Bidar News: ಬಿಜೆಪಿ ಸುಲಭವಾಗಿ ಗೆಲ್ಲುವ ಕ್ಷೇತ್ರದಲ್ಲಿ ಸಂಕಷ್ಟ, ಸವಾಲುಗಳ ಮೇಲೆ ಸವಾಲು

Must Read

ಕೊರೋನಾ ಸಮರ್ಥವಾಗಿ ಎದುರಿಸಲು ಲಸಿಕೆ ಪಡೆಯಿರಿ – ಡಾ.ಶಾಂತವೀರ

ಸಿಂದಗಿ: ಕೋವಿಡ್ ಲಸಿಕೆ ಪಡೆಯುವುದರಿಂದ ಕೋವಿಡ್ ಸೋಂಕು ತಗುಲಿದರು ಯಾವುದೇ ಅಪಾಯವಾಗುವದಿಲ್ಲ ಲಸಿಕೆಯ ಬಗ್ಗೆ ತಪ್ಪು ಗ್ರಹಿಕೆ ಬಿಟ್ಟು 18 ವರ್ಷ ಮೇಲ್ಪಟ್ಟ ಎಲ್ಲರೂ ಕಡ್ಡಾಯವಾಗಿ...

ಪ್ರಕೃತಿಯೇ ನಿಜವಾದ ದೇವರು – ಶಾಂತ ಗಂಗಾಧರ ಶ್ರೀಗಳು

ಸಿಂದಗಿ: ಪ್ರಕೃತಿಯೇ ನಿಜವಾದ ದೇವರು ನಿಸರ್ಗವೇ ಕೂಡಲ ಸಂಗಮ ಎಂದು ಹೇಳಿದ ಬಸವಣ್ಣನವರ ಹಾಗೂ ಶರಣೆ ಮಾತುಗಳು ಅಕ್ಷರಶಃ ಪ್ರಸ್ತುತವಾಗಿವೆ. ಎಂದು ಪಟ್ಟಣದ ಗುರುದೇವಾಶ್ರಮದ ಶ್ರೀ ಶಾಂತಗಂಗಾಧರ...

ಉತ್ತಮ ಸಮಾಜ ನಿರ್ಮಾಣದಲ್ಲಿ ಶರಣರ ಪಾತ್ರ ಕುರಿತು ಪ್ರವಚನ

ಸಿಂದಗಿ: ಪ್ರತಿಯೊಬ್ಬರಲ್ಲಿ ವಚನ ಸಾಹಿತ್ಯ ಭಂಡಾರವೇ ಅಡಗಿರುತ್ತದೆ ಅದನ್ನು ಪ್ರಸ್ತುತ ಪಡಿಸುವ ಸಾಮರ್ಥ್ಯ ಹೊಂದಿದವರಿಗೆ ಮಾತ್ರ ಸಂಗ್ರಹ ಮಾಡುವ ಧ್ಯೇಯ ಇರುತ್ತದೆ ಅಂಥವರ ಸಾಲಿನಲ್ಲಿ ಶ್ರೀ ಶಾಂತಗಂಗಾಧರ...

ಬೀದರ – ಬಸವಣ್ಣನವರ ಕರ್ಮಭೂಮಿ ಬಸವಕಲ್ಯಾಣ ನಲ್ಲಿ ಉಪಚುನಾವಣೆ ನಡೆಯುತ್ತಿರುವ ಕ್ಷೇತ್ರಗಳಲ್ಲಿ ಬಿಜೆಪಿಗೆ ಸವಾಲುಗಳ ಮೇಲೆ ಸವಾಲು ಸಂಕಟ ಎದುರಾಗುತ್ತಿವೆಯೆನ್ನಬಹುದು.

ಈ ಕ್ಷೇತ್ರದಲ್ಲಿ ಬಿಜೆಪಿಯು ಮೊಟ್ಟ ಮೊದಲು ಎಡವಟ್ಟು ಮಾಡಿಕೊಂಡಿದ್ದು ಟಿಕೆಟ್ ವಿಚಾರದಲ್ಲಿ. ಸ್ಥಳೀಯ ನಾಯಕರನ್ನು ಬಿಟ್ಟು ಹೊರ ಜಿಲ್ಲೆಯ ಕಲಬುರಗಿ ಅಭ್ಯರ್ಥಿ ಆಯ್ಕೆ ಮಾಡಿಕೊಂಡಿದ್ದು. ಬಿಜೆಪಿ ಹಿರಿಯ ನಾಯಕರು ಸ್ಥಳೀಯ ನಾಯಕರನ್ನು ಮನವೊಲಿಸುವ ಪ್ರಯತ್ನ ಮಾಡಿದರಾದರೂ ಹದಿನೆಂಟು ಜನ ಟಿಕೆಟ್ ಆಕಾಂಕ್ಷಿಗಳು ಮನಸ್ಸಿಲ್ಲದ ಮನಸ್ಸಿನಿಂದ ಪ್ರಚಾರ ಮಾಡುತ್ತಾ ಇರುವುದು ಅಲ್ಲಲ್ಲಿ ಕಂಡು ಬಂದಿದೆ

ಈ ಹದಿನೆಂಟು ಜನರನ್ನು ಹೊರತು ಪಡಿಸಿ ಇನ್ನೊಬ್ಬ ಸ್ಥಳೀಯ ನಾಯಕ ಮಲ್ಲಿಕಾರ್ಜುನ ಖೊಬಾ ಬಿಜೆಪಿ ನಾಯಕ ನಿದ್ರೆಗೆಡಿಸಿದ್ದರು ಎಂದು ಹೇಳುವುದರಲ್ಲಿ ತಪ್ಪೇನೂ ಇಲ್ಲ ಎನ್ನಬಹುದು.

