spot_img
spot_img

ಈಶ್ವರ ಖಂಡ್ರೆ ವಿರುದ್ಧ ಮುಗಿಬಿದ್ದ ಬಿಜೆಪಿ ನಾಯಕರು

Must Read

ಭಾಲ್ಕಿಯಲ್ಲಿ ಖಂಡ್ರೆ ವಿರುದ್ದ ಧಿಕ್ಕಾರ ಕೂಗಿದ ಬಿಜೆಪಿ

ಬೀದರ: ಗಡಿ ಜಿಲ್ಲೆ ಬೀದರ್ ನಲ್ಲಿ ಮತ್ತೆ ಬಿಜೆಪಿ ಪಕ್ಷದ ನಾಯಕರು  ಕೆಪಿಸಿಸಿ ರಾಜ್ಯ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ವಿರುದ್ಧ ಮುಗಿಬಿದ್ದ ಘಟನೆ ನಡೆಯಿತು.

ಜಿಲ್ಲೆಯ ಭಾಲ್ಕಿ ಪಟ್ಟಣದಲ್ಲಿ ಬಿಜೆಪಿ  ನಾಯಕ ಡಿ ಕೆ ಸಿದ್ದರಾಮ ಮತ್ತು ಪ್ರಕಾಶ ಖಂಡ್ರೆ ನೇತೃತ್ವದಲ್ಲಿ ಭಾರಿ ದೊಡ್ಡ ಮಟ್ಟದಲ್ಲಿ ಪ್ರತಿಭಟನೆ ಯಾರ್ಲಿ ಹಮ್ಮಿಕೊಳ್ಳಲಾಗಿತ್ತು.

ಬಿಜೆಪಿ ಪಕ್ಷದ ನಾಯಕರು ಈಶ್ವರ ಖಂಡ್ರೆಯವರ ವಿರುದ್ಧ ಭಾಲ್ಕಿ ಪಟ್ಟಣದಲ್ಲಿರುವ ಗಾಂಧಿ ಚೌಕ ನಲ್ಲಿ ನಡೆದ ಯಾರ್ಲಿಯಲ್ಲಿ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಈಶ್ವರ ಖಂಡ್ರೆ ಬಡವರಿಗೆ ಮೋಸ ಮಾಡಿದ್ದಾರೆ ಬಡವರ ಮನೆಗಳನ್ನು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಿಗೆ ಮತ್ತು ಶ್ರೀಮಂತರಿಗೆ ಹಂಚಿಕೆ ಮಾಡಿದ್ದಾರೆ ಎಂದು ಆರೋಪ ಮಾಡಿದರು.

ಭಾಲ್ಕಿ ಚನ್ನಬಸವ ಪಟ್ಟದ್ದೇವರ ಒಡೆತನಕ್ಕೆ ಸೇರಿದ ಇಂಜಿನಿಯರಿಂಗ್ ಕಾಲೇಜು ಮತ್ತು ಮಠದ ಆಸ್ತಿ ತಮ್ಮ ಹೆಸರು ಮಾಡಿಕೊಂಡಿದ್ದಾರೆ ಎಂದು ಡಿ ಕೆ ಸಿದ್ದರಾಮ ಗಂಭೀರ ಆರೋಪ ಮಾಡಿದರು.

ನಿಮ್ಮ ತಂದೆ ಆದಾಯದ ಮೇಲೆ ನೀವು ಜೀವನ ನಡೆಸಿದ್ದೀರಿ. ನಾವು ಸ್ವಂತ ಆದಾಯದ ಮೇಲೆ ಜೀವನ ಮಾಡುತ್ತೇವೆ ಎಂದು ಆಕ್ರೋಶ ವ್ಯಕ್ತಪಡಿಸಿದರು ಡಿ ಕೆ ಸಿದ್ದರಾಮ ಕೆಂದ್ರ ಸಚಿವ ಭಗವಂತ ಖೂಬಾ ಕೂಡ ಕೆಪಿಸಿಸಿ ರಾಜ್ಯ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. 

