ಕೆ.ಆರ್.ನಗರ: “ಉಳ್ಳವರು ಹಸಿದವರಿಗೆ,ದುರ್ಬಲ ವರ್ಗದ ಜನರಿಗೆ ಸಹಾಯ ಮಾಡಬೇಕು.ಆಗ ಮಾತ್ರ ಅವರ ಜೀವನದ ಸಾರ್ಥಕವಾಗುತ್ತದೆ.” ಎಂದು ಮೈಸೂರು ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷರಾದ ಡಿ.ಟಿ ಪ್ರಕಾಶ್ ಅವರು ಕರೆ ನೀಡಿದರು.
ಮೈಸೂರಿನ ಸಮಾಜಸೇವಕ,ವಿಪ್ರ ಮುಖಂಡ,ವೈಷ್ಣವಿ ಸೇವಾಪರಿಷತ್ ಅಧ್ಯಕ್ಷರಾದ ಆರ್.ಚಕ್ರಪಾಣಿ ಅವರು ತಮ್ಮ ಐವತ್ತನೇ ಜನ್ಮದಿನದ ಅಂಗವಾಗಿ ಕೆ.ಆರ್ ನಗರ ಟೌನ್ ನ ಇಪ್ಪತ್ತೈದು ಬಡ ವಿಪ್ರ ಬಾಂಧವರಿಗೆ ಉಚಿತ ಅಕ್ಕಿ ಕಿಟ್ ವಿತರಣಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು..
ಕರೋನಾ ಕಾಯಿಲೆ ಇಡೀ ವಿಶ್ವವನ್ನೇ ಕಾಡುತ್ತಿದೆ.ಅರ್ಚಕ ವೃತ್ತಿ ಹಾಗೂ ಅಡುಗೆ ಕೆಲಸಗಳನ್ನೇ ಅವಲಂಬಿಸಿರುವ ಗ್ರಾಮೀಣ ವಿಪ್ರರ ಜೀವನ ಕಷ್ಟಕರವಾಗಿದೆ.
ಇಂತಹ ಸಂದರ್ಭದಲ್ಲಿ ಯುವಮುಖಂಡ ಆರ್ .ಚಕ್ರಪಾಣಿ ಅವರು ಬಡ ವಿಪ್ರರಿಗೆ ಉಚಿತ ಆಹಾರ ಕಿಟ್ ಗಳನ್ನು ವಿತರಿಸುವ ಮೂಲಕ ತಮ್ಮ ಜನ್ಮದಿನವನ್ನು ಅತ್ಯಂತ ಸಾರ್ಥಕತೆಯೊಂದಿಗೆ ಆಚರಿಸಿಕೊಂಡಿದ್ದಾರೆ ಎಂದು ಬಣ್ಣಿಸಿದರು.
ಜಿಲ್ಲಾ ಗ್ರಾಮಾಂತರ ಬ್ರಾಹ್ಮಣ ಸಂಘದ ಅಧ್ಯಕ್ಷರಾದ ಗೋಪಾಲರಾವ್ ಅವರು ಮಾತನಾಡಿ, ಗ್ರಾಮೀಣ ವಿಪ್ರರು ಸ್ವಾವಲಂಬನೆ ಸಾಧಿಸಬೇಕು.ಈಗ ಬಂದಿರುವ ಕರೋನಾ ಸಮಸ್ಯೆ ಯಿಂದಾಗಿ ಜೀವನ ದುಸ್ತರವಾಗಿದೆ.ಇಂತಹ ಸಂದರ್ಭದಲ್ಲಿ ಸಂಘ-ಸಂಸ್ಥೆಗಳು,ಸರ್ಕಾರ ಬಡವರ ನೆರವಿಗೆ ಬರಬೇಕು ಎಂದು ಕರೆ ನೀಡಿದರು..
ಇದೇ ಸಂದರ್ಭದಲ್ಲಿ ದಾನಿಗಳಾದ ಆರ್ .ಚಕ್ರಪಾಣಿ, ಮೈಸೂರು ಜಿಲ್ಲಾ ಕನ್ನಡ ಜಾಗೃತಿ ಬಳಗದ ಸದಸ್ಯರಾದ ಡಾ|ಭೇರ್ಯರಾಮಕುಮಾರ್ ಅವರನ್ನು ಅಭಿನಂದಿಸಿ,ಸನ್ಮಾನಿಸಲಾಯಿತು.ಸಭೆಯಲ್ಲಿ ಸಮಾಜಸೇವಕರಾದ ಕಡಕೊಳ ಜಗದೀಶ್,ಸುಚೀಂದ್ರ ಸಭೆಯಲ್ಲಿ ಹಾಜರಿದ್ದರು. ಶ್ರೀ ಶೃಂಗೇರಿ ಶಂಕರ ಮಠದ ಮಠಮುದ್ರಾಧಿಕಾರಿಗಳಾದ ಸಂತ ಸಚ್ಚಿದಾನಂದ ದಾಸ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಶ್ರೀಮತಿ ಹೆಚ್ .ಎನ್ ಸವಿತಾ ಪ್ರಾರ್ಥನೆ ಯೊಂದಿಗೆ ಸಭೆ ಆರಂಭವಾಯಿತು.ಶ್ರೀರಾಮ ಬಡಾವಣೆಯ ಶ್ರೀ ರಾಮಾನಂದ ಆಶ್ರಮದಲ್ಲಿ ಈ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು ..
ಹಂಪಾಪುರದಲ್ಲಿ ಆಹಾರ ಕಿಟ್ ವಿತರಣೆ:
ಇದೇ ಸಂದರ್ಭದಲ್ಲಿ ಹಂಪಾಪುರ ಗ್ರಾಮದ ಶ್ರೀ ರಾಮಮಂದಿರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಐವರು ಬಡ ಬ್ರಾಹ್ಮಣಫಲಾನುಭವಿಗಳಿಗೆ ಸಾಹಿತಿ ಡಾ|ಭೇರ್ಯ ರಾಮಕುಮಾರ್ ರವರು ಚಕ್ರಪಾಣಿ ಐಯ್ಯಂಗಾರ್ ಅವರ ಪರವಾಗಿ ಕಿಟ್ಟುಗಳನ್ನು ವಿತರಿಸಿದರು.ವಿವೇಕ್ ಎ ಆನಂದ್ ಉಪಸ್ಥಿತರಿದ್ದರು.