spot_img
spot_img

ಬಿಜೆಪಿ ಅರಭಾವಿ ಮಂಡಲದಿಂದ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರಿಗೆ ಸನ್ಮಾನ

Must Read

ಮೂಡಲಗಿ: 75ನೇ ಸ್ವಾತಂತ್ರೋತ್ಸವದ  ಅಮೃತ ಮಹೋತ್ಸವದಂದು ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ, ಅರಭಾವಿ ಕ್ಷೇತ್ರದ, ಅನೇಕ ಮಹನೀಯರನ್ನು ಗುರುತಿಸಿ ಅವರಿಗೆ ಸನ್ಮಾನಿಸಬೇಕೆಂಬ ಅರಭಾವಿ ಕ್ಷೇತ್ರದ ಶಾಸಕರು, ಹಾಗೂ ಕಹಾಮ ಅಧ್ಯಕ್ಷರಾದ ಬಾಲಚಂದ್ರ ಜಾರಕಿಹೊಳಿಯವರ ಬಹು ದಿನಗಳ ಕನಸು ಇವತ್ತು ನನಸಾಗಿದೆ ಎಂದು ಬಿಜೆಪಿ ಯುವ ಮುಖಂಡ ಸರ್ವೋತ್ತಮ ಜಾರಕಿಹೊಳಿ ಹೇಳಿದರು.

ಸೋಮವಾರದಂದು ಪಟ್ಟಣದ ಬಸವ ಮಂಟಪದಲ್ಲಿ 75ನೇ ಸ್ವಾತಂತ್ರೋತ್ಸವದ ಅಮೃತ ಮಹೋತ್ಸವದ ಅಂಗವಾಗಿ ಬಿಜೆಪಿ ಅರಭಾವಿ ಮಂಡಲದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ವಿವಿಧ ಕ್ಷೇತ್ರದ ಸಾಧಕರಿಗೆ ಸನ್ಮಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕೃಷಿ, ಸಂಗೀತ, ಕ್ರೀಡೆ, ನಿವೃತ್ತ ಯೋಧರು,ಪತ್ರಿಕೋದ್ಯಮ, ಸೇರಿದಂತೆ ಹಲವಾರು ಕ್ಷೇತ್ರದಲ್ಲಿ ಸಾಧನೆ ಮಾಡಿದ 75ಕ್ಕೂ ಹೆಚ್ಚು ಸಾಧಕರನ್ನು ಸನ್ಮಾನಿಸುತ್ತಿರುವುದು ಅತೀ ಹೆಮ್ಮೆಯ ವಿಷಯ ಎಂದರು.

ಬಿಜೆಪಿಯ ಬೆಳಗಾವಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುಭಾಸ ಪಾಟೀಲ್ ಮಾತನಾಡುತ್ತ, 75ನೇ ಸ್ವಾತಂತ್ರೋತ್ಸವದ  ಅಮೃತ ಮಹೋತ್ಸವ ಅಂಗವಾಗಿ ಬಿಜೆಪಿ ಅರಭಾವಿ ಮಂಡಲದಿಂದ ಹಮ್ಮಿಕೊಳ್ಳಲಾಗಿದ್ದ 3 ಬೈಕ್ ರ್ಯಾಲಿ ಹಾಗೂ ಟ್ರಾಕ್ಟರ್ ರ್ಯಾಲಿಗಳಿಗೆ ಅರಭಾವಿ ಕ್ಷೇತ್ರಾದ್ಯಂತ ಅಭೂತಪೂರ್ವ ಪ್ರತಿಕ್ರಿಯೆ ದೊರೆತಿದ್ದು, ಇದರ ಶ್ರೇಯಸ್ಸು ಶಾಸಕರಾದ ಬಾಲಚಂದ್ರ ಜಾರಕಿಹೋಳಿಯವರಿಗೆ ಸಲ್ಲುವುದಲ್ಲದೆ,  ಕ್ಷೇತ್ರದ ಜನತೆಯ ಬಿಜೆಪಿ ಪಕ್ಷದ ಬಗೆಗಿನ ಅಪಾರ ಒಲವು ಗೋಚರವಾಗುತ್ತಿದೆ ಎಂದರು.

