ಬೀದರ: ಕಲ್ಲಿನ ನಂದಿಯ ಮೂರ್ತಿ ನೀರು ಕುಡಿಯುತ್ತಿರುವ ಪವಾಡವೊಂದು ಬೀದರ ಜಿಲ್ಲೆಯಲ್ಲಿ ನಡೆದಿದ್ದು, ಇದನ್ನು ಕಣ್ತುಂಬಿಕೊಳ್ಳಲು ಜನ ಸಾಗರವೇ ಹರಿದು ಬರುತ್ತಿದೆ.
ಇಂಥ ಘಟನೆ ನಡೆದಿದ್ದು ನಗರದ ಹೊರವಲಯದ ಧುಮಸಾಪುರ ಗ್ರಾಮದಲ್ಲಿ. ಹೆಣ್ಮಕ್ಕಳು ಚಮಚದಿಂದ ಕಲ್ಲಿನ ಮೂರ್ತಿಗೆ ನೀರು ಕುಡಿಸುತ್ತಿದ್ದಾರೆ. ಒಂದು ಹನಿಯೂ ನೀರು ಚೆಲ್ಲದಂತೆ ವಿಗ್ರಹ ನೀರು ಕುಡಿದಿದೆ. ಇದು ವಿಸ್ಮಯವೋ, ಪವಾಡವೋ ಗೊತ್ತಿಲ್ಲ. ಆದರೆ ಮೂರ್ತಿ ನೀರು ಕುಡಿದಿದ್ದು ನಿಜ ಎನ್ನುತ್ತಾರೆ ಜನರು.
ಬೀದರ ನಗರದ ಹೊರವಲಯ ಧುಮಸಾಪುರ (ಎಸ ಎಂ ಕೃಷ್ಣಾ ನಗರ) ಗ್ರಾಮದಲ್ಲಿ ಭವಾನಿ ಮಾತೆ ಮಂದಿರ ಇದೆ. ದೇವಿಯ ಮೂರ್ತಿ ಎದುರು ಸುಮಾರು ೧೧ ವರ್ಷದ ಹಿಂದಿನ ನಂದಿ ವಿಗ್ರಹ ಪ್ರತಿ ಸ್ಥಾಪನೆ ಮಾಡಲಾಗಿತ್ತು. ದೇವಸ್ಥಾನದ ಪೂಜಾರಿಯಾದ ಶಶಿಕಲಾ ಮಠಪತಿ ಅವರು ಎಂದಿನಂತೆ ಅಭಿಷೇಕ ಮುಗಿಸಿ ತೀರ್ಥವನ್ನು ನಂದಿ ಮೂರ್ತಿ ಎದುರು ಇಟ್ಟಿದ್ದಾರೆ. ನೋಡುನೋಡುತ್ತಿದ್ದಂತೆ ಮೂರ್ತಿ ತೀರ್ಥವನ್ನು ಕುಡಿದಿದೆ.
ಸುದ್ದಿ ಸುತ್ತಮುತ್ತಲಿನ ಗ್ರಾಮಗಳಿಗೂ ಹರಡಿ ಜನರು ಧುಮಸಾಪುರ ಕಡೆಗೆ ಹೆಜ್ಜೆ ಹಾಕಿದರು. ಬೆಳ್ಳೂರು, ಎಸ್.ಎಂ. ಕೃಷ್ಣ ನಗರ, ಗುಂಪಾ, ಕುಂಬಾರವಾಡಾ ಸೇರಿದಂತೆ ವಿವಿಧ ಕಡೆಯಿಂದ ಜನ ಆಗಮಿಸಿ ನಂದಿ ಮೂರ್ತಿಗೆ ನೀರು ಕುಡಿಸಿ ಭಕ್ತಿಯಿಂದ ನಮಿಸಿದ ಘಟನೆ ನಡೆಯಿತು ಎಂಬುದಾಗಿ ಇಲ್ಲಿನ ಪೂಜಾರಿಯಾಗಿರುವ ಶಶಿಕಲಾ ಮಠಪತಿ ಹೇಳುತ್ತಾರೆ.
