Bidar: ರಾಸಾಯನಿಕ ತ್ಯಾಜ್ಯ ತುಂಬಿರುವ ವಾಹನ ತಡೆದು ಪೊಲೀಸರಿಗೆ ಒಪ್ಪಿಸಿದ ಸಾರ್ವಜನಿಕರು

Must Read

ಬೀದರ: ಗಡಿ ಜಿಲ್ಲೆ ಬೀದರ್ ಜಿಲ್ಲಾದ್ಯಂತ  ಅನಧಿಕೃತ ಕಂಪನಿಗಳು ತಲೆ ಎತ್ತಿರುವದು ಮೇಲ್ನೋಟಕ್ಕೆ ಕಂಡು ಬಂದಿದ್ದು ಕೆಲವು ಕಂಪನಿಗಳಿಗೆ ಸ್ಥಳೀಯ ರಾಜಕೀಯ ನಾಯಕರ ಬೆಂಬಲ ಇರುವುದು ಕೂಡ ಕಂಡುಬರುತ್ತದೆ.

ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ತವರೂರಿನಲ್ಲಿ ಅನಧಿಕೃತ ಕಂಪನಿಯಿಂದ ಕದ್ದು ಮುಚ್ಚಿ ರಸಾಯನಿಕ ತ್ಯಾಜ್ಯವನ್ನು ಮಧ್ಯ ರಾತ್ರಿ ವೇಳೆ ರೈತರ ಹೊಲದಲ್ಲಿ ಅಥವಾ ನಾಲೆಯಲ್ಲಿ  ಬಿಟ್ಟು ಹೊಗುತ್ತಿರುವಾಗ ಲಾರಿಯನ್ನು ಹಿಡಿದು ಸಾರ್ವಜನಿಕರು ಪೊಲೀಸರಿಗೆ ಒಪ್ಪಿಸಿದರು.

ಬೀದರ್ ಜಿಲ್ಲೆ  ಹುಮನಾಬಾದ ಇಂಡಸ್ಟ್ರೀಯಲ್ ನಿಂದ ಬೇರೆ ಕಡೆ ಡಂಪ್ ಮಾಡಲು ಹೊರಟ ರಾಸಾಯನಿಕ ಟ್ಯಾಂಕನ್ನು  ಕನಕಟ್ಟಾ ರಸ್ತೆ ಮೇಲೆ ಸಾರ್ವಜನಿಕರು ತಡೆದು ಪೊಲೀಸರಿಗೆ ಒಪ್ಪಿಸಿರುವ ಘಟನೆ ನಡೆದಿದೆ. ಕೇವಲ ಹುಮನಾಬಾದ ಅಷ್ಟೇ ಅಲ್ಲಾ ಹುಮನಾಬಾದ ತಾಲ್ಲೂಕಿನ ಗ್ರಾಮಗಳಿಗೂ ಇಲ್ಲಿನ ಕಾರ್ಖಾನೆಗಳು ಹಾನಿಕಾರಕ ತಾಜ್ಯವನ್ನು ಹರಿದು ಬಿಡುತ್ತಿವೆ ಎಂಬ ಆತಂಕ ಜನರಲ್ಲಿ ಮೂಡಿದೆ. ಕೆಲವೇ ದಿನಗಳ ಹಿಂದೆ ಕ್ಷೇತ್ರದ ಶಾಸಕರು ಭೇಟಿ ನೀಡಿದ್ದರೂ ಕೂಡ ಕಾರ್ಖಾನೆ ಗಳು ಕ್ಯಾರೇ ಎನ್ನದೆ ತಮ್ಮ ಕೆಲಸ ತಾವು ಮುಂದುವರೆಸಿವೆ,ಈ ರೀತಿ ರಾಜಾರೋಷವಾಗಿ ವಿಷಪೂರಿತ ರಾಸಾಯನಿಕ ತ್ಯಾಜ್ಯ  ರವಾನಿಸುವ ಸುದ್ದಿ ಕೇಳಿ ಬರುತಿತ್ತು ಇದೀಗ ನೇರವಾಗಿ ಜನರು ಇದನ್ನು ತಡೆದಿರುವ ಘಟನೆ ನಡೆದಿರುವುದು ಆಶ್ಚರ್ಯಕರ ಸಂಗತಿಯಾಗಿದೆ.ರಾಸಾಯನಿಕ ತ್ಯಾಜ್ಯ ರವಾನೆ ಆಗುತ್ತಿರುವ ಕುರಿತು ಮಾಲಿನ್ಯ ನಿಯಂತ್ರಣ ಅಧಿಕಾರಿಗಳಿಗೆ ಇದರ ಬಗ್ಗೆ ದೂರು ನೀಡಿದ್ದಾರೆ ಎಂದು ಹೇಳಲಾಗುತ್ತಿದೆ, ದೂರು ನೀಡಿದರೂ ಕೂಡ ಅಧಿಕಾರಿಗಳಿಂದ ಯಾವುದೇ ಕ್ರಮ ಕೈಗೊಳ್ಳಲು ಆಗದ ಹಿನ್ನೆಲೆ ಈ ಕೆಲಸವನ್ನು ಸಾರ್ವಜನಿಕರು ಮಾಡಿರುವುದು ಶ್ಲಾಘನಿಯವಾಗಿದೆ ಎಂದು ಜನರು ಅಲ್ಲಲ್ಲಿ ಮಾತನಾಡುತ್ತಿರುವುದು ಕೇಳಿ ಬರುತ್ತಿದೆ.

ಈ ವಿಷಯದಲ್ಲಿ ಬೀದರ್ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅರಣ್ಯ ಮತ್ತು ಪರಿಸರ ಮಂತ್ರಿ ಯಾವ ರೀತಿ ಕ್ರಮವನ್ನು ತೆಗೆದುಕೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕು.


ವರದಿ: ನಂದಕುಮಾರ ಕರಂಜೆ, ಬೀದರ

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group