ಅತಿಥಿಯಾಗಿ ಆಗಮಿಸಿದ್ದ ಹಾರುಗೇರಿಯ ಸಾಹಿತಿ ವಿ.ಎಸ್.ಮಾಳಿಯವರು ಮಾತನಾಡುತ್ತ, ಒಂದೇ ವೇದಿಕೆಯಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ಸನ್ಮಾನಿಸುವ ಕಾರ್ಯ ಶ್ಲಾಘನೀಯವಾದದ್ದು ಎಂದರು. ಈ ಸಂದರ್ಭದಲ್ಲಿ 75ಕ್ಕೂ ಹೆಚ್ಚು ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಮಹನೀಯರಿಗೆ ಸತ್ಕರಿಸಿ ಗೌರವಿಸಲಾಯಿತು ಹಾಗೂ ಚಂದ್ರಶೇಖರ್ ಪತ್ತಾರ್ ಅವರಿಗೆ ಅರಭಾವಿ ಮಂಡಲದ ನೂತನ ಪಧಾಧಿಕಾರಿಯಾಗಿ, ಮಾಧ್ಯಮ ಪ್ರಮುಖರು ಎಂದು ಘೋಷಣೆ ಮಾಡಿ ಆದೇಶ ಪತ್ರವನ್ನು ಕೊಡಮಾಡಿದರು.

ಈ ಸಂಧರ್ಭದಲ್ಲಿ ಬಿಜೆಪಿ ಅರಭಾವಿ ಮಂಡಲದ ಅಧ್ಯಕ್ಷ ಮಹಾದೇವ ಶೆಕ್ಕಿ, ಪುರಸಭೆ ಅಧ್ಯಕ್ಷ ಹನಮಂತ ಗುಡ್ಲಮನಿ, ಬಾಲಚಂದ್ರ ಜಾರಕೀಹೊಳಿಯವರ ಆಪ್ತ ಕಾರ್ಯದರ್ಶಿ ನಾಗಪ್ಪ ಶೇಖರಗೋಳ್, ಬಿಜೆಪಿ ಹಿರಿಯ ಮುಖಂಡ ಪ್ರಕಾಶ್ ಮಾದರ, ರವಿ ಸಣ್ಣಕ್ಕಿ, ಜಯಾನಂದ ಪಾಟೀಲ್, ಗಫಾರ್ ಡಾಂಗೆ, ಯಲ್ಲಾಲಿಂಗ ವಾಳದ, ಲಕ್ಷಣ ಅಡಿಹುಡಿ, ಶಂಕರ ತುಕ್ಕನ್ನವರ, ಬಿಜೆಪಿಯ ವಿವಿಧ ಪದಾಧಿಕಾರಿಗಳಾದ  ಪಾಂಡುರಂಗ  ಮಹೇಂದ್ರಕರ್, ಈರಪ್ಪ ಧವಳೇಶ್ವರ್, ಕೇದಾರಿ ಭಸ್ಮೆ, ಚಂದ್ರಶೇಖರ್ ಪತ್ತಾರ್, ಮಲ್ಲು ಬೋಳನ್ನವರ್, ಸುಭಾಸ ಗುಡ್ಯಾಗೊಳ್,ಲಕ್ಷಣ ಮೆಳ್ಳಿಗೇರಿ,ವಿಠ್ಠಲ್ ಶೀಲನವರ ಸೇರಿದಂತೆ  ಪಕ್ಷದ ನೂರಾರು ಕಾರ್ಯಕರ್ತರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಸಿದ್ದಣ್ಣ ದುರದುಂಡಿ ನಿರೂಪಿಸಿದರು,  ಪರಸಪ್ಪ ಬಬಲಿ ಸ್ವಾಗತಿಸಿದರು,ಮಹಾಂತೇಶ್ ಕುಡಚಿ ವಂದಿಸಿದರು.

- Advertisement -
- Advertisement -

Latest News

ವಿಶೇಷ ಅಗತ್ಯತೆಯುಳ್ಳ ಮಕ್ಕಳ ವೈದ್ಯಕೀಯ ಮೌಲ್ಯಾಂಕನ ಶಿಬಿರ

ಯರಗಟ್ಟಿಃ ಇಲ್ಲಿನ ಸರಕಾರಿ ಹಿರಿಯ ಪ್ರಾಥಮಿಕ ಮಾದರಿ ಶಾಲೆಯಲ್ಲಿ ೨೦೨೨-೨೩ ನೇ ಸಾಲಿನ ಯರಗಟ್ಟಿ ಹಾಗೂ ಮುರಗೋಡ ವಲಯಗಳ ವಿಕಲಚೇತನ ಮಕ್ಕಳ ಮೌಲಾಂಕನ ಶಿಬಿರ ಜರುಗಿತು. ಕಾರ‍್ಯಕ್ರಮದ...
- Advertisement -

More Articles Like This

- Advertisement -
close
error: Content is protected !!