spot_img
spot_img

ನಿಪ್ಪಾಣಿಯಲ್ಲಿ ಸಚಿವೆ ಸೌ. ಶಶಿಕಲಾ ಜೊಲ್ಲೆ ಜನ್ಮದಿನ ಆಚರಣೆ

Must Read

spot_img

ಗಡಿ ಕನ್ನಡದ ಶಕ್ತಿ ಸಚಿವೆ ಸೌ ಶಶಿಕಲಾ ಜೊಲ್ಲೆ

ನಿಪ್ಪಾಣಿ – ಸ್ಥಳೀಯ ಗಡಿನಾಡು ಕನ್ನಡ ಬಳಗ,ಶರಣ ಸಾಹಿತ್ಯ ಪರಿಷತ್ತು, ಸಾಹಿತ್ಯ ಬಳಗ,ವಚನ ಸಾಹಿತ್ಯ ಪರಿಷತ್ತು, ದಾನಮ್ಮ ಶಿಕ್ಷಣ ಸಂಸ್ಥೆ ಮತ್ತು ವಿವಿಧ ಕನ್ನಡ ಸಂಘಟನೆಗಳ ವತಿಯಿಂದ ನಿಪ್ಪಾಣಿ ಶಾಸಕರಾದ ಕನಾ೯ಟಕದ ಮುಜರಾಯಿ ಹಜ್ ಮತ್ತು ವಕ್ಫ್ ಸಚಿವರು ಹಾಗೂ ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವರಾದ ಸೌ ಶಶಿಕಲಾ ಅಣ್ಣಾಸಾಹೇಬ ಜೊಲ್ಲೆಯವರ 52 ನೇ ಜನ್ಮದಿನಾಚರಣೆಯನ್ನು ಸಸಿಗೆ ನೀರೆರೆವುದರೊಂದಿಗೆ,ಶಾಲಾ ಮಕ್ಕಳಿಗೆ ಕಲಿಕಾ ಸಾಮಗ್ರಿ ವಿತರಿಸುವುದರೊಂದಿಗೆ ಸರಳವಾಗಿ ಆಚರಿಸಲಾಯಿತು.

ಗಡಿನಾಡು ಕನ್ನಡ ಬಳಗದ ಸಂಸ್ಥಾಪಕ ಅಧ್ಯಕ್ಷರಾದ ಮಾರುತಿ ಕೊಣ್ಣುರಿ ಸಚಿವರ ಕಾಯಕವನ್ನು ಸ್ಮರಿಸಿ ಗಡಿಕನ್ನಡಕ್ಕೆ ಜೊಲ್ಲೆ ದಂಪತಿಗಳ ಕೊಡುಗೆ ಅಪಾರ ಎಂದು ಕೊಂಡಾಡಿ ಜನ್ಮದಿನದ ಶುಭಾಶಯಗಳನ್ನು ಕೋರಿದರು.

ನಂತರ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ತಾಲೂಕಾ ಅಧ್ಯಕ್ಷ ಮಿಥುನ ಅಂಕಲಿ ಮಾತನಾಡಿ, ಸಚಿವರು ಕನ್ನಡನಾಡು ಕಂಡ ಧೀಮಂತ ಮಹಿಳೆ.ಜೀವನದುದ್ದಕ್ಕೂ ಬಸವತತ್ವವನ್ನು ಪಾಲಿಸುತ್ತಾ ಶರಣ ಪರಂಪರೆಯನ್ನು ಉಳಿಸಿ ಬೆಳೆಸುತ್ತಿದ್ದಾರೆ ಗಡಿಯ ಕನ್ನಡ ಶಾಲೆಗಳ ಸಬಲೀಕರಣಕ್ಕೆ ಮುಂದಾಗಿ ಕನ್ನಡ ಭಾಷೆ ಬೆಳೆಯಲೂ ಕಾರಣರಾಗಿದ್ದಾರೆ ವಚನಸಾಹಿತ್ಯದ ಕುರಿತು ಸಚಿವರಿಗಿರುವ ಪ್ರೀತಿ ಅಪ್ರತಿಮ.ಭಾಷಾ ಬಾಂಧವ್ಯದ ಅಸ್ತ್ರ ಹಿಡಿದು ಗಡಿಯಲ್ಲಿ ಕನ್ನಡ ನಾಡುನುಡಿ, ಸಾಂಸ್ಕೃತಿಕ ಹಿನ್ನೆಲೆಯನ್ನು ಗಟ್ಟಿಗೊಳಿಸುತಿದ್ದಾರೆ. ಜೊಲ್ಲೆ ದಂಪತಿಗಳು ನಿಜಕ್ಕೂ ಆದಶ೯ ದಂಪತಿಗಳು.ಅವರ ಕಾಯಕ ಅಭಿವೃದ್ಧಿಗೆ ಪೂರಕವಾಗಿದೆ ಅವರು ಕನ್ನಡನಾಡು ನುಡಿಯ ಗಡಿಯ ಅದಮ್ಯ ಶಕ್ತಿ ಎಂದು ಕೊಂಡಾಡಿ ಸಾಥ೯ಕ ಬದುಕು ,ಪ್ರಾಮಾಣಿಕ ರಾಜಕಾರಣ,ಸಮಾಜಕಾರಣದ ಕುರಿತು ಸುದೀರ್ಘವಾಗಿ ಮಾತನಾಡಿ ಜನ್ಮದಿನದ ಶುಭಾಶಯಗಳನ್ನು ಕೋರಿದರು.

