Bidar News: ಆಕ್ಸಿಜನ್ ಪೂರೈಕೆಯಿಂದ ಬದುಕಿದವು 14 ಬಡ ಜೀವಗಳು

0
1174

ಟೌನ್ ಸರ್ಕಲ್ ಇನ್ಸಪೆಕ್ಟರ್ ಡಿ.ಜಿ ರಾಜಣ್ಣ ನೇತೃತ್ವದಲ್ಲಿ ಪೂರೈಕೆ..

ಬೀದರ – ನಗರದ ಖಾಸಗಿ ಆಸ್ಪತ್ರೆಯೊಂದರಲ್ಲಿ ರಾತ್ರೋರಾತ್ರಿ ಆಕ್ಸಿಜನ್ ಕೊರತೆಯಾಗಿ ೧೪ ಜನ ರೋಗಿಗಳ ಸ್ಥಿತಿ ಅಪಾಯದ ಮಟ್ಟ ತಲುಪಿದ್ದು ಇಲ್ಲಿನ ಸಿಪಿಐ ರಾಜಣ್ಣ ಅವರ ಸತತ ಪ್ರಯತ್ನದಿಂದ ಆಕ್ಸಿಜನ್ ಪೂರೈಕೆಯಾಗಿ ೧೪ ಜೀವಗಳು ಬದುಕಿದ ಘಟನೆ ನಡೆದಿದೆ.

ಬೀದರ್ ನಗದ ಬಿಬಿಎಸ್ ಆಸ್ಪತ್ರೆಯಲ್ಲಿ ಘಟನೆ ನಡೆದಿದ್ದು ವೈದ್ಯರು, ಸಿಬ್ಬಂದಿಗಳ ನಿರ್ಲಕ್ಷ್ಯದಿಂದ ಆಮ್ಲಜನಕದ ಕೊರತೆ ಉಂಟಾಗಿತ್ತು
ಆಸ್ಪತ್ರೆಯಲ್ಲಿ ೧೪ ಜನ ಕೋವಿಡ್ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದರು..

ತಡ ರಾತ್ರಿ ಒಂದು ಗಂಟೆ ಸುಮಾರಿಗೆ ಆಕ್ಸಿಜನ್ ಜನ‌ ಕೊರತೆ ಉಂಟಾಯಿತು.

ಪೊಲೀಸರ‌ ಸಮಯ ಪ್ರಜ್ಜೆಯಿಂದ ಒಂದೇ ‌ಗಂಟೆಯಲ್ಲಿ ಆಕ್ಸಿಜನ್ ಪೂರೈಕೆಯಾಗಿ ಜೀವಗಳು ಬದುಕುಳಿದವು ಎನ್ನಲಾಗಿದೆ.

ಇತ್ತ ಆಕ್ಸಿಜನ್ ಖಾಲಿಯಾಗಲು ಬಂದರೂ ಗಮನಿಸದ ಆಸ್ಪತ್ರೆ ಸಿಬ್ಬಂದಿಯ ಬಗ್ಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದ್ದು ಸಿಪಿಐ ಡಿಜೆ ರಾಜಣ್ಣ ಹಾಗೂ ಪೊಲೀಸ್ ಸಿಬ್ಬಂದಿಯ ಪ್ರಯತ್ನದ ಬಗ್ಗೆ ವ್ಯಾಪಕ ಪ್ರಶಂಸೆಗಳೂ ವ್ಯಕ್ತವಾಗಿವೆ.

ವರದಿ: ನಂದಕುಮಾರ ಕರಂಜೆ
ಟೈಮ್ಸ್ ಆಫ್ ಕರ್ನಾಟಕ, ಬೀದರ