Homeಸುದ್ದಿಗಳುಬೀದರ: ಇಬ್ಬರು ಶಾಲೆ ವಿದ್ಯಾರ್ಥಿಗಳಿಗೆ ವಕ್ಕರಿಸಿದ ಕರೋನ ವೈರಸ್

ಬೀದರ: ಇಬ್ಬರು ಶಾಲೆ ವಿದ್ಯಾರ್ಥಿಗಳಿಗೆ ವಕ್ಕರಿಸಿದ ಕರೋನ ವೈರಸ್

ಬೀದರ – ಗಡಿ ಜಿಲ್ಲೆ ಬೀದರ್ ನಲ್ಲಿ ಕರೋನ ಮಹಾ ಸ್ಪೋಟವಾಗಿದ್ದು ಬೀದರ ಜಿಲ್ಲೆಯ್ಯಾದಂತ 23 ಕರೋನ ವೈರಸ್ ಪ್ರಕರಣ ಕಂಡುಬಂದಿವೆ ಅದರಲ್ಲಿ ಇಬ್ಬರು ವಿದ್ಯಾರ್ಥಿಗಳಾಗಿದ್ದು ಆತಂಕ ಮೂಡಿಸಿದೆ.

ಗಡಿ ಪ್ರದೇಶಕ್ಕೆ ಹೊಂದಿಕೊಂಡಿರುವ ಭಾಲ್ಕಿ ತಾಲ್ಲೂಕಿನ ಬೀರಿ (ಬಿ ) ಗ್ರಾಮದಲ್ಲಿ ಭಯದ ವಾತಾವರಣ.

ಬೀರಿ ಬಿ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯಲ್ಲಿನ ಎರಡು ಮಕ್ಕಳಿಗೆ ಕರೋನ ವೈರಸ್ ವಕ್ಕರಿಸಿದೆ ಭಾಲ್ಕಿ ಶಿಕ್ಷಣ ಕ್ಷೇತ್ರ ಅಧಿಕಾರಿ ಶಾಲೆಗೆ ಭೇಟಿ ನೀಡಿದರು ಶಾಲೆಯಲ್ಲಿ ಇರುವ ಎಲ್ಲಾ ಮಕ್ಕಳಿಗೆ ಕರೋನ ವೈರಸ್ ಟೆಸ್ಟ್ ಮಾಡಲಾಗಿದೆ. ಇನ್ನೊಂದು ಕಡೆ ಬೀದರ ನಗರದಲ್ಲಿ ಒಂದೇ ಕುಟುಂಬಕ್ಕೆ ನಾಲ್ಕು ಜನರಿಗೆ ಕೊರೋನಾ ಬಂದಿದೆ. ಬೀದರ್ ಪ್ರಮುಖ ನಗರ ಗುರು ನಗರ, ಗಣೇಶ ಮೈದಾನ ಹಾಗೂ ಭಾಲ್ಕಿ ನಗರದಲ್ಲಿ ಕರೋನ ಮಹಾ ಸ್ಪೋಟವಾಗಿದೆ.

ಭಾಲ್ಕಿ ತಾಲೂಕು ಮತ್ತು ಹೊಸ ತಾಲೂಕು ಹುಲಸೂರ ನಲ್ಲಿ ಕರೋನ ವೈರಸ್ ರಣ ಕೇಕೆ ಹಾಕಿದ್ದು ನಿನ್ನೆಯ ವರದಿ ಪ್ರಕಾರ ಜಿಲ್ಲೆಯಾದ್ಯಂತ ೨೩ ಕರೋನ ಪ್ರಕರಣ ವರದಿಯಾಗಿದ್ದರಿಂದ ಬೀದರ್ ಜಿಲ್ಲೆಯ ಜನರು ಭಯದ ವಾತಾವರಣದಲ್ಲಿ ಇರುವಂತಾಗಿದೆ.

ಜಿಲ್ಲಾ ಆಡಳಿತ ಮತ್ತು ಬೀದರ ಆರೋಗ್ಯ ಇಲಾಖೆ ಕರೋನ ಹತೋಟಿಗೆ ತರಲು ಯತ್ನಿಸಿದರು ಕೂಡ ಕರೋನ ವೈರಸ್ ಸ್ಪೋಟ ಗೊಂಡಿದೆ. ಜಿಲ್ಲಾ ಆಡಳಿತ ಯಾವ ರೀತಿ ಇನ್ನು ಮುಂದೆ ಕರೋನ ಹತೋಟಿಗೆ ತರಬಹುದು ಎಂದು ಕಾದು ನೋಡಬೇಕು.


ವರದಿ: ನಂದಕುಮಾರ ಕರಂಜೆ
ಟೈಮ್ಸ್ ಆಫ್ ಕರ್ನಾಟಕ,ಬೀದರ

RELATED ARTICLES

Most Popular

error: Content is protected !!
Join WhatsApp Group