spot_img
spot_img

ಬಿಪಿನ್ ರಾವತ್ ಸಾವು ತುಂಬಲಾರದ ನಷ್ಟ – ಆಯ್ ಬಿ ಬಿರಾದಾರ

Must Read

- Advertisement -

ಸಿಂದಗಿ; ಭಾರತೀಯ ತ್ರಿವಳಿ ಭದ್ರತಾ ಪಡೆಗಳ ಪ್ರಪ್ರಥಮ ಮುಖ್ಯಸ್ಥರಾಗಿದ್ದ, ದೇಶಕಂಡ ಅಪ್ರತಿಮ ಸೇನಾಧಿಕಾರಿ ಜನರಲ್ ಬಿಪಿನ್ ರಾವತ್ ಹೆಲಿಕಾಪ್ಟರ್ ದುರಂತದಲ್ಲಿ ಪತ್ನಿ ಸಮೇತ ದುರಂತಕ್ಕಿಡಾಗಿದ್ದು ದುಃಖಕರ ಸಂಗತಿ ಎಂಥಾ ದುರಂತವೆಂದರೆ, ಸೇನಾ ಪಡೆಯ ಮುಖ್ಯಸ್ಥರೇ ಪ್ರಯಾಣಿಸುತ್ತಿದ್ದ ಸೇನಾಪಡೆಗೆ ಸೇರಿದ ಹೆಲಿಕಾಪ್ಟರ್ ಅಪಘಾತಕ್ಕೆ ಈಡಾಗಿರುವುದು ದುರ್ದೈವದ ಸಂಗತಿ. ಭಾರತದ ರಕ್ಷಣಾ ಪಡೆಯ ಕನಸುಗಾರ ದುರಂತಕ್ಕೆ ಬಲಿಯಾಗಿರುವುದು ಭಾರತಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಆಡಳಿತಾಧಿಕಾರಿ ಆಯ್.ಬಿ. ಬಿರಾದಾರ ಹೇಳಿದರು.

ಪಟ್ಟಣದ ಲಯನ್ಸ್ ಕ್ಲಬ್ ಸಿಂದಗಿ ಹಾಗೂ ಪಿ.ಇ.ಎಸ್ ಸಂಸ್ಥೆಯ ಗಂಗಾಧರ. ಎನ್. ಬಿರಾದಾರ ಇವರ ಸಂಯುಕ್ತಾಶ್ರಯದಲ್ಲಿ ಜನರಲ್ ಬಿಪಿನ್ ರಾವತ್ ಅವರ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿ, ಪಾಕಿಸ್ತಾನ ದಾಳಿಯಿಂದ ಭಾರತೀಯ ಸೈನಿಕರು ಹುತಾತ್ಮರಾದಾಗ ಸರ್ಜಿಕಲ್ ಸ್ಟ್ರೈಕ್ ಮಾಡಿ ಎದುರಾಳಿ ಪಾಕಿಸ್ತಾನ ಪಡೆಗಳ ಹೆಣಗಳನ್ನು ಮಲಗಿಸಿದ್ದು ಬಿಪಿನ್ ರಾವತ್. ಮೂರು ವಿಭಾಗದ ಸೈನಿಕರ ಕಷ್ಟಗಳನ್ನು ಸರಕಾರದ ಜೊತೆ ಮಾತನಾಡಿ ಬಗೆಹರಿಸಿದ್ದರು. ಭಾರತವೂ ಸೇರಿದಂತೆ ವಿಶ್ವದ ಅನೇಕ ಕಡೆ ಗಣ್ಯ ವ್ಯಕ್ತಿಗಳು ನಿಗೂಢವಾಗಿ ಸಾವನ್ನಪ್ಪಿದ ಪ್ರಕರಣಗಳು ಸಂಭವಿಸುತ್ತಿರುವುದು ದುರದೃಷ್ಟಕರ. ನಿಷ್ಠ ಮತ್ತು ಪ್ರಾಮಾಣಿಕತೆಗೆ ಹೆಸರಾಗಿದ್ದ ಸೇನಾ ಮುಖ್ಯಸ್ಥರನ್ನು ಕಳೆದುಕೊಂಡು ಭಾರತಕ್ಕೆ ತುಂಬಲಾರದ ನಷ್ಟವಾಗಿದೆ. ಸೇನಾಧಿಕಾರಿಗಳನ್ನು ಹುರಿದುಂಬಿಸಿ ಸುಮಾರು 40 ವರ್ಷಗಳಿಂದ ಸತತವಾಗಿ ಸೇನೆಯ ಸೇವೆಯನ್ನು ಸಲ್ಲಿಸಿದವರು. 3 ಪಡೆಗಳ ಮುಖ್ಯಸ್ಥರಾಗಿ ಕಛೇರಿಯಲ್ಲಿ (ಆಫೀಸಿನಲ್ಲಿ) ಕುಳಿತವರಲ್ಲ. ರಾಷ್ಟ್ರದ ಮೂಲೆ-ಮೂಲೆಗಳಿಗೂ ಹೋಗಿ 3 ಪಡೆಗಳನ್ನು ಹುರಿದುಂಬಿಸಿದವರು. ವೈರಿಪಡೆ ಯಾವುದೇ ಬೆದರಿಕೆಯನ್ನು ಒಡ್ಡಿದರೂ ಕೂಡಲೇ ಅದಕ್ಕೆ ಉತ್ತರ ನೀಡುತ್ತಿದ್ದರು. ಇದಕ್ಕೆ ಉತ್ತಮ ಉದಾಹರಣೆ ಪಾಕಿಸ್ತಾನ ವಿರುದ್ಧದ ಸರ್ಜಿಕಲ್ ಸ್ಟ್ರೈಕ್ ಎಂದರು.

