spot_img
spot_img

Bidar News: ದೂರು ಕೊಡಲು ಬಂದವರಿಗೇ ಜೀವ ಬೆದರಿಕೆ ಹಾಕಿದ ಡಿವೈಎಸ್ ಪಿ

Must Read

spot_img
- Advertisement -

ಬೀದರ – ಬೀದರ ಉಸ್ತುವಾರಿ ಸಚಿವ ಪ್ರಭು ಚವ್ಹಾಣ ಅವರ ಕ್ಷೇತ್ರದಲ್ಲಿ ಡಿವೈಎಸ್ಪಿ ದೇವರಾಜ್ ಅವರದು ಅಂಧಾ ದರ್ಬಾರ್ ನಡೆದಿದೆ ಎಂದು ಸಾರ್ವಜನಿಕರು ದೂರಿದ ಪ್ರಸಂಗ ನಡೆದಿದೆ.

ದಲಿತ ಮಹಿಳೆಯ ಮೇಲೆ ಅತ್ಯಾಚಾರ ನಡೆದಿದ್ದು ಅದರ ಬಗ್ಗೆ ದೂರು ಕೊಡಲು ಹೋದವರಿಗೇ ದೇವರಾಜ ಅವರು ಜೀವ ಬೆದರಿಕೆ ಹಾಕಿದ್ದಾರೆನ್ನಲಾಗಿದೆ.

ಇದರ ಜೊತೆಗೆ ಕಳೆದ ಎರಡು ವರ್ಷಗಳಿಂದ ಪ್ರಭು ಚವ್ಹಾಣ ಅವರ ಕ್ಷೇತ್ರದಲ್ಲಿ ದಲಿತರ ಮೇಲೆ ಅನ್ಯಾಯದ ವಿರುದ್ಧ ದನಿಯೆತ್ತಿದವರನ್ನು ವ್ಯವಸ್ಥಿತವಾಗಿ ಹತ್ತಿಕ್ಕಲಾಗುತ್ತಿದೆ ಎಂಬ ದನಿಯೂ ಕೇಳಿಬರುತ್ತಿದೆ.

ಸಚಿವ ಪ್ರಭು ಚವ್ಹಾಣ
- Advertisement -

ಮೈತ್ರಿ ಸರ್ಕಾರದ ಬಿದ್ದು ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಔರಾದ ಕ್ಷೇತ್ರದ ಶಾಸಕರಾದ ಪ್ರಭು ಚವ್ಹಾಣ ಅವರು ಬೀದರ ಮತ್ತು ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದರು. ತಮ್ಮ ಪರವಾಗಿ ಕೆಲಸ ಮಾಡುವ ದೇವರಾಜ್ ಅವರನ್ನು ಡಿವೈಎಸ್ ಪಿ ಯಾಗಿ ಭಾಲ್ಕಿ ಕ್ಷೇತ್ರಕ್ಕೆ ಕರೆತಂದು ಕ್ಷೇತ್ರದಲ್ಲಿನ ದಲಿತರ ಮೇಲಿನ ಅನ್ಯಾಯದ ದೂರುಗಳನ್ನು ವ್ಯವಸ್ಥಿತವಾಗಿ ಹತ್ತಿಕ್ಕುತ್ತಿದ್ದಾರೆ ಎಂಬ ದೂರುಗಳು ಕೇಳಿಬರುತ್ತಿವೆ.

 

ಕಳೆದ ತಿಂಗಳು ಖೇಡ ಗ್ರಾಮದಲ್ಲಿ ದಲಿತ ಮಹಿಳೆಯೊಬ್ಬಳ ಮೇಲೆ ಅತ್ಯಾಚಾರದ ಪ್ರಯತ್ನ ನಡೆದಿದೆ. ಆರೋಪಿಗಳ ವಿರುದ್ಧ ಬಂಟಿ ದರಬಾರ ಅವರು ದೂರು ನೀಡಿದರೆ ಆರೋಪಿಯನ್ನು ಬಂಧಿಸುವುದನ್ನು ಬಿಟ್ಟು ದೂರು ಕೊಟ್ಟವರನ್ನೇ ಡಿವೈಎಸ್ ಪಿ ದೇವರಾಜ್ ಅವರು ವಿಚಾರಣೆ ನಡೆಸಿದ್ದಲ್ಲದೆ ಈ ವಿಷಯದಲ್ಲಿ ತಲೆ ಹಾಕಬಾರದು, ಹಾಕಿದರೆ ತನ್ನನ್ನೇ ಮುಗಿಸುವ ಬೆದರಿಕೆ ಹಾಕಿದ್ದಾರೆ ಎಂದು ದರಬಾರ ಅವರು ಪತ್ರಿಕಾಗೋಷ್ಠಿಯಲ್ಲಿ ಯೊಂದರಲ್ಲಿ ತಮ್ಮ ಅಳಲನ್ನು ತೋಡಿಕೊಂಡರು.

