ಬೀದರ – ಜಿಲ್ಲಾ ಸಂಕೀರ್ಣ ನಿರ್ಮಾಣ ಕುರಿತಂತೆ ಕೇಂದ್ರ ಸಚಿವ ಭಗವಂತ್ ಖೂಬಾ ಹಾಗೂ ರಾಜ್ಯ ಸಚಿವ ಪ್ರಭುಚೌಹಾಣ್ ನಡುವೆ ಭಿನ್ನಾಭಿಪ್ರಾಯ ಸ್ಫೋಟಗೊಂಡಿದೆ.
ವಿರೋಧ ಹೊರ ಹಾಕಿದ ಕೇಂದ್ರ ಸಚಿವ ಭಗವಂತ್ ಖೂಬಾ ಅವರು ಪತ್ರಕರ್ತರೊಡನೆ ಮಾತನಾಡುತ್ತ, ವಿಡಿಯೋ ಹಾಗೂ ಮಾತು ಕಟ್ ಮಾಡಲ್ಲಾ ಅಂದ್ರೆ ಹೇಳುತ್ತೇನೆ ಎನ್ನುತ್ತ, ಇದ್ದ ಸ್ಥಳದಲ್ಲೆ ಜಿಲ್ಲಾ ಸಂಕೀರ್ಣ ನಿರ್ಮಾಣವಾಗಬೇಕು ಎಂದರು.
ಆದರೆ ರೇಷ್ಮೆ ಇಲಾಖೆ ಅವರಣದಲ್ಲಿ ಜಿಲ್ಲಾ ಸಂಕೀರ್ಣ ನಿರ್ಮಾಣ ಆಗಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಭುಚೌಹಾಣ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಈ ಮೂಲಕ ಜಿಲ್ಲೆಯ ಒಂದೇ ಪಕ್ಷದ ಇಬ್ಬರು ಸಚಿವರಲ್ಲಿ ಭಿನ್ನಾಭಿಪ್ರಾಯ ವ್ಯಕ್ತವಾದಂತಾಗಿದೆ.
ಸ್ಥಳ ಪರಿಶೀಲನೆ ವೇಳೆ ನನಗೆ ಕನ್ವಿನ್ಸ್ ಮಾಡಿದ್ರು ನಾ ಒಪ್ಪಿಲ್ಲ ಎಂದು ಕೇಂದ್ರಸಚಿವ ಭಗವಂತ ಖೂಬಾ ಹೇಳಿದ್ದಾರೆ.
ಈ ಹಿಂದೆ ಈಶ್ವರ್ ಖಂಡ್ರೆ ಸಚಿವರಿದ್ದಾಗ ಮಾಮನಕೆರೆ ಬಳಿ ಜಿಲ್ಲಾ ಸಂಕೀರ್ಣಕ್ಕಾಗಿ ಸ್ಥಳ ನಿಗದಿ ಮಾಡಲಾಗಿತ್ತು ಆಗ ನಾನೇ ವಿರೋಧ ವ್ಯಕ್ತಪಡೆಸಿದ್ದೆ ಎಂದೂ ಅವರು ಹೇಳಿದರು.
ಸಚಿವರಿಬ್ಬರ ರಾಜಕೀಯ ಕೆರೆರಚಾಟಕ್ಕೆ ಸಾರ್ವಜನಿಕರಿಗೆ ಇನ್ನೆಷ್ಟು ದಿನ ತೊಂದರೆ ಉಂಟಗುವುದೋ ಎಂಬ ಆತಂಕ ಜನರಲ್ಲಿ ಮನೆ ಮಾಡಿದೆ.