spot_img
spot_img

ಬೀದರ ಡಿಸಿಸಿ ಬ್ಯಾಂಕ್ ಗೆ ಚುನಾವಣೆ ; ಎರಡು ಬಣಗಳ ನಡುವೆ ಜಿದ್ದಾಜಿದ್ದಿ

Must Read

spot_img
- Advertisement -

ಬೀದರ – ಗಡಿ ಜಿಲ್ಲೆ ಬೀದರ ನಲ್ಲಿ  ಸಹಕಾರ ಬ್ಯಾಂಕ್ ಗೆ ಚುನಾವಣೆ ನಡೆಯಲಿದ್ದು ಜಿಲ್ಲೆಯ ಎರಡು ಪ್ಯಾನಲ್ ಗಳಲ್ಲಿ ತೀವ್ರ ಜಿದ್ದಾಜಿದ್ದಿ ಏರ್ಪಟ್ಟಿದೆ.

ಬೀದರ ಡಿಸಿಸಿ ಬ್ಯಾಂಕ್ ಚುನಾವಣೆ ಕಾವು ದಿನ ದಿನದಿಂದ  ಏರುತ್ತಲಿದೆ. ಈ ಚುನಾವಣೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಖಂಡ್ರೆ ಹಾಗೂ ಹುಮನಾಬಾದ ಪಾಟೀಲ ಕುಟುಂಬ ಪೇನಲ್ ಒಂದ ಕಡೆ ಆಗಿವೆ.

ಇನ್ನೊಂದು ಕಡೆ ಉಮಾಕಾಂತ ನಾಗಮಾರಪ್ಪಳಿ ಬೆಂಬಲಿಗರದು ಒಂದು ಪ್ಯಾನಲ್ ನಡುವೆ  ಜಿದ್ದಾ ಜಿದ್ದಿ ಹಾವು ಏಣಿ ಆಟ ಪ್ರಾರಂಭ ವಾಗಿದೆ. ಬೀದರ ಜಿಲ್ಲಾದ್ಯಂತ ರೈತರ ಜೀವನಾಡಿಯಾಗಿ,  ಹಲವು ಮಹಿಳಾ ಸ್ವಸಹಾಯ ಗುಂಪು ಪ್ರತಿಯೊಂದು ಗ್ರಾಮದಲ್ಲಿ ಸಂಘ ಸಂಸ್ಥೆಗಳ ಮೂಲಕ ಹಲವು ಮಹಿಳೆಯರಿಗೆ ಸಾಲ ನೀಡುವ ಮೂಲಕ ಬೀದರ ಜಿಲ್ಲೆಯಲ್ಲಿ ಡಿಸಿಸಿ ಬ್ಯಾಂಕ್ ಹೆಸರುವಾಸಿಯಾಗಿದ್ದು ಇದರ ಶ್ರೇಯ ದಿ.ಗುರಪಾದಪ್ಪ ನಾಗಮಾರಪ್ಪಳಿ ಕುಟುಂಬಕ್ಕೆ ಸೇರುತ್ತದೆ ಆದರೆ ಈ ಡಿಸಿಸಿ ಬ್ಯಾಂಕ್ ಮೇಲೆ ಈಗ  ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಕಣ್ಣು ಬಿದ್ದಿದೆ ಎಂದು ಹೇಳಬಹುದು.

- Advertisement -

ಅಕ್ಟೋಬರ್ 4 ರಂದು ಗಡಿ ಜಿಲ್ಲೆ ಬೀದರ್‌ನ ಡಿಸಿಸಿ ಬ್ಯಾಂಕ್ ಚುನಾವಣೆ ನಡೆಯಲಿದ್ದು, ಸಚಿವ ಈಶ್ವರ ಖಂಡ್ರೆ ಹಾಗು ಉಮಾಕಾಂತ ನಾಗಮಾರಪಳ್ಳಿ ನಡುವೆ ಜಟಾಪಟಿ‌ ಜೋರಾಗಿದೆ. 

ಚುನಾವಣೆಯ ಬಗ್ಗೆ ಮಾತನಾಡಿದ ಉಮಾಕಾಂತ ನಾಗಮಾರಪಳ್ಳಿ,  ಈ ಬಾರಿಯ ಚುನಾವಣೆ ಧರ್ಮ ಹಾಗೂ ಅಧರ್ಮದ ನಡುವೆ ನಡೆಯುತ್ತಿದೆ. ಸಹಕಾರ ಸಂಘದ ಚುನಾವಣೆ ಬದಲಾಗಿ ಸರಕಾರದ ಚುನಾವಣೆಯಾಗಿ ಮಾರ್ಪಾಡಾಗಿದೆ ಎಂದರು.