ಪತ್ರಿಕಾಗೋಷ್ಠಿ ನಡೆಸಿದ ಬಂಟಿ ದರಬಾರ
- Advertisement -

ದಲಿತ ಮಹಿಳೆಯ ಪ್ರಕರಣದ ಬಗ್ಗೆ ಸಚಿವರು ಗಮನ ಹರಿಸಬೇಕು. ಆರೋಪಿಯನ್ನು ಬಂಧಿಸಿ ಮಹಿಳೆಗೆ ನ್ಯಾಯ ಕೊಡಿಸಬೇಕು ಎಂಬುದು ಸಾರ್ವಜನಿಕರ ಬೇಡಿಕೆಯಾಗಿದ್ದು ಸಚಿವರು ಹಾಗೂ ಡಿವೈಎಸ್ ಪಿ ದೇವರಾಜ್ ಅವರು ನಿಷ್ಪಕ್ಷಪಾತವಾಗಿ ನಡೆದುಕೊಳ್ಳುವರೋ ಎಂಬುದನ್ನು ಕಾದು ನೋಡಬೇಕು.

ವರದಿ: ನಂದಕುಮಾರ ಕರಂಜೆ
ಟೈಮ್ಸ್ ಆಫ್ ಕರ್ನಾಟಕ, ಬೀದರ

- Advertisement -

2 COMMENTS

  1. ಪೋಲಿಸ ಅಂದ್ರೆ ನೆ ಹಾಗೆ ದೂರು ಕೊಡುವವರಿಗೆ ಬೋಳಿ ಮಕ್ಕಳೆ ಅಂತ ಬೈಯುದು ಈಗಿನ‌ಕಾನೂನ ಪದ್ಧತಿ ಆಗಿದೆ ಈಗಿನ‌ ಪೊಲಿಸರಿಂದಲೆ ನಮ್ಮ‌ದೇಶದಲ್ಲಿ ಅಪರಾಧಗಳು ಜಾಸ್ತಿ ಆಗಿವೆ ಇದನ್ನು ಧ್ವನಿ ಎತ್ತಿದಲ್ಲಿ ಅವರ ಮೇಲೆ ಪೊಲಿಸಗಿರಿ ಲಾಟಿ ಸುರು ಆಗುತ್ತದೆ ಯಾಕೆ ಅಂದ್ರೆ ನ್ಯಾಯಲಯದಗಿಂತಲು ಪೋಲಿಸರು ದೊಡ್ಡವರು ಆಗಿ ಬಿಟ್ಟಿದ್ದಾರೆ ಪೊಲಿಸರಗಿಂತಲು ನಮ್ಮ ಸೈನಿಕರೆ ನಿಷ್ಠತೆ ಬಲಿಷ್ಠವಾಗಿದೆ

    • ನಮ್ಮ ದೇಶದಲ್ಲಿ ಬಡ ಮಹಿಳೆಯರಿಗೆ ಬಡಜನರಿಗೆ ಯಾವತ್ತಾದರೂ ನ್ಯಾ ಸಿಕ್ಕಿದೆಯಾ ? ಶ್ರೀಮಂತರಿಗೆ ಈ ಕಾನೂನನ್ನು ಸುಲಭವಾಗಿದೆ ಈಗಂತೂ ಬಿಜೆಪಿ ಸರ್ಕಾರ ದಲಿತರ ಕಥೆ ಮುಗಿತ್ತಾ ಇದೆ ನಿಮ್ಮನ್ನ ಮುಗಸೆ ಮುಗಸತ್ತಾರೆ ಇಲ್ಲಿ ಬದುಕಬೇಕ ಅಂದ್ರೆ ಗುಲಾಮರಾಗಿ ಬದುಕುವ ಹಾದಿ ದೂರವಿಲ್ಲಾ

Comments are closed.

- Advertisement -

Latest News

ಕವನ: ಕಲೆಯ ಲೀಲೆ

"ಕಲೆಯ ಲೀಲೆ" ಲೀಲಾವತಿ ಎಂದರೆ ಕಲೆಯ ಕಡಲು ನಟನೆಯಲ್ಲಿ ಕೈಗೆಟುಕದ ಮುಗಿಲು ಮರೆಯದ ಕಲಾವಿದೆ ಇವರು ಮರೆತರು ಇವರ ಇವರಿಂದ ಬೆಳೆದವರು ಸಾರುತ್ತಿದ್ದವು ಮೌಲ್ಯ ಇವರ ಚಿತ್ರಗಳು ಕಲಿಸುತ್ತಿದ್ದವು ಪಾಠ ಇವರ ಹಾಡುಗಳು ಜೀವನವೇ ಇರುತ್ತಿತ್ತು ಇವರ ಸಿನಿಮಾದಲ್ಲಿ ಬದುಕುತ್ತಿದ್ದರು ಸಿನಿಮಾದಂತೆ ಜನರು ಜೀವನದಲ್ಲಿ ಬಡವಾಯಿತು ಸಿನಿಮನೆ ಹಿರಿಯ ಕಲೆ ತಲೆಗಳಿಲ್ಲದೆ ಚಿತ್ರರಂಗ ಸಾಗಿದೆ ಕಲೆ...
- Advertisement -

More Articles Like This

- Advertisement -
close
error: Content is protected !!
Join WhatsApp Group