spot_img
spot_img

ಶಾಸಕ ಬಾಲಚಂದ್ರ ಜಾರಕಿಹೊಳಿಯವರ ನೇತೃತ್ವದಲ್ಲಿ ಮೂರನೇ ಬಾರಿ ಬೈಕ್ ರ್ಯಾಲಿ

Must Read

ಕಲ್ಲೋಳಿಯಿಂದ ಕೌಜಲಗಿ ಮಾರ್ಗದವರೆಗೆ ಮೇರಾ ಭಾರತ ಮಹಾನ್

ಮೂಡಲಗಿ– ಸ್ವಾತಂತ್ರ್ಯ ಅಮೃತ ಮಹೋತ್ಸವದ ನಿಮಿತ್ತ ಅರಭಾವಿ ಬಿಜೆಪಿ ಮಂಡಲದಿಂದ ಶಾಸಕ ಹಾಗೂ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರ ಸಾರಥ್ಯದಲ್ಲಿ ಮೂರನೇ ಬಾರಿ ಬೈಕ್ ರ್ಯಾಲಿಯು ಸೋಮವಾರದಂದು ಜರುಗಿತು.

ಕಲ್ಲೋಳಿ ಪಟ್ಟಣದ ರಾಮಲಿಂಗೇಶ್ವರ ಶಿಕ್ಷಣ ಸಂಸ್ಥೆಯಲ್ಲಿ ಕಲ್ಲೋಳಿಯಿಂದ ಗೋಕಾಕ್ ನಾಕಾ- ಕೌಜಲಗಿವರೆಗಿನ ( ದಂಡಿನ ಮಾರ್ಗ ರಸ್ತೆ) ಬೈಕ್ ರ್ಯಾಲಿಗೆ ಜಿ.ಪಂ.ಅಧ್ಯಕ್ಷ ಬಸಗೌಡ ಪಾಟೀಲ ಹಾಗೂ ಯುವ ಧುರೀಣ ಸರ್ವೋತ್ತಮ ಜಾರಕಿಹೊಳಿ ಅವರು ಜಂಟಿಯಾಗಿ ಚಾಲನೆ ನೀಡಿದರು.

ಕಲ್ಲೋಳಿಯಿಂದ ಅಡಿಬಟ್ಟಿ, ಮೆಳವಂಕಿ, ಚಿಗಡೊಳ್ಳಿ, ಕಲಾರಕೊಪ್ಪ, ಹಡಗಿನಾಳ, ಉದಗಟ್ಟಿ ಕ್ರಾಸ್, ಕಪರಟ್ಟಿ, ಬಿಲಕುಂದಿ ಮಾರ್ಗವಾಗಿ ಕೌಜಲಗಿವರೆಗೆ ನೂರಾರು ಕಾರ್ಯಕರ್ತರು ಬೈಕ್ ರ್ಯಾಲಿಯಲ್ಲಿ ಭಾಗವಹಿಸಿದ್ದರು.

ಸ್ವಾತಂತ್ರ್ಯ ಅಮೃತ ಮಹೋತ್ಸವ ಸಂದರ್ಭದಲ್ಲಿ ಬಿಜೆಪಿ ವತಿಯಿಂದ ಹಮ್ಮಿಕೊಳ್ಳಲಾದ ಬೈಕ್ ರ್ಯಾಲಿಗೆ ಸಾರ್ವಜನಿಕ ರಿಂದ ವ್ಯಾಪಕವಾಗಿ ಬೆಂಬಲ ವ್ಯಕ್ತವಾಗಿದೆ.

ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಸಮರ್ಥ ನೇತೃತ್ವದಲ್ಲಿ ಈಗಾಗಲೇ ಮೂರು ಬಾರಿ ಬೈಕ್ ರ್ಯಾಲಿ ಮತ್ತು ಒಂದು ಬಾರಿ ಟ್ರ್ಯಾಕ್ಡರ್ ರ್ಯಾಲಿಯನ್ನು ಹಮ್ಮಿಕೊಳ್ಳುವ ಮೂಲಕ ಅರಭಾವಿ ಕ್ಷೇತ್ರಾದ್ಯಂತ ಮೇರಾ ಭಾರತ ಮಹಾನ್ ಮೊಳಗಿತು.

ಈ ಮೂಲಕ ಜನರಲ್ಲಿ ಜಾಗೃತಿ ಮೂಡಿಸುವ ಮಹಾನ್ ಕಾರ್ಯಕ್ಕೆ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಮುಂದಾಗಿ ಒಟ್ಟಾರೆಯಾಗಿ ನಾಲ್ಕು ಬೃಹತ್ ರ್ಯಾಲಿಗಳನ್ನು ಸಂಘಟಿಸುವ ಮೂಲಕ ಕಾರ್ಯಕರ್ತರ ಪಡೆಯನ್ನು ಸಜ್ಜುಗೊಳಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ನೀಲಕಂಠ ಕಪ್ಪಲಗುದ್ದಿ, ಅರಭಾವಿ ಬಿಜೆಪಿ ಮಂಡಲ ಅಧ್ಯಕ್ಷ ಮಹಾದೇವ ಶೆಕ್ಕಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುಭಾಸ ಪಾಟೀಲ, ಮಹಾಂತೇಶ ಕುಡಚಿ, ಸುಭಾಸ ಕುರಬೇಟ, ಬಿ.ಬಿ.ದಾಸನವರ, ಅಶೋಕ ಖಂಡ್ರಟ್ಟಿ, ಮಲ್ಲಪ್ಪ ಹೆಬ್ಬಾಳ, ಮಲ್ಲು ಕಡಾಡಿ, ವಸಂತ ತಹಶೀಲ್ದಾರ, ಆರ್ಕೆ ಮಹಾರಡ್ಡಿ,ಬಸಪ್ಪ ಯಾದಗೂಡ, ಈರಪ್ಪ ಹೆಬ್ಬಾಳ, ಅಶೋಕ ಮಕ್ಕಳಗೇರಿ, ಶಾಸಕರ ಆಪ್ತ ಸಹಾಯಕ ನಾಗಪ್ಪ ಶೇಖರಗೋಳ, ಬಿಜೆಪಿ ವಿವಿಧ ಮೋರ್ಚಾಗಳ ಪದಾಧಿಕಾರಿಗಳು, ಹಲವು ಗ್ರಾಮಗಳ ಮುಖಂಡರು ಉಪಸ್ಥಿತರಿದ್ದರು.

- Advertisement -
- Advertisement -

Latest News

ಗಾಣಿಗ ಅಭಿವೃದ್ಧಿ ನಿಗಮ ಸ್ಥಾಪನೆಗೆ ಕಲ್ಲಿನಾಥ ಶ್ರೀ ಆಗ್ರಹ

ಮೂಡಲಗಿ: ಜಗತ್ತಿಗೆ ಬೆಳಕನ್ನು ಕೊಟ್ಟ  ಗಾಣಿಗ ಸಮುದಾಯ ಇಂದು ಗಾಣಗಳು ಬತ್ತಿ ಹೋಗಿ ಯಂತ್ರೋಪಕರಣ ಬಂದಾಗಿನಿಂದ ಮೂಲ ಕಸಬು ಕಳೆದುಕೊಂಡು ಶೋಷನೆಗೆ ಒಳಗಾಗಿರುವದರಿಂದ ಗಾಣಿಗ ಸಮಾಜಕ್ಕೆ...
- Advertisement -

More Articles Like This

- Advertisement -
close
error: Content is protected !!