Homeಸುದ್ದಿಗಳುBidar News: ಭಗವಂತ ಖೂಬಾ ವಿರುದ್ಧ ತೀವ್ರವಾದ ಪ್ರತಿಭಟನೆ

Bidar News: ಭಗವಂತ ಖೂಬಾ ವಿರುದ್ಧ ತೀವ್ರವಾದ ಪ್ರತಿಭಟನೆ

ಬೀದರ – ಬಸವಕಲ್ಯಾಣ ಉಪಚುನಾವಣೆಗೆ ಟಿಕೆಟ್ ನೀಡಿಕೆ ಸಂಬಂಧವಾಗಿ ಮಲ್ಲಿಕಾರ್ಜುನ ಖೂಬಾ ಬೆಂಬಲಿಗರು ಸಂಸದ ಭಗವಂತ ಖೂಬಾ ಅವರ ಭಾವಚಿತ್ರಕ್ಕೆ ಚಪ್ಪಲಿ ಏಟು ಹಾಕಿ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಮಲ್ಲಿಕಾರ್ಜುನ ಖೂಬಾ ಜೆಡಿಎಸ್ ತೊರೆದು ಬಿಜೆಪಿಗೆ ಬಂದವರು ಹಾಗೂ ಇದೇ ಜಿಲ್ಲೆಯವರು ಆದರೂ ಅವರಿಗೆ ಬಿಜೆಪಿ ಟಿಕೆಟ್ ಕೊಡದೆ ಬೇರೆ ಜಿಲ್ಲೆಯವರಾದ ಶರಣು ಸಲಗರ ಅವರಿಗೆ ಹಣ ಪಡೆದು ಟಿಕೆಟ್ ನೀಡಲಾಗಿದೆ ಎಂದು ಬೆಂಬಲಿಗರು ಪ್ರತಿಭಟನೆಯಲ್ಲಿ ಹೇಳಿಕೊಂಡಿದ್ದಾರೆ.

ಸ್ಥಳೀಯ ಬಿಜೆಪಿಯಲ್ಲಿ ಹದಿನೆಂಟು ಜನ ನಾಯಕರಿದ್ದಾರೆ ಅವರಿಗೆ ಯಾರಿಗಾದರೂ ಒಬ್ಬರಿಗೆ ಟಿಕೆಟ್ ಕೊಡಬಹುದಿತ್ತು ಆದರೂ ಬೇರೆ ಜಿಲ್ಲೆಯವರಿಗೆ ಟಿಕೆಟ್ ಕೊಟ್ಟಿರುವ ಹಿಂದಿನ ಮರ್ಮವೇನು ಎಂದು ಕ್ಷೇತ್ರದಲ್ಲಿ ಮತದಾರರು ಮಾತನಾಡಿಕೊಳ್ಳುವಂತಾಗಿದೆ. ಅಲ್ಲದೆ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಕೂಡ ನಿನ್ನೆ ಬಸವಕಲ್ಯಾಣ ಟಿಕೆಟ್ ಹರಾಜಾಗಿದೆ ಎಂದು ಆರೋಪ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಸ್ಥಳೀಯ ನಾಯಕರನ್ನು ಹೈಕಮಾಂಡ್ ಹೇಗೆ ಸಮಾಧಾನ ಪಡಿಸುತ್ತದೆಯೋ ಕಾದು ನೋಡಬೇಕು.

ವರದಿ : ನಂದಕುಮಾರ ಕರಂಜೆ
ಟೈಮ್ಸ್ ಆಫ್ ಕರ್ನಾಟಕ, ಬೀದರ

RELATED ARTICLES

Most Popular

error: Content is protected !!
Join WhatsApp Group