spot_img
spot_img

ಬೀದರ್ ಪೊಲೀಸರ ಭರ್ಜರಿ ಕಾರ್ಯಾಚರಣೆ; 30 ಲಕ್ಷ ಮೌಲ್ಯದ ಮದ್ಯ ಜಪ್ತಿ

Must Read

ಬೀದರ: ರಾಜ್ಯದಲ್ಲಿ ಅಪರೂಪದ ಪ್ರಕರಣ ಇದು. ಕಳ್ಳತನ ಮಾಡಲು ಕಳ್ಳರು ಹತ್ತಾರು ದಾರಿ ಹುಡುಕಿಕೊಂಡು ಕಳ್ಳತನ ಮಾಡಿದರೆ, ಬೀದರ್ ಪೊಲೀಸರು ಪೋಲಿಸರು ತಾವೇನೂ ಕಮ್ಮಿ ಇಲ್ಲ ಎಂದು ತೋರಿಸಿ ಕೊಟ್ಟಿದ್ದು ಅಪಘಾತದ ನೆಪದಲ್ಲಿ ಮದ್ಯದ ಲಾರಿ ಲೂಟಿ ಮಾಡಿದ ಪ್ರಕರಣ ಬೆನ್ನತ್ತಿ ಹತ್ತು ಜನರ ತಂಡವನ್ನು ಜೈಲು ಕಂಬಿ ಹಿಂದೆ ಕಳಿಸಿದ್ದಾರೆ

ಈ ಸ್ಟೋರಿ ಸಂಕ್ಷಿಪ್ತವಾಗಿ ಹೀಗಿದೆ:

ABR Logistics pvt Ltd ವತಿಯಿಂದ Hermes Distillery ( sub Leases United Spirits Ltd ರಾಯಭಾಗದ ಕಂಪನಿಯಿಂದ ಮದ್ಯದ ಕಾಟನಗಳನ್ನು ತುಂಬಿಕೊಂಡು ಬೀದರ್ ಜಿಲ್ಲೆಯ ಮೈಲೋರನಲ್ಲಿರವ ( ಕೆ ಎಸ್ ಬಿ ಪಿಲ್ ಬೀದರ್ ಗೊಡೌನಗೆ ಸೇರಬೇಕಿತ್ತು ಆದರೆ ಹುಮನಬಾದ ಬೀದರ್ ಮಧ್ಯದಲ್ಲಿ ದುಬುಲಗುಂಡಿ ಕ್ರಾಸ್ ಹತ್ತಿರ ಲಾರಿಗೆ ಅಪಘಾತವಾಗಿದೆ.

ಇದೇ ಸಂದರ್ಭದಲ್ಲಿ ಲಾರಿಯಲ್ಲಿ ಇದ್ದ 30 ಲಕ್ಷ ಮೌಲ್ಯದ  ಕಾಟನಗಳು ಮಂಗ ಮಾಯ ಆಗಿದ್ದು, ಲಾರಿ ಡ್ರೈವರ್‌ ನೀಡಿದ ದೂರಿನ ಮೇಲೆ ಬೀದರ್ ಪೊಲೀಸರು ಕಾರ್ಯಾಚರಣೆ ನಡೆಸಿದರು.

ಈ ಸಂಬಂಧ ಹತ್ತು ಮಂದಿಯ ಗ್ಯಾಂಗ್ ಒಂದನ್ನು ಸೆರೆಹಿಡಿದು ಲಾರಿ ಯಲ್ಲಿ ಇದ್ದ ಮದ್ಯದ ಕಾಟನಗಳನ್ನು ಬೀದರ್ ಪೋಲಿಸರು ಜಪ್ತಿ ಮಾಡಿ ಹತ್ತು ಜನರನ್ನು ಬಂಧಿಸಿದರು.

ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿದ ಹುಮ್ನಾಬಾದ್ ಪೊಲೀಸರು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ 458 ಕಾಟನ್ ಮದ್ಯ ಜಪ್ತಿ ಹಾಗೂ 10 ಜನ ಆರೋಪಿಗಳ ಬಂಧನ ಮಾಡಲಾಗಿದೆ.

ಯಶವಂತ, ಮುಸ್ತಾಫ್, ಭೀಮಶಂಕರ್, ಅಂಬರೀಶ್ ಸೇರಿದಂತೆ 10 ಜನ ಆರೋಪಿಗಳ ಬಂಧನ ಮಾಡಲಾಗಿದ್ದು ಕೃತ್ಯಕ್ಕೆ ಬಳಸಿದ ಒಂದು ಕಾರು, ಬುಲೇರೋ ಗುಡ್ಸ್ ಹಾಗೂ ಮೂರು ಕಾರುಗಳು ಜಪ್ತಿ ಮಾಡಿಕೊಳ್ಳಲಾಗಿದೆ.

ಬೀದರ್ ಜಿಲ್ಲೆಯ ಹುಮ್ನಾಬಾದ್ ತಾಲೂಕಿನ ದುಬಲಗುಂಡಿ ಕ್ರಾಸ್ ಬಳಿ ಎಸ್ಪಿ ಕಿಶೋರ್ ಬಾಬು ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ಮಾಡಲಾಗಿದೆ.

ಈ ಕುರಿತು ಹುಮ್ನಾಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.


ವರದಿ: ನಂದಕುಮಾರ ಕರಂಜೆ, ಬೀದರ

- Advertisement -
- Advertisement -

Latest News

ಉಂಡು ಮಲಗಿದ ಮೇಲೂ ಗಂಡ ಹೆಂಡಿರ ಜಗಳ !

ಸಂಸಾರದ ಬಂಡಿ ಸರಾಗವಾಗಿ ಸಾಗಬೇಕಾದರೆ ಗಂಡ ಹೆಂಡತಿ ಎನ್ನುವ ಎರಡು ಗಾಲಿಗಳು ಸಮಸಮವಾಗಿ ಚಲಿಸಬೇಕು. ಎರಡೂ ಗಾಲಿಗಳಿಗೆ ಪ್ರಾಧಾನ್ಯತೆಯಿದೆ. ಒಂದು ಹೆಚ್ಚು ಒಂದು ಕಡಿಮೆ ಇಲ್ಲ....
- Advertisement -

More Articles Like This

- Advertisement -
close
error: Content is protected !!