ಬೀದರ – ಬೀದರ್‌ನ ಯುವ ಗುತ್ತಿಗೆದಾರ ಸಚಿನ್ ಪಂಚಾಳ ಮನೆಗೆ ಕಲಬುರಗಿ ಬಿಜೆಪಿ ನಾಯಕರು ಭೇಟಿಯಾಗಿ ಸಾಂತ್ವನ ಹೇಳಿದರು
ಶಾಸಕ ಬಸವರಾಜ್ ಮತ್ತಿಮೂಡ್, ಬಿಜೆಪಿ ನಗರ ಜಿಲ್ಲಾಧ್ಯಕ್ಷ ಚಂದು ಪಾಟೀಲ್, ಮಾಜಿ ಶಾಸಕ ರಾಜಕುಮಾರ್ ತೇಲ್ಕೂರ್ ಭೇಟಿಯಾಗಿ ಸಚಿನ್ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.
ಬಿಜೆಪಿ ನಾಯಕರು ಬರುವ ಮುಂಚಯೇ ಮೃತ ಪಂಚಾಳ ಕುಟುಂಬಸ್ಥರ ವಿಚಾರಣೆ ನಡೆಸುತ್ತಿದ್ದ ರೈಲ್ವೆ ಪೊಲೀಸರು ಬಿಜೆಪಿ ನಾಯಕರನ್ನು ಒಳಗೆ ಬಿಡಲು ಅಡ್ಡಿಪಡಿಸಿದರು. ಆದರೆ ಮೊದಲು ಆರೋಪಿಗಳನ್ನು ವಿಚಾರಣೆಗೆ ಒಳಪಡಿಸಿ ಈ ಕುಟುಂಬಕ್ಕೆ ನೆಮ್ಮದಿ ಬೇಕಾಗಿದೆ ಎನ್ನುತ್ತ ಒಳ ನುಗ್ಗಿದ ನಾಯಕರಲ್ಲಿ ಸಚಿನ್ ಕುಟುಂಬಸ್ಥರು ತಮ್ಮ ಅಳಲು ತೋಡಿಕೊಂಡರು.
ಸಚಿನ್ ಆತ್ಮಹತ್ಯೆಯ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಡೆತ್ ನೋಟ್ ಬಿಟ್ಟಾಗಲೇ ತಾವು ಪೊಲೀಸ್ ಠಾಣೆಗೆ ದೂರು ನೀಡಲು ಹೋದರೆ ಪೊಲೀಸರು ದೂರು ಸ್ವೀಕರಿಸಲಿಲ್ಲ ಎಂದು ದೂರಿದರು.
ಮೊನ್ನೆ ವಿಧಾನ ಪರಿಷತ್ತಿನಲ್ಲಿ ಯಾರ ಕಿವಿಗೂ ಬೀಳದ ಪದ ಪ್ರಯೋಗ ಆಗಿದೆ ಎಂದು ಸಿ ಟಿ ರವಿಯವರನ್ನು ಎಫ್ ಆಯ್ ಆರ್ ಇಲ್ಲದೆ ಬಂಧಿಸಿ ಎಲ್ಲಾ ಕಡೆ ತಿರುಗಾಡಿಸಿದ ಪೊಲೀಸರು ಕಾಂಗ್ರೆಸ್ ಮುಖಂಡರ ವಿರುದ್ಧ ಆರೋಪ ಬಂದಾಗ ಯಾಕೆ ದೂರು ಸ್ವೀಕರಿಸಲಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ತಾವು ದೂರು ನೀಡಲು ಹೋದಾಗ ಪೊಲೀಸರು ನಿರ್ಲಕ್ಷ್ಯ ವಹಿಸಿದ್ದರ ಬಗ್ಗೆ ಸಚಿನ್ ಕುಟುಂಬಸ್ಥರು ಎಳೆ ಎಳೆಯಾಗಿ ಬಿಡಿಸಿಟ್ಟರು ತಮಗೆ ಹಾಗೂ ಸಚಿನ್ ಸಾವಿಗೆ ನ್ಯಾಯ ಕೊಡಿಸಬೇಕು ಎಂದು ದುಃಖ ತೋಡಿಕೊಂಡರು.
ವರದಿ : ನಂದಕುಮಾರ ಕರಂಜೆ, ಬೀದರ