ಬೀದರ – ಸಂಕ್ಷಿಪ್ತವಾಗಿ ಹೇಳಬೇಕೆಂದರೆ ನಗರದಲ್ಲಿ ದರೋಡೆ ಘಟನೆ ಬಗ್ಗೆ.. ರಾಜಕಾರಣಿಯಿಂದ ಹಿಡಿದು ಎಡಜಿಪಿ ತನಕ ಎಲ್ಲರೂ ವಿಭಿನ್ನ ದೃಷ್ಟಿಕೋನದ ಅಭಿಪ್ರಾಯ ವ್ಯಕ್ತಪಡಿಸಿದ್ದು ಘಟನೆ ತೀವ್ರ ಗಾಂಭೀರ್ಯ ಪಡೆದುಕೊಳ್ಳುತ್ತಿದೆ.
ನಡು ಬೀದಿಯಲ್ಲಿ ತುಪಾಕಿ ಹಿಡಿದು ರಕ್ತದೊಕುಳಿ ಎಬ್ಬಿಸಿ ಹತ್ಯೆ ಮಾಡಿ ಹೆಣದ ಮುಂದೆ ಹಣ ತುಂಬಿದ ಪೆಟ್ಟಿಗೆ ಹೆಣಗಾಡುತ್ತ ಸಾಗಿಸಿದ ಖತರನಾಕ್ ಖದೀಮರು ಇನ್ನೂ ಅಂದರ್ ಆಗಿಲ್ಲ. ಖಾಕಿ ಪಡೆಯ ಕಣ್ಣೇದುರಲ್ಲೆ ಶೂಟೌಟ್ ನಡೆಸಿ ಕಣ್ಮರೆಯಾದ ದರೋಡೆಕೋರರು. ಎರಡು ರಾಜ್ಯಗಳ ಪೊಲೀಸರ ನಿದ್ದೆಗೆಡಿಸಿದ ನರಕಾಸುರರ ಬಂಧನಕ್ಕಾಗಿ ಬಲೆ ಬಿಸಿರುವ ಪೊಲೀಸರು. ಬೀದರ್ ಹತ್ಯಾಕಾಂಡದ ಕಂಪ್ಲೀಟ್ ಸ್ಟೋರಿ ಇಲ್ಲಿದೆ ನೋಡಿ.
ಧೂಮ್ ಎಂಬ ಹಿಂದಿ ಚಲನತ್ರದ ಮಾಡರಿಯಲ್ಲಿ ಹೀಗೆ ಬ್ಯಾಂಕ್ ದರೋಡೆ ಮಾಡಿ ಸ್ಟೈಲ್ ನಲ್ಲಿ ಬೈಕ್ ಹತ್ತಿ ಪೊಲೀಸರಿಗೆ ಚೆಳ್ಳೆ ಹಣ್ಣು ತಿನಿಸಿ ಭಯ ಭೀತಿ ಇಲ್ಲದೆ ದ ಗ್ರೇಟ್ ವಿಲನ್ ಎಂದೆನಿಸಿಕೊಂಡ ಬಾಲಿವುಡ್ ನ ಖ್ಯಾತ ನಟ ಅಮಿರ ಖಾನ್ ನಟನೆಯ ಧೂಮ್ ಚಲನ ಚಿತ್ರ ಮಾದರಿಯಲ್ಲೆ ಬೀದರ್ ನ ಎಟಿಎಂ ಹತ್ಯಾಕಾಂಡ ನಡೆದಿದೆ.