ಪಿ.ಇ.ಎಸ್ ಸಂಸ್ಥೆಯ ಕಾರ್ಯದರ್ಶಿ ಶ್ರದ್ಧಾಂಜಲಿ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಲಾಯನ್ಸ್ ಕ್ಲಬ್ಬಿನ ಅಧ್ಯಕ್ಷರಾದ ಕೆ.ಎಚ್. ಸೋಮಾಪೂರ ಅವರು ಜನರಲ್ ಬಿಪಿನ್ ಅವರ ಕಾರ್ಯದಕ್ಷತೆಯ ಬಗ್ಗೆ ಮಾತನಾಡಿದರು.

- Advertisement -

ಶ್ರದ್ಧಾಂಜಲಿ ಸಭೆಯಲ್ಲಿ ಪ.ಪೂ ಮಹಾವಿದ್ಯಾಲಯದ ಪ್ರಾಚಾರ್ಯ ಆರ್.ಬಿ. ಗೋಡಕರ, ಪದವಿ ಕಾಲೇಜಿನ ಪ್ರಾಚಾರ್ಯ ಜಿ.ಎಸ್. ಕಡಣಿ, ಉಪನ್ಯಾಸಕರಾದ ಎಸ್.ಎಸ್. ವಾಲೀಕಾರ, ಬಿ.ಆರ್. ಬಿರಾದಾರ, ಎಚ್.ಎಸ್. ಬಿರಾದಾರ, ಪಿ.ಎಸ್. ಬಿರಾದಾರ, ಎಚ್. ಬಿ. ಗುಮ್ಮಕ್ಕನವರ, ಮಂಜುಳಾ ಶ್ರೀಗಿರಿ, ಲಕ್ಷ್ಮೀ ವಾಲಿ ಸಭೆಯಲ್ಲಿ ಭಾಗವಹಿಸಿದ್ದರು.

- Advertisement -
- Advertisement -

Latest News

ಇದು ಇಂದಿನ ಹಾಸ್ಟೆಲ್ ಹುಡುಗ ಹುಡುಗಿಯರಿಗೆ ನಾವೆಲ್ಲ ಹೇಳಬೇಕಾದ ಖಾಸ್ ಬಾತ್

ಸರ್... ಓ ಸರ್...ಕಾಂಬಳೆ ಸರ್  ... ಸರ್ ನಮಸ್ಕಾರ್ರಿ ಆರಾಮ ಅದೀರಿ?? ನಾ ಯಾರ್ ಹೇಳ್ರಿ ಅನ್ನುತ್ತಿದ್ದಂತೆಯೇ ನಿವೃತ್ತಿ ಹೊಂದಿ ಐದಾರು ವರ್ಷ ಆಗಿದ್ದ ಬಿಸಿಎಮ್...
- Advertisement -

More Articles Like This

- Advertisement -
close
error: Content is protected !!
Join WhatsApp Group