spot_img
spot_img

ಅಂತರ ರಾಜ್ಯ ಕಳ್ಳರ ಬಂಧಿಸಿ ಹೆಡೆಮುರಿ ಕಟ್ಟಿದ ಬೀದರ್ ಪೊಲೀಸ್

Must Read

ಬೀದರ – ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಅಂತರ ರಾಜ್ಯ ಕಳ್ಳರನ್ನು ಬಂಧಿಸುವಲ್ಲಿ ಯಶಸ್ವಿಯಾದ  ಬೀದರ್ ಜಿಲ್ಲೆಯ ಪೊಲೀಸರು.

ಸುಮಾರು ಕಡೆಯಲ್ಲಿ ಕಳ್ಳತನ ಪ್ರಕರಣದಲ್ಲಿ ಭಾಗಿಯಾದ ನೆರೆಯ ರಾಜ್ಯ ಮಹಾರಾಷ್ಟ್ರದ ಖದೀಮರು.

ಬೀದರ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡೆಕ್ಕಾ ಕಿಶೋರ್ ಬಾಬು ಹೆಚ್ಚುವರಿ ಪೊಲೀಸ ಅಧಿಕಾರಿ ಮಹೇಶ್ ಮೇಘಣ್ಣನವರ್, ಭಾಲ್ಕಿ ಉಪ ವಿಭಾಗ ಸಹಾಯಕ ಪೊಲೀಸ್ ಅಧೀಕ್ಷಕರಾದ  ಪೃತ್ವಿಕ ಶಂಕರ  ಅವರ ಮಾರ್ಗದರ್ಶನದ ಮೇರೆಗೆ ಅಂತರ ರಾಜ್ಯ ಕಳ್ಳರ ಹಡೆಮುರಿ ಕಟ್ಟುವಲ್ಲಿ ಯಶಸ್ವಿಯಾದ ಗಡಿ ಬೀದರ್ ಜಿಲ್ಲೆಯ ಪೊಲೀಸರು.

ಭಾಲ್ಕಿ ಗ್ರಾಮೀಣ ವೃತ್ತ ನಿರೀಕ್ಷಕರಾದ  ವೀರಣ್ಣ ಎಸ. ದೊಡ್ಡಮನಿ ನೇತೃತ್ವದ ಐದು ಜನ, ಪಿಎಸ್ಐ ನಂದ ಕುಮಾರ ಮೊಳೆ ಅವರನ್ನ ಒಳಗೊಂಡ ತಂಡವನ್ನು ಯಶಸ್ವಿಯಾಗಿ ಬಳಸಿಕೊಂಡು ಅಂತರ ರಾಜ್ಯ ಕಳ್ಳರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬಂಧಿತ ಆರೋಪಿಗಳಾದ

  • ಅಮರ  ಧನಾಜಿ ಶಿಂಧೆ ವಯಸ್ಸು 26 ವರ್ಷ
    ಉ:ಕೂಲಿಕೆಲಸ ಜಾತಿ:ಪಾರ್ದಿ ಸಾ: ರಾವೂತ ನಗರ, ಅಕ್ಲೋಜ ತಾ:ಮಾಳಸಿರಸ್ ಜಿ: ಸೋಲಾಪೂರ,
  • ಸುರೇಶ  ಭೋಸ್ಲೆ ವಯಸ್ಸು 32 ವರ್ಷ ಉ: ಕೂಲಿಕೆಲಸ
    ಜಾತಿ: ಪಾರ್ದಿ ಸಾ: ತೀರ್ಥಖುರ್ದ ತಾ: ತುಳಜಾಪೂರ ಜಿ: ಉಸ್ಮನಾಬಾದ,
  • ವಿಜಯ ಕಾಳೆ ವಯಸ್ಸು 21 ವರ್ಷ ಉ: ಕೂಲಿಕೆಲಸ ಪಾದಿ೯ ಸಾ: ಹಂಗರಗಾ ತಾ: ತುಳಜಾಪೂರ ಜಿ: ಉಸ್ಮನಾಬಾದ

ಈ ಮೂವರು ಅಂತರಾಜ್ಯ ಬಂಧಿತ ಆರೋಪಿಗಳಾಗಿದ್ದು ಕಳ್ಳರಿಂದ ಸುಮಾರು 3 ಲಕ್ಷ ರೂಪಾಯಿ ಬೆಲೆಬಾಳುವ 65 ಗ್ರಾಂ ಚಿನ್ನ ಮತ್ತು ಒಂದು ಹೋಂಡಾ ಶೈನ್ ಮೋಟರ್ ಸೈಕಲ್ ಜಪ್ತಿ ಮಾಡಿಕೊಂಡಿರುತ್ತಾರೆ.

ಈ ಒಂದು ತಂಡದ ಕಾರ್ಯಕ್ಕೆ ಪೊಲೀಸ್ ವರಿಷ್ಠಾಧಿಕಾರಿಗಳಾದ ಡೆಕ್ಕಾ ಕಿಶೋರ್ ಬಾಬು, ಹೆಚ್ಚುವರಿ ಪೊಲೀಸ ಅಧಿಕಾರಿಗಳಾದ ಮಹೇಶ್ ಮೇಘನನವರ್,ಭಾಲ್ಕಿ ಉಪ ವಿಭಾಗ ಸಹಾಯಕ ಪೊಲೀಸ್ ಅಧೀಕ್ಷಕರಾದ ಪೃತ್ವಿಕ ಶಂಕರ ಸಿಬ್ಬಂದಿಗಳ ಮತ್ತು ತಂಡದ ಕಾರ್ಯವನ್ನು ಶ್ಲಾಘಿಸಿರುತ್ತಾರೆ.


ವರದಿ: ನಂದಕುಮಾರ ಕರಂಜೆ, ಬೀದರ

- Advertisement -
- Advertisement -

Latest News

ವಿರಾಟಪುರ ವಿರಾಗಿ ಚಿತ್ರದ ವಾಲ್ ಪೋಸ್ಟರ್ ಬಿಡುಗಡೆ

ಸಿಂದಗಿ: ಹಾನಗಲ್ಲ ಗುರುಕುಮಾರ ಮಹಾಸ್ವಾಮಿಗಳವರ ಉಸಿರೇ ಸಮಾಜವಾಗಿತ್ತು ತಮ್ಮ ಬಗ್ಗೆ ಕಿಂಚಿತ್ತೂ ವಿಚಾರ ಮಾಡಿದವರಲ್ಲ ಎಂದು ಡಾ. ಪ್ರಭುಸಾರಂಗದೇವ ಶಿವಾಚಾರ್ಯರು ಹೇಳಿದರು. ಪಟ್ಟಣದ ಸಾರಂಗಮಠದಲ್ಲಿ ಹಾನಗಲ್ಲ ಶ್ರೀ...
- Advertisement -

More Articles Like This

- Advertisement -
close
error: Content is protected !!