ನಡು ಬೀದಿಯಲ್ಲಿ ಬೆಳ್ಳಂಬೆಳಗ್ಗೆ ನಗರದ ಜಿಲ್ಲಾಧಿಕಾರಿಗಳ ಕಚೇರಿ ಪಕ್ಕದ ಎಸ್ ಬಿಐ ಬ್ಯಾಂಕ್ ನ ಎಟಿಎಂ ಗೆ ಹಣ ತುಂಬಲು ಬಂದ ಸಿಎಂಎಸ್ ಸಂಸ್ಥೆಯ ವ್ಯಾನ ಲೂಟಿ ಮಾಡಿದ ಇಬ್ಬರು ಬೈಕ್ ಸವಾರರು ನಿನ್ನೆಯಿಂದ ಪೊಲೀಸರಿಗೆ ಕಂಡು ಕಾಣದಂತೆ ಮಾಯವಾಗ್ತಿದ್ದಾರೆ. ಗಿರಿ ವೇಂಕಟೇಶ ಎಂಬಾತರ ಮೇಲೆ ಗುಂಡು ಹಾರಿಸಿ ಹತ್ಯೆ ಮಾಡಿ ಶಿವಕುಮಾರ ಎಂಬಾತನನ್ನು ಗಾಯಗೊಳಿಸಿರುವ ಈ ಆಗಂತುಕರು ನೆರೆಯ ತೆಲಂಗಣದ ಹೈದ್ರಾಬಾದ್ ನ ಬೆಗಂಪೇಟ್ ನಲ್ಲಿ ರೋಷಣ ಟ್ರಾವೇಲ್ಸ್ ಸಹಾಯಕ ಜಹಾಂಗಿರನ ಮೇಲೆ ತುಪಾಕಿ ಹಾರಿಸಿ ಅಲ್ಲಿದ್ದ ಖಾಕಿ ಪಡೆಯ ಎದುರಲ್ಲೆ ಹಣ ತುಂಬಿದ ಬ್ಯಾಗ್ ಹೊತ್ತಕೊಂಡು ಓಡಿ ಹೋಗಿದ್ದಾರೆ. ಘಟನೆ ನಡೆದ ನಂತರ ಖುದ್ದು ರಾಜ್ಯ ಅಪರಾಧ ವಿಭಾಗದ ಎಡಿಜಿಪಿ ಪಿ.ಹರಿಶೇಖರನ್ ಬೀದರ್ ನಲ್ಲೆ ಮೊಕ್ಕಾಂ ಮಾಡಿ ಪ್ರಕರಣದ ಬಗ್ಗೆ ಮಾಹಿತಿ ನೀಡಿದ್ದಾರೆ.
ಅಲ್ಲದೆ ಘಟನೆಗೆ ಸಂಬಂಧಿಸಿದಂತೆ ಅರಣ್ಯ ಸಚಿವ ಈಶ್ವರ ಖಂಡ್ರೆ ಮಾತನಾಡಿ, ಹೈದ್ರಾಬಾದ್ ನ ಕೇರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಶಿವಕುಮಾರ ಅವರನ್ನು ಭೇಟಿ ಮಾಡಿ ನಗರದ ಘಟನಾ ಸ್ಥಳಕ್ಕೆ ಭೇಟಿ ನೀಡಿ ಸರ್ಕಾರ ಈ ವಿಷಯ ಗಂಭೀರವಾಗಿ ಪರಿಗಣಿಸಿದೆ ಆರೋಪಿಗಳನ್ನು ಬಿಡೊದಿಲ್ಲ ಎಂದು ಹೇಳಿದ್ದಾರೆ.
ಇನ್ನೂ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟು ಹೋಗಿದೆ ಈ ಸರ್ಕಾರದ ಪತನ ನಿಶ್ಚಿತ ಅಂತ ಶಾಸಕ ಪ್ರಭು ಚವ್ಹಾಣ ಬೀದರ್ ಘಟನೆಯನ್ನು ಕೋಟ್ ಮಾಡಿ ಮಾತನಾಡಿದ್ದಾರೆ.
ಬೀದರ್ ನಲ್ಲಿ ಗುಂಡು ಹಾರಿಸಿ ಹಣದ ಟ್ರಂಕ್ ಎತ್ತಾಕೊಂಡು ಹೊದ ದರೋಡೆಕೊರರು ಸುಲ್ತಾನಪೂರ್, ಮಲ್ಕಾಪೂರ್ ಮಾರ್ಗ ವಾಗಿ ತೆಲಂಗಣದ ಹೈದ್ರಾಬಾದ್ ಗೆ ಸೇರಿಕೊಂಡ ವಿಡಿಯೊ ಕೂಡ ಲಭ್ಯವಾಗಿದೆ. ಒಟ್ಟನಲ್ಲಿ ಹಣಕ್ಕಾಗಿ ಹೆಣ ಹಾಕಿದ ಹಂತಕರು ಅಂದರ್ ಅಗುವ ಕಾಲ ಯಾವಾಗ ಕೂಡಿ ಬರುತ್ತೋ ಕಾದು ನೋಡಬೇಕು.
ವರದಿ : ನಂದಕುಮಾರ ಕರಂಜೆ, ಬೀದರ