ಮರಾಠಿ ಪ್ರಾಧಿಕಾರವನ್ನು ರಚಿಸಿದ್ದೇ ಬಸವಕಲ್ಯಾಣ ಚುನಾವಣೆಗಾಗಿ

- Advertisement -

ಬಿಜೆಪಿ ಪ್ರಮುಖವಾಗಿ ಮರಾಠಿ ಪ್ರಾಧಿಕಾರವನ್ನು ರಚಿಸಿದ್ದೇ ಬಸವಕಲ್ಯಾಣ ಉಪಚುನಾವಣೆಯನ್ನು ಗಮನದಲ್ಲಿ ಇಟ್ಟುಕೊಂಡು ಎನ್ನುವುದು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿರುವ ಮಾತು.
ಯಾಕೆಂದರೆ, ಈ ಕ್ಷೇತ್ರದಲ್ಲಿ ಮುಸ್ಲಿಂ, ಲಿಂಗಾಯತ ಮತ್ತು ಮರಾಠಿ ಸಮುದಾಯದ ವೋಟ್ ಬ್ಯಾಂಕ್ ಅತಿಮುಖ್ಯ. ಆದರೆ, ಲಿಂಗಾಯತ ಸಮುದಾಯದ ವೋಟುಗಳು ಡಿವೈಡ್ ಆಗುವ ಸಾಧ್ಯತೆ ದಟ್ಟವಾಗಿದೆ.

ಕಾಂಗ್ರೆಸ್ಸಿನ ಬಿ.ನಾರಾಯಣರಾವ್

ಕಳೆದ ಅಂದರೆ 2018ರ ಅಸೆಂಬ್ಲಿ ಚುನಾವಣೆಯಲ್ಲಿ ಕಾಂಗ್ರೆಸ್ಸಿನ ಬಿ.ನಾರಾಯಣರಾವ್ ಅವರ ವಿರುದ್ದ ಸುಮಾರು ಹದಿನೇಳು ಸಾವಿರ ಮತಗಳಿಂದ ಸೋಲುಂಡಿದ್ದ ಮಲ್ಲಿಕಾರ್ಜುನ ಖೂಬಾ ಈ ಬಾರಿಯೂ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ, ಬಿಜೆಪಿಯವರು ಪಕ್ಷದ ಸಕ್ರಿಯ ಕಾರ್ಯಕರ್ತ ಶರಣು ಸಲಗರ ಅವರಿಗೆ ಟಿಕೆಟ್ ನೀಡಿದೆ. ಕ್ಷೇತ್ರಕ್ಕೆ ಸಂಬಂಧ ಪಟ್ಟವರು ಇವರಲ್ಲ ಎನ್ನುವ ಮಾತು ಕೇಳಿ ಬರುತ್ತಿರುವುದು ಒಂದು ಕಡೆಯಾದರೆ, ಖೂಬಾ ಕಣದಲ್ಲಿ ಪಕ್ಷೇತರರಾಗಿ ಕಣದಲ್ಲಿ ಉಳಿದಿದ್ದಾರೆ.

ಮಲ್ಲಿಕಾರ್ಜುನ ಖೂಬಾ ಬಂಡಾಯದ ತಲೆಬಿಸಿ

ಮಲ್ಲಿಕಾರ್ಜುನ ಖೂಬಾ

ಮಲ್ಲಿಕಾರ್ಜುನ ಖೂಬಾ ಅವರ ಮನವೊಲಿಸುವ ಜವಾಬ್ದಾರಿಯನ್ನು ಡಿಸಿಎಂ ಲಕ್ಷ್ಮಣ ಸವದಿ ಮತ್ತು ವಿ.ಸೋಮಣ್ಣ ಅವರಿಗೆ ಸಿಎಂ ವಹಿಸಿದ್ದರು. ಅವರ ಹಲವು ಸುತ್ತಿನ ಮಾತಿಗೆ ಖೂಬಾ ಜಗ್ಗದಿದ್ದಾಗ ಖುದ್ದು ಯಡಿಯೂರಪ್ಪನವರೇ ಅವರ ಮನವೊಲಿಕೆಗೆ ಫೋನ್ ಮಾಡಿದ್ದರು. ಆದರೂ, ಖೂಬಾ ಒಪ್ಪದೇ ಇರುವುದರಿಂದ ಬಿಜೆಪಿ ಪ್ರಮುಖವಾಗಿ ಲಿಂಗಾಯತ ವೋಟ್ ಬ್ಯಾಂಕ್ ಛಿದ್ರವಾಗದಂತೆ ನೋಡಿಕೊಳ್ಳಬೇಕಾಗಿದೆ.