- Advertisement -

ಅಧಿಕಾರ ದುರುಪಯೋಗ ಮಾಡಿಕೊಂಡು ಈಶ್ವರ ಖಂಡ್ರೆ ಚುನಾವಣೆ ಎದುರಿಸಲು ಮುಂದಾಗಿದ್ದಾರೆ ಎಂದು ಖಂಡ್ರೆ ಹೆಸರು ಹೇಳದೆ ಸೂಚ್ಯವಾಗಿ ತಿಳಿಸಿದರು.

ಸರ್ಕಾರದ ಒತ್ತಡಕ್ಕೆ ಮಣಿದು ಅಧಿಕಾರಿಗಳು ಹಾಗು ಪೊಲೀಸರು ಸರ್ಕಾರದ ಕೈಗೊಂಬೆಗಳಾಗಿದ್ದಾರೆ.  ನಾರಂಜಾ ಸಕ್ಕರೆ ಕಾರ್ಖಾನೆಗೆ ಕಡಿಮೆ ದಾಸ್ತಾನು ಇದ್ರೂ ಹೆಚ್ಚಿನ ಸಾಲ ನೀಡಿದ್ದಾರೆ ಎಂಬ ಸಚಿವ ಈಶ್ವರ ಖಂಡ್ರೆ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಅವರು,  ಈಶ್ವರ ಖಂಡ್ರೆ ಸುಳ್ಳಿನ ಸರಮಾಲೆ ಹಾಕುತ್ತಿದ್ದಾರೆ. ನನ್ನ ಅಧಿಕಾರವಧಿಯಲ್ಲಿ ಏನೇ ಅವ್ಯವಹಾರ ಆಗಿದ್ದರೆ ಆ ಕುರಿತು ತನಿಖೆ ಮಾಡಲಿ ಎಂದು ಸಚಿವರಿಗೆ ತಿರುಗೇಟು ನೀಡಿದರು.

ಈಗಾಗಲೇ ನಮ್ಮ‌‌ ಪೆನಾಲ್‌ನ ಮೂವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಇನ್ನು ೧೨ ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಡಿಸಿಸಿ ಬ್ಯಾಂಕ್ ಬೆಳವಣಿಗೆಗೆ ಶ್ರ‌ಮಿಸಿದ ನಮ್ಮ ನಾಗಮಾರಪಳ್ಳಿ ಕುಟುಂಬದ ಜೊತೆಗೆ ಸಾರ್ವಜನಿಕರು, ಡೆಲಿಗೇಟ್ ಪಡೆದ ಸದಸ್ಯರು‌ ಇರ್ತಾರೆ. ಈ‌‌ ಬಾರಿಯೂ  ನಮ್ಮ‌ ಬೆಂಬಲಕ್ಕೆ ಇರಲಿದ್ದಾರೆ ಎಂದರು.


ವರದಿ : ನಂದಕುಮಾರ ಕರಂಜೆ, ಬೀದರ

- Advertisement -
- Advertisement -

Latest News

ಕವನ: ಕಲೆಯ ಲೀಲೆ

"ಕಲೆಯ ಲೀಲೆ" ಲೀಲಾವತಿ ಎಂದರೆ ಕಲೆಯ ಕಡಲು ನಟನೆಯಲ್ಲಿ ಕೈಗೆಟುಕದ ಮುಗಿಲು ಮರೆಯದ ಕಲಾವಿದೆ ಇವರು ಮರೆತರು ಇವರ ಇವರಿಂದ ಬೆಳೆದವರು ಸಾರುತ್ತಿದ್ದವು ಮೌಲ್ಯ ಇವರ ಚಿತ್ರಗಳು ಕಲಿಸುತ್ತಿದ್ದವು ಪಾಠ ಇವರ ಹಾಡುಗಳು ಜೀವನವೇ ಇರುತ್ತಿತ್ತು ಇವರ ಸಿನಿಮಾದಲ್ಲಿ ಬದುಕುತ್ತಿದ್ದರು ಸಿನಿಮಾದಂತೆ ಜನರು ಜೀವನದಲ್ಲಿ ಬಡವಾಯಿತು ಸಿನಿಮನೆ ಹಿರಿಯ ಕಲೆ ತಲೆಗಳಿಲ್ಲದೆ ಚಿತ್ರರಂಗ ಸಾಗಿದೆ ಕಲೆ...
- Advertisement -

More Articles Like This

- Advertisement -
close
error: Content is protected !!
Join WhatsApp Group