ಡೋಣಿ ಸಮೀಪದ ಕಪ್ಪತಗುಡ್ಡದ ಮಡಿಲಲ್ಲಿರುವ ಶ್ರೀ ನಂದಿವೇರಿ ಸಂಸ್ಥಾನ ಮಠದ ಆವರಣದಲ್ಲಿ ಪೂಜ್ಯಶ್ರೀ ಶಿವಕುಮಾರ ಮಾಹಾಸ್ವಾಮಿಗಳು ನಂದಿವೇರಿ ಮಠರವರ ಸನ್ನಿಧಿಯಲ್ಲಿ ಹಾಗೂ ಭಾಲಚಂದ್ರ ಜಾಬಶೆಟ್ಟಿಯವರ ಸಾರಥ್ಯದಲ್ಲಿ ರವಿವಾರ ದಿನಾಂಕ 12/1/2025 ರಂದು ಜರುಗಿದ 8 ನೇ ಚಾರಣೋತ್ಸವದಲ್ಲಿ ಗದಗಿನ ಧರಿತ್ರಿ ಕೃಷಿ ಪರಿವಾರದಿಂದ ಸಾವಯವ ಸಂತೆ ಆಯೋಜಿಸಲಾಗಿತ್ತು.
ಪ್ರಮಾಣೀಕೃತ ವಿಷಮುಕ್ತ, ಸಾವಯವ, ಸತ್ವಭರಿತ, ಅಮೃತ ಆಹಾರ ಉತ್ಪನ್ನಗಳಾದ ಸಿರಿಧಾನ್ಯಗಳು, ಬೇಳೆ ಕಾಳುಗಳು, ಬೆಲ್ಲ, ಅಡುಗೆ ಎಣ್ಣೆ, ಮಸಾಲೆ ಪದಾರ್ಥಗಳು, ಹಣ್ಣು ಮತ್ತು ತರಕಾರಿಗಳು, ಜೊತೆಗೆ ಸಾವಯವ ಗೊಬ್ಬರ, ದೇಶಿ ಬೀಜಗಳು ಮುಂತಾದವುಗಳು ಈ ಸಾವಯವ ಸಂತೆಯಲ್ಲಿ ಲಭ್ಯವಿರುವಂತೆ ನೋಡಿಕೊಂಡಿದ್ದ ಜಗದೀಶ ಕಬಾಡರ, ಹಾಗೂ ಶ್ರೀಮತಿ ಶಿವಲೀಲಮ್ಮ ಹೊಸಮನಿ, ರವರ ಶ್ರಮ ಸ್ತುತ್ಯರ್ಹ.
ಕಪ್ಪತಗುಡ್ಡದಲ್ಲಿ ದೊರೆಯುವ ಅಪರೂಪದ ಔಷಧೀಯ ಸಸ್ಯಗಳನ್ನು ಗುರುತಿಸಿ ಸಂಗ್ರಹಿಸುವ ಹಾಗೂ ವೈದ್ಯರಿಗೆ ಪೂರೈಸುವ ಕಾಯಕದಲ್ಲಿ ತೊಡಗಿರುವ ಸಸ್ಯಗಳ ತಜ್ಞೆ ಹಾಗೂ ಔಷಧೀಯ ಸಸ್ಯಗಳನ್ನು ಗುರುತಿಸುವಿಕೆ, ಉಪಯುಕ್ತತೆ, ಮುಂತಾದ ಜ್ಞಾನವನ್ನು ಮುಂದಿನ ಪೀಳಿಗೆಗೆ ವರ್ಗಾಯಿಸಲು ಶ್ರಮಿಸುತ್ತಿರುವ ಶ್ರೀಮತಿ ಕಸ್ತೂರೆಮ್ಮ ಹಾರೂಗೇರಿ, ರವರ ಔಷಧೀಯ ಸಸ್ಯಗಳ ಮಳಿಗೆ ಹಾಗೂ ಅವರು ನೀಡುತ್ತಿದ್ದ ವಿವರಣೆ ತುಂಬಾ ಆಕರ್ಷಕವಾಗಿತ್ತು.
ದೇಶಾದ್ಯಂತ ಮನೆಮಾತಾಗಿರುವ, ಆಯುರ್ವೇದ ಹಾಗೂ ಪಾರಂಪರಿಕ ವೈದ್ಯ ಪದ್ಧತಿಯ ಮೇರು ಪರ್ವತ, ಬಸವರಾಜ ಕೊಂಚಿಗೇರಿ ಯವರ ಪುತ್ರ ಆಯುರ್ವೇದ ವಿಶಾರದ ಚನವೀರಪ್ಪ ಕೊಂಚಿಗೇರಿಯವರು ಪಾರಂಪರಿಕ ವೈದ್ಯಕೀಯ ಚಿಕಿತ್ಸಾ ಪದ್ಧತಿಯ ಮೂಲ ತತ್ವಗಳನ್ನು ವಿವರಿಸಿದರು.
ಈ ಸಂದರ್ಭದಲ್ಲಿ ನಿವೃತ್ತ ಪ್ರಾಚಾರ್ಯ ಶಂಕರ ಗುರವ ಹಾಗೂ ಜಯಪಾಲರೆಡ್ಡಿ ಇವರನ್ನು ಸನ್ಮಾನಿಸಲಾಯಿತು
ಶಂಕರ ಕುಂಬಿ, ಬಸವಂತಪ್ಪ ತೋಟದ, ಬಿ.ಕೆ.ಪಾಟೀಲ, ಸಂಗಮೇಶ ಹೊರಗಿನಮಠ, ಯತ್ನಳ್ಳಿ ಪಾಟೀಲ, ಶಂಕರ ಗುರವ, ಬಸವರಾಜ ಹೊಸಕೇರಿ, ನಿಂಹಪ್ಪ ಬೆಳ್ಳಿಗಟ್ಟಿ, ಬೆಂಬಳಗಿ, ವಿಜಯಲಕ್ಷ್ಮಿ ಪಾಟೀಲ ಸಿ.ಎಸ್. ಕಂಬ್ಳ್ಯಾಳ, ಧಾರವಾಡದ ವಿದ್ಯಾವರ್ಧಕ ಸಂಘ, ಹುಬ್ಬಳ್ಳಿ ಧಾರವಾಡ ನಾರಿಕ ಪರಿಸರ ಸಮಿತಿ, ಬಸವ ಬಳಗ, ನವನಗರದ ಈಶ್ವರ ದೇವಸ್ಥಾನದ ಬಳಗ, ರುದ್ರ ಪಠಣ ಬಳಗ, ಹುಬ್ಬಳ್ಳಿಯ ಪ್ರೋಬಸ್ ಕ್ಲಬ್ ಸದಸ್ಯರು, ಹಾಗೂ ಇನ್ನಿತರರು ಉಪಸ್ಥಿತರಿದ್ದರು.
ಬಾಲಚಂದ್ರ ಜಾಬಶೆಟ್ಟಿ