ನಂತರ ವಚನ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ವಿರಣ್ಣಾ ಗಿರಮಲ್ಲನವರ,ಕಸಾಪ ಕೋಶಾಧ್ಯಕ್ಷ ಶಿವಾನಂದ ಪುರಾಣಿಕಮಠ ಮಾತನಾಡಿ, ಸಚಿವರ ಕನ್ನಡನಾಡು ನುಡಿ ಕೆಲಸ,ಸಮಾಜಮುಖಿ ಕೆಲಸದ ಕುರಿತು ಮಾತನಾಡಿ ಶುಭ ಕೋರಿದರು.

ಈ ಸಂದರ್ಭದಲ್ಲಿ ಕನ್ನಡಪರ ಮುಖಂಡರುಗಳಾದ ಡಾ ಎಸ್ ಆರ್ ಪಾಟೀಲ್, ರವೀಂದ್ರ ಶೆಟ್ಟಿ, ಅನಿಲ್ ನೇಷ್ಠಿ, ರಾಜು ಕೊಳಕಿ,ಸೌ ಶಾಂತಾ ತೆರಣಿ , ಮಹಾದೇವ ಬರಗಾಲೆ, ಎಸ್ ಕೆ ಖಜ್ಜನ್ನವರ,ಪತ್ರಕತ೯ ಅಶ್ವಿನ ಅಮ್ಮಣಗಿ,ಶಿಕ್ಷಕ ಕನ್ನಡ ಮನಸ್ಸುಗಳು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಶಿಕ್ಷಕಿ ಮಹಾದೇವಿ ಕದಮ ಸ್ವಾಗತಿಸಿ ನಿರೂಪಿಸಿದರು ಶಿಕ್ಷಕ ಬಂಡು ತಹಸಿಲ್ದಾರ್ ವಂದಿಸಿದರು.

- Advertisement -
- Advertisement -

Latest News

ವಿದ್ಯುತ್ ಕಳ್ಳತನ ಮಹಾಪರಾಧ: ಎಇಇ ಧರೆಪ್ಪಗೋಳ

ಸಿಂದಗಿ: ವಿದ್ಯುತ್ ಕಳ್ಳತನ ಮಹಾಪರಾಧ, ಕಳ್ಳತನ ಮಾಡಿದ ಗ್ರಾಹಕರಿಗೆ ಜೈಲುವಾಸ ಮತ್ತು ದಂಡ ಕಟ್ಟಿಟ್ಟಬುತ್ತಿ ಎಂದು ಸಿಂದಗಿ ಸಹಾಯಕ ಕಾರ್ಯನಿರ್ವಾಹಕ ವಿಶಾಲ್ ಧರೆಪ್ಪಗೋಳ ಹೇಳಿದರು. ತಾಲೂಕಿನ ಮೋರಟಗಿ...
- Advertisement -

More Articles Like This

- Advertisement -
close
error: Content is protected !!