- Advertisement -
ಬೀದರ – ನಾನೊಂದು ತೀರ ನೀನೊಂದು ತೀರ ಅಂತ ಬೀದರ ಜಿಲ್ಲೆಯ ಇಬ್ಬರು ಸಚಿವರು ದೂರವಾಗಿ ಮಾತು ಬಿಟ್ಟಿದ್ದ ಕೇಂದ್ರ ಸಚಿವ ಹಾಗೂ ರಾಜ್ಯ ಸಚಿವರ ಮಧ್ಯೆ ರಾಜಿ ಸಂಧಾನ ಮಾಡಿಸಿದ ಸಿಎಂ ಬಸವರಾಜ್ ಬೊಮ್ಮಾಯಿ.
ಔರಾದ್ ಜನ ಸಂಕಲ್ಪ ಯಾತ್ರೆಯಲ್ಲಿ ಕೇಂದ್ರ ಸಚಿವ ಭಗವಂತ ಖೂಬಾ ಹಾಗೂ ಪಶು ಸಂಗೋಪನೆ ಸಚಿವ ಪ್ರಭು ಚವ್ಹಾಣ ಮಧ್ಯೆ ಮಧ್ಯಸ್ಥಿಕೆ ವಹಿಸಿದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಒಂದೇ ವೇದಿಕೆಯಲ್ಲಿ ಇರ್ವರನ್ನೂ ಒಂದು ಮಾಡಿದರು.
ಮಾಧ್ಯಮ ಕ್ಯಾಮರಾಗಳ ಮುಂದೆ ಇಬ್ಬರನ್ನು ಒಂದು ಮಾಡಿ ಇಬ್ಬರು ಕೈ ಕೈ ಮಿಲಾಯಿಸುವಂತೆ ಮಾಡಿ ಬಿಜೆಪಿ ಒಳಜಗಳಕ್ಕೆ ವಿರಾಮ ಹಾಕಿದರು.
- Advertisement -
ಚುನಾವಣೆ ಹತ್ತಿರ ಬರುತ್ತಿರುವ ಹೊತ್ತಿನಲ್ಲಿ ಜಿಲ್ಲೆಯ ಬಿಜೆಪಿ ಆಂತರಿಕ ಕಚ್ಚಾಟದಿಂದ ನಲುಗಿದ್ದು ಜಿಲ್ಲೆಯ ನಾಯಕರಲ್ಲಿ ಮನೆ ಮಾಡಿದ್ದ ಅಸಮಾಧಾನಕ್ಕೆಮುಖ್ಯಮಂತ್ರಿ ಮುಕ್ತಿ ಕೊಟ್ಟರು.
ವರದಿ: ನಂದಕುಮಾರ ಕರಂಜೆ, ಬೀದರ