ಬೀದರ ನಲ್ಲಿ ಕರೋನಾದ ಎರಡನೆ ಅಲೆಯನ್ನು ಯಶಸ್ವಿ ಯಾಗಿ ಹತೋಟಿಗೆ ತರಲು ಹೇಮಾ ಚಾರಿಟೇಬಲ್ ಟ್ರಸ್ಟ್ ವತಿಯಿಂದ ನಗರದಲ್ಲಿ ಬೃಹತ್ ಜನಜಾಗೃತಿ ಜಾಥಾ ಹಮ್ಮಿಕೊಳ್ಳಲಾಗಿತ್ತು.
ಬೀದರ ಜಿಲ್ಲೆಯಲ್ಲಿ ಕರೋನಾದ ಎರಡನೆ ಅಲೆ ಹೆಚ್ಚುತ್ತಿರುವುದನ್ನು ಮನಗಂಡ ಹೇಮಾ ಚಾರಿಟೇಬಲ್ ಟ್ರಸ್ಟ್ ಇಂದು ನಗರದಲ್ಲಿ ಕರೋನಾದ ಎರಡನೆ ಅಲೆ ಬಗ್ಗೆ ಜನರಲ್ಲಿ ಜನಜಾಗೃತಿ ಮೂಡಿಸುವ ಸಲುವಾಗಿ ನಗರದ ಗಾಂಧಿ ಗಂಜ್ ನಲ್ಲಿ ಬೃಹತ್ ಜನ ಜಾಗೃತಿ ಅಭಿಯಾನ ನಡೆಸಿ ಗಾಂಧಿ ಗಂಜ್ ನಲ್ಲಿನ ಅಂಗಡಿ ಮಾಲಿಕರ,ಅಂಗಡಿಯಲ್ಲಿ ಬರುವ ರೈತರ, ಹೋಟೆಲ್ ಮಾಲಿಕರ ನಿಯಮ ಪಾಲಿಸುವ ನಿಯಮಗಳು ಹಾಗೂ ವೈರಸ್ ಹರಡುವದನ್ನು ತಡೆಗಟ್ಟುವ ಮಾರ್ಗೋಪಾಯಗಳ ಬಗ್ಗೆ ಅರಿವನ್ನು ಮೂಡಿಸಿ ತಮ್ಮಲ್ಲಿ ಬರುವ ಪ್ರತಿಯೊಬ್ಬರನ್ನು ಮಾಸ್ಕ್ ಧರಿಸುವಂತೆ ನೋಡಿಕೊಂಡು ನಗರದಲ್ಲಿ ಕರೋನ ಎರಡನೇ ಅಲೆಯನ್ನು ಹತ್ತಿಕ್ಕಲು ಸರ್ಕಾರದೊಂದಿಗೆ ಸಹಕರಿಸುವಂತೆ ಜನ ಜಾಗೃತಿ ಜಾಥವನ್ನು ನಡೆಸಿದರು.
ಹೇಮಾ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷರಾದ ಹೇಮಾ ಪಾಟೀಲ, ನಂದಕುಮಾರ ಶಿವಕುಮಾರ್ ಲಾಡಗೇರಿ, ಅಂಕುಶ ಲಾಡಗೇರಿ ಹಾಗೂ ಚಾರಿಟಬಲ್ ಟ್ರಸ್ಟ್ ನ ಪದಾಧಿಕಾರಿಗಳು ಉಪಸ್ಥಿತರಿದ್ದರು.