ಬೀದರ – ಸ್ಟಾರ್ ಏರ್ ಲೈನ್ಸ್ ವಿಮಾನದ ಮೂಲಕ ಬೀದರ್ ಬೆಂಗಳೂರು ವಾರದಲ್ಲಿ ಮೂರು ದಿನ ಸೇವೆ ಆರಂಭವಾಗಿದೆ.
ಕಳೆದ ಕರೋನಾ ಸಂದರ್ಭದಲ್ಲಿ ಈ ನಾಗರಿಕ ವಿಮಾನಯಾನ ಸ್ಥಗಿತಗೊಂಡಿತ್ತು. ಉಡಾನ್ ಯೋಜನೆ ಅಡಿಯಲ್ಲಿ ಮತ್ತೆ ಶುರುವಾದ ನಾಗರಿಕ ವಿಮಾನವನ್ನು ಕೇಂದ್ರ ಸಚಿವ ಭಗವಂತ ಖೂಬಾ ಅವರು ದೀಪ ಬೆಳಗಿಸಿ ಕೇಕ್ ಕಟ್ ಮಾಡುವ ಮೂಲಕ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಕೇಂದ್ರ ಸಚಿವ ಭಗವಂತ ಖೂಬಾ, ನಮ್ಮ ಮೋದಿ ಸರ್ಕಾರ ಜನಪರ ಕಾರ್ಯ ಮಾಡುತ್ತಿದ್ದು,ನಮ್ಮ ಕಾರ್ಯಗಳ ಬಗ್ಗೆ ಜನರೇ ಹೇಳುತ್ತಾರೆ ಎಂದರು.
ಜಿಲ್ಲೆಯ ರೈತರಿಗೆ ಬೆಳೆ ವಿಮೆ ಹಣ ಕೊಡುವಲ್ಲಿ ಬೀದರ್ ಜಿಲ್ಲೆ ಪ್ರಥಮ ಸ್ಥಾನದಲ್ಲಿದೆ.ಜಿಲ್ಲೆಯ ರೈತರಿಗೆ ಬೆಳೆ ವಿಮೆ ಹಣ ಸಾಕಷ್ಟು ಸಹಕಾರಿಯಾಗಿದೆ ಎಂದೂ ಖೂಬಾ ಹೇಳಿದರು.
ಈ ಸಂದರ್ಭದಲ್ಲಿ ಬೀದರ್ ಶಾಸಕ ರಹೀಮ್ ಖಾನ್,ಬಿಜೆಪಿ ಮುಖಂಡರಾದ ಡಾ.ಶೈಲೆಂದ್ರ ಬೆಲ್ದಾಳೆ, ಸ್ಟಾರ್ ಏರ್ ಲೈನ್ಸ್ ಅಧಿಕಾರಿಗಳು ಉಪಸ್ಥಿತರಿದ್ದರು.
ವರದಿ: ನಂದಕುಮಾರ ಕರಂಜೆ, ಬೀದರ