ಬಿಜೆಪಿಯ ವರಿಷ್ಠರಿಗೆ ಪ್ರವೇಶವಿಲ್ಲ ಎಂದು ಮನೆಯ ಗೇಟಿಗೇ ಬೋರ್ಡ್!

ಬಿಜೆಪಿ ನಾಯಕರಿಗೆ ನಮ್ಮ ಮನೆಯಲ್ಲಿ ಪ್ರವೇಶ ಇಲ್ಲ ಎಂದು ಹಾಕಿದ ಬಂಡಾಯ ಅಭ್ಯರ್ಥಿ ಮಲ್ಲಿಕಾರ್ಜುನ ಖೊಬಾ

ಖೂಬಾ ಅವರ ಸಿಟ್ಟು ಎಷ್ಟರ ಮಟ್ಟಿಗೆ ಇದೆಯೆಂದರೆ, ಬಿಜೆಪಿಯ ವರಿಷ್ಠರಿಗೆ ಪ್ರವೇಶವಿಲ್ಲ ಎಂದು ಮನೆಯ ಗೇಟಿಗೆ ಬೋರ್ಡ್ ತಗಲು ಹಾಕಿದ್ದಾರೆ. ಸ್ವಾಭಿಮಾನ ಬಳಗ ಎನ್ನುವ ಅಭಿಮಾನಿಗಳನ್ನು ಕಟ್ಟಿಕೊಂಡು ಕ್ಷೇತ್ರದಾದ್ಯಂತ ಪ್ರಚಾರ ನಡೆಸುತ್ತಿರುವ ಖೂಬಾ, ಈ ರಾಜಕೀಯ ಗ್ರೌಂಡ್ ರಿಯಾಲಿಟಿಯನ್ನು ಅವಲೋಕಿಸಿದಾಗ ಬಿಜೆಪಿಗೆ, ಚುನಾವಣೆಯ ಹೊತ್ತಿಗೆ ದೊಡ್ಡ ತಲೆನೋವಾಗಿ ಪರಿಣಮಿಸುವ ಸಾಧ್ಯತೆಯಿದೆ.

ಬಿಜೆಪಿ ವರ್ಸಸ್ ಕಾಂಗ್ರೆಸ್

ಕಾಂಗ್ರೆಸ್ ಅಭ್ಯರ್ಥಿ ಮಲ್ಲಮ್ಮ

ಅನುಕಂಪದ ಆಧಾರ, ಲಿಂಗಾಯತ ಮತ ಇಬ್ಭಾಗವಾಗುವುದನ್ನು ಪ್ರಮುಖ ಲೆಕ್ಕಾಚಾರ ಕಾಂಗ್ರೆಸ್ ಹಾಕಿಕೊಂಡಿದೆ. ಆದರೆ, ಜೆಡಿಎಸ್ ಇಲ್ಲಿ ಅಲ್ಪಸಂಖ್ಯಾತ ಅಭ್ಯರ್ಥಿಯನ್ನು ಕಣಕ್ಕಿಳಿಸಿರುವುದು ಮತ್ತು ಉಮೇದುವಾರಿಕೆ ಹಿಂದಕ್ಕೆ ಪಡೆಯುವ ಕೊನೆಯ ದಿನದಂದು ಎನ್ ಸಿಪಿಯ ಎಂ.ಜೆ.ಮುಳೆ ನಾಮಪತ್ರ ಹಿಂದಕ್ಕೆ ಪಡೆದಿರುವುದರಿಂದ ಮರಾಠಿ ಮತಬ್ಯಾಂಕ್ ವಿಚಾರದಲ್ಲಿ ಮಾತ್ರ ಬಿಜೆಪಿ ನಿಟ್ಟುಸಿರು ಬಿಡುವಂತಾಗಿದೆ.

ವರದಿ: ನಂದಕುಮಾರ ಕರಂಜೆ,
ಟೈಮ್ಸ್ ಆಫ್ ಕರ್ನಾಟಕ, ಬೀದರ

- Advertisement -
- Advertisement -

Latest News

ಕೊರೋನಾ ಸಮರ್ಥವಾಗಿ ಎದುರಿಸಲು ಲಸಿಕೆ ಪಡೆಯಿರಿ – ಡಾ.ಶಾಂತವೀರ

ಸಿಂದಗಿ: ಕೋವಿಡ್ ಲಸಿಕೆ ಪಡೆಯುವುದರಿಂದ ಕೋವಿಡ್ ಸೋಂಕು ತಗುಲಿದರು ಯಾವುದೇ ಅಪಾಯವಾಗುವದಿಲ್ಲ ಲಸಿಕೆಯ ಬಗ್ಗೆ ತಪ್ಪು ಗ್ರಹಿಕೆ ಬಿಟ್ಟು 18 ವರ್ಷ ಮೇಲ್ಪಟ್ಟ ಎಲ್ಲರೂ ಕಡ್ಡಾಯವಾಗಿ...
- Advertisement -

More Articles Like This

- Advertisement -
close
error: Content is protected !!