- Advertisement -
ಬೀದರ – ಭಾರಿ ಮಳೆಯಿಂದ ತುಂಬಿಕೊಂಡು ಹರಿಯುತ್ತಿದ್ದ ಹಳ್ಳವನ್ನು ದಾಟುವಾಗ ಯುವಕ ಕೊಚ್ಚಿಕೊಂಡ ಹೋದ ಘಟನೆ ಬಸವಕಲ್ಯಾಣ ತಾಲೂಕಿನ ಧನ್ನೂರ (ಆರ್) ಗ್ರಾಮದಲ್ಲಿ ನಡೆದಿದೆ.
ಮಲ್ಲಪ್ಪ ಶರಣಪ್ಪ ಕರೆಪ್ಪನವರ್ (25) ನೀರಿನಲ್ಲಿ ಕೊಚ್ಚಿಕೊಂಡು ಹೋದ ಯುವಕ.
ಗ್ರಾಮದ ಹೊರವಲಯದ ಹೊಲದಲ್ಲಿ ಯುವಕನ ಮನೆ ಇದೆ. ಕೆಲಸದ ನಿಮಿತ್ತ ಊರಿಗೆ ಆಗಮಿಸಿದ್ದ ಮಲ್ಲಪ್ಪ ಮಳೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಮನೆಗೆ ಹೋಗಲು ಮುಂದಾಗಿದ್ದಾನೆ. ಗ್ರಾಮದ ಪಕ್ಕದಲ್ಲಿರುವ ಸೇತುವೆ ಮೇಲೆ ನೀರು ಹರಿದು ಹೋಗುತ್ತಿದ್ದರೂ ಸಹ ಯುವಕ ಮಲ್ಲಪ್ಪ ಮತ್ತೆ ಮಳೆ ಬಂದರೆ ಹೋಗಲು ಕಷ್ಟ ಎಂದು ಮೊಣಕಾಲು ಎತ್ತರದ ನೀರಿನಲ್ಲಿ ನಡೆದುಕೊಂಡು ಹೋಗಿದ್ದಾನೆ. ನೀರಿನ ಸೆಳೆತ ಜೋರಾಗಿದ್ದರಿಂದ ಮಲ್ಲಪ್ಪ ಕೊಚ್ಚಿಕೊಂಡು ಹೋಗಿದ್ದಾನೆ.
- Advertisement -
ವಿಷಯ ತಿಳಿದು ಸ್ಥಳಕ್ಕೆ ಶಾಸಕ ಡಾ.ಸಿದ್ದು ಪಾಟೀಲ್, ತಹಸಿಲ್ದಾರ್ ಶಾಂತನಗೌಡ ಭೇಟಿ ನೀಡಿದ್ದು ಯುವಕನ ಪತ್ತೆಗಾಗಿ ಕಾರ್ಯಾಚರಣೆ ನಡೆಯುತ್ತಿದೆ.
ವರದಿ: ನಂದಕುಮಾರ ಕರಂಜೆ, ಬೀದರ