕಾರ್ಯಾಚರಣೆಯ ಬಗ್ಗೆ ಜಿಲ್ಲಾ ಪೋಲಿಸ್ ವರಿಷ್ಠ ರಾದ ಕಿಶೋರ್ ಬಾಬು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.


ವರದಿ: ನಂದಕುಮಾರ ಕರಂಜೆ, ಬೀದರ

- Advertisement -
- Advertisement -

Latest News

ಕವಿ ನಾಗೇಶ್ ನಾಯಕಗೆ ಜಿಲ್ಲಾ ಸಾಹಿತ್ಯ ಪ್ರತಿಷ್ಠಾನದ ದತ್ತಿ ಪ್ರಶಸ್ತಿ ಪ್ರದಾನ

ಸವದತ್ತಿಃ ಸಮೀಪದ ಉಡಿಕೇರಿಯ ರಾಮಲಿಂಗೇಶ್ವರ ಪ್ರೌಢಶಾಲೆಯ ಕವಿ, ಶಿಕ್ಷಕ ನಾಗೇಶ್ ಜೆ. ನಾಯಕ ಅವರಿಗೆ ಇತ್ತೀಚೆಗೆ ಬೆಳಗಾವಿ ಹಿಂದವಾಡಿಯ ಐ.ಎಂ.ಇ.ಆರ್. ಸಭಾಭವನದಲ್ಲಿ ಜರುಗಿದ ಬೆಳಗಾವಿ ಜಿಲ್ಲಾ...
- Advertisement -

More Articles Like This

- Advertisement -
close
error: Content is protected !!