- Advertisement -
ಬೀದರ: ಮತದಾನ ಕೇಂದ್ರದಲ್ಲಿ ಮತದಾರರಿಗೆ ಕೈ ಮುಗಿಯುವ ನೆಪದಲ್ಲಿ ಹಸ್ತದ ಗುರುತು ತೋರಿಸಿದ ಕಾಂಗ್ರೆಸ್ ಮುಖಂಡ ಈಶ್ವರ ಖಂಡ್ರೆ ಚುನಾವಣಾ ನಿಯಮ ಉಲ್ಲಂಘನೆ ಮಾಡಿದ್ದಾರೆ.
ಮತಗಟ್ಟೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಮತದಾನ ಮಾಡಲು ಸಾಲಿನಲ್ಲಿ ನಿಂತಿರುವ ಮತದಾರರಿಗೆ ಕೈ ಮುಗಿಯುತ್ತ ಹಸ್ತದ ಗುರುತನ್ನು ಮೇಲೆ ಮಾಡಿ ತೋರಸಿದರು ಈಶ್ವರ ಖಂಡ್ರೆ.
- Advertisement -
ಕಾನೂನಿನ ಪ್ರಕಾರ ಯಾವುದೇ ಅಭ್ಯರ್ಥಿ ಮತಗಟ್ಟೆ ಕೇಂದ್ರದಲ್ಲಿ ಮತದಾರರಿಗೆ ನಮಸ್ಕಾರ ಸನ್ನೆ ಮಾಡುವಂತಿಲ್ಲ. ಆದರೆ ಕಾನೂನು ಹೇಳುವ ಕಾಂಗ್ರೆಸ್ ನ ಕೆಪಿಸಿಸಿ ರಾಜ್ಯ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಮತಗಟ್ಟೆ ಕೇಂದ್ರದಲ್ಲಿ ಮತದಾರರಿಗೆ ಕೈ ಮೇಲೆ ಮಾಡಿ ತೋರಿಸಿ ಕಾನೂನು ಉಲ್ಲಂಘನೆ ಮಾಡಿದ್ದಾರೆ.
ಜಿಲ್ಲೆಯ ಭಾಲ್ಕಿ ಪಟ್ಟಣದಲ್ಲಿರುವ ಬೂತ್ ಸಂಖ್ಯೆ ೧೨೩ ಮತಗಟ್ಟೆ ಕೇಂದ್ರದಲ್ಲಿ ಈ ಘಟನೆ ನಡೆದಿದೆ.
ವರದಿ: ನಂದಕುಮಾರ ಕರಂಜೆ, ಬೀದರ