ದಸರಾ ಹಬ್ಬದಲ್ಲಿ ಈ ದೇವಾಲಯದಲ್ಲಿ ಶಶಿಕಲಾ ಮಠಪತಿ ಅವರು ಒಂಬತ್ತು ದಿನ ಕೈಯಲ್ಲಿ ಭವಾನಿ ಘಟ ಹಿಡಿದು ಪುಜೆ ಸಲಿಸುತ್ತಾರೆ ಇಲ್ಲಿಗೆ ಜನರು ತಮ್ಮ ನೂರಾರು ಕಷ್ಟ ಕಾರ್ಪಣ್ಯಗಳು ಹಿಡಿದುಕೊಂಡು ಬರುತ್ತಾರೆ ಬೇಡಿದ ವರವು ಈ ದೇವಾಲಯದಲ್ಲಿ ಸಿಗುತ್ತದೆ ಅನ್ನುವ ನಂಬಿಕೆ ಜನರದು. ಮಕ್ಕಳಿಲ್ಲದವರಿಗೆ ಮಕ್ಕಳಾಗಿವೆ ಅನ್ನುತ್ತಾರೆ. ಎಷ್ಟು ಸತ್ಯ ಇದೆ ಎಂದು ಜನರು ಆಶ್ಚರ್ಯ ವ್ಯಕ್ತಪಡಿಸಿದರು. ಆದರೆ ಕೆಲ ಭಕ್ತರು ಮಾತ್ರ ಈ ಪವಾಡವನ್ನು ನೋಡೋಣ ಎಂದು ದೇವಸ್ಥಾನಕ್ಕೆ ಬಂದು ನಂದಿಮೂರ್ತಿ ನೀರು ಕುಡಿಯುವ ದೃಶ್ಯ ಕಣ್ಣು ತುಂಬಿಕೊಂಡರು ಕಳೆದ ಭಾನುವಾರದಿಂದ ಪ್ರತಿನಿತ್ಯ ಪೂಜೆ ಮಾಡಿ ಕಲ್ಲಿನ ಬಸವಣ್ಞನಿಗೆ ನೀರು ಕುಡಿಸುತ್ತಿದ್ದೇವೆ ಅನ್ನುತ್ತಾರೆ ಭಕ್ತೆ ಪದ್ಮಾವತಿಯವರು.
ಒಟ್ಟಾರೆ ಕಲ್ಲಿನ ನಂದಿ ಬಸವಣ್ಣನಿಗೆ ಬಂದ ಭಕ್ತರು ನೀರು ಕುಡಿಸಿ ಹೋಗುತ್ತಿದ್ದಾರೆ..
ಪ್ರಪಂಚ ವಿಸ್ಮಯಗಳ ಆಗರ. ಇಲ್ಲಿ ಆಶ್ಚರ್ಯ, ವಿಸ್ಮಯ, ಪವಾಡದಂಥ ಚಕಿತಗಳು ನಡೆಯುತ್ತಲೇ ಇರುತ್ತವೆ. ಇಂಥ ವಿಸ್ಮಯಗಳೇ ಜನರಲ್ಲಿ ದೇವರ ಮೇಲಿನ ನಂಬಿಕೆ ಹೆಚ್ಚಿಸುವುದು. ಸದ್ಯ ಕಲ್ಲಿನ ನಂದಿ ಮೂರ್ತಿ ನೀರು ಕುಡಿಯುತ್ತಿರುವ ಪವಾಡ ಅಥವಾ ವಿಸ್ಮಯ ಎಷ್ಟು ದಿವಸ ನಡೆಯತ್ತದೆ ಎಂಬುದನ್ನು ಕಾದು ನೋಡಬೇಕು.
ವರದಿ: ನಂದಕುಮಾರ ಕರಂಜೆ, ಬೀದರ