- Advertisement -
ಬೀದರ – ಜಿಲ್ಲೆಯಲ್ಲಿ ಸತತ ಆರು ದಿನಗಳಿಂದ ಧಾರಾಕಾರ ಮಳೆ ಸುರಿಯುತ್ತಿದ್ದು ತಗ್ಗು ಪ್ರದೇಶಗಳಲ್ಲಿ ನೀರು ಹರಿದು ಜನ ಜೀವನ ಅಸ್ತವ್ಯಸ್ತವಾಗಿದೆ. ಬೀದರ ನಗರವೂ ಕೂಡ ಇದಕ್ಕೆ ಹೊರತಾಗಿಲ್ಲ.
ಕೇಂದ್ರ ಬಸ್ ನಿಲ್ದಾಣದಲ್ಲಿ ಎಲ್ಲೆಂದರಲ್ಲಿ ನೀರು ತುಂಬಿಕೊಂಡಿದ್ದು ಪ್ರಯಾಣಿಕರು ಪರದಾಡಿದರು. ಬಸ್ ನಿಲ್ದಾಣಕ್ಕೆ ಜಲ ದಿಗ್ಬಂಧನವುಂಟಾಗಿ ಪರ ಊರುಗಳಿಗೆ ಹೋಗಬೇಕಾದವರು ಬಸ್ ಹತ್ತಲು ಹತ ಸಾಹಸ ಪಟ್ಟರು.
- Advertisement -
ಬೀದರ್, ಔರಾದ್, ಭಾಲ್ಕಿ ಸೇರಿದಂತೆ ಹಲವೆಡೆ ಮಳೆರಾಯನ ಆರ್ಭಟದಿಂದಾಗಿ ಉಕ್ಕಿ ಹರಿಯುತ್ತಿರುವ ನದಿ, ಹಳ್ಳ- ಕೊಳ್ಳಗಳು, ರೈತರ ಜಮೀನುಗಳಿಗೆ ನುಗ್ಗಿದ ನೀರು ಅಕ್ಷರಶಃ ಜನರ ಬದುಕನ್ನು ನೀರು ಪಾಲು ಮಾಡಿಬಿಟ್ಟಿವೆ.
ವರದಿ: ನಂದಕುಮಾರ ಕರಂಜೆ, ಬೀದರ