ಇಪ್ಪತ್ತು ಸಾವಿರ ಬಡವರಿಗೆ ನೀವು ಮನೆ ಕೊಟ್ಟಿಲ್ಲ, ಶ್ರೀಮಂತರಿಗೆ ಮತ್ತು ನಿಮ್ಮ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಿಗೆ ಮನೆ ಕೊಟ್ಟಿದ್ದೀರಿ ಎಂದು ಆರೋಪ ಮಾಡಿದರು.

ಭಾಲ್ಕಿ ಯಲ್ಲಿ ಅರವತ್ತು ವರ್ಷಗಳ ಕಾಲ ನಿಮ್ಮ ದರ್ಬಾರ್ ನಡೆಸಿದ್ದೀರಿ. ಆದರೆ ಬಡವರಿಗೆ ಯಾವುದೇ ಉಪಯೋಗವಿಲ್ಲ. ನಿಮ್ಮ ಯೋಗ್ಯತೆಗೆ ನಿಮ್ಮ ಹೆಸರನ್ನು ತೆಗೆಯಲು ನನಗೆ ನಾಚಿಕೆ ಆಗುತ್ತದೆ ಖಂಡ್ರೆಯವರೆ ಎಂದು  ಕೇಂದ್ರ ಸಚಿವ ಭಗವಂತ ಖೂಬಾ ಆಕ್ರೋಶ ವ್ಯಕ್ತಪಡಿಸಿದರು

ಭಾಲ್ಕಿ ಯಲ್ಲಿ ಒಂದು ನೆಹರು ಕ್ರೀಡಾಂಗಣ ಕಟ್ಟಲು ನಿಮಗೆ ಸಾಧ್ಯ ಆಗಿಲ್ಲ ನಿಮಗೆ ನಿಮ್ಮ ಶಾಲೆ ಮಕ್ಕಳಿಗೆ ಮುಂದೆ ಇಟ್ಟುಕೊಂಡು ನಿಮ್ಮ ಮಗನಾದ ಸಾಗರ ಖಂಡ್ರೆ ಶಾಲೆ ಮಕ್ಕಳ ಜೊತೆ ಸೇರಿ ಪ್ರತಿಭಟನೆ ಮಾಡುತ್ತಾರೆ ನಿಮಗೆ ನಾಚಿಕೆ ಆಗಬೇಕು ಖಂಡ್ರೆ ಎಂದು ಸಚಿವರು ಕಟುವಾಗಿ ನುಡಿದರು.

ಬಡವರಿಗೆ ಮೋಸ ಮಾಡಿರುವ ಈಶ್ವರ ಖಂಡ್ರೆಗೆ ಧಿಕ್ಕಾರ ಧಿಕ್ಕಾರ.

ಬಡವರ ಮನೆ ಕಸಿದುಕೊಂಡ ಈಶ್ವರ ಖಂಡ್ರೆಗೆ ಧಿಕ್ಕಾರ ಧಿಕ್ಕಾರ

ಮುಂಬರುವ ವಿಧಾನ ಸಭಾ ಚುನಾವಣೆ ಗಮನದಲ್ಲಿಟ್ಟುಕೊಂಡು ಬಿಜೆಪಿ ನಾಯಕರು ಭಾಲ್ಕಿ ಕ್ಷೇತ್ರದಲ್ಲಿ ಶಕ್ತಿ ಪ್ರದರ್ಶನ ಮಾಡಿದ್ದರು. ಈ ಸಲ ಕೆಪಿಸಿಸಿ ರಾಜ್ಯ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಅವರನ್ನು ಸೋಲಿಸಲು ರಣತಂತ್ರ ನಡೆಯುತ್ತದೆ ಎಂದು ಹೇಳಬಹುದು.

ಆದರೆ ಡಿ ಕೆ ಸಿದ್ದರಾಮ ಮತ್ತು ಪ್ರಕಾಶ್ ಖಂಡ್ರೆ ಇಬ್ಬರು ಬಿಜೆಪಿ ಟಿಕೆಟ್ ಆಕಾಂಕ್ಷೆ ಹೊಂದಿದ್ದು ಇಬ್ಬರಲ್ಲಿ ಯಾರಿಗೆ ಒಬ್ಬರಿಗೆ ಟಿಕೆಟ್ ಸಿಕ್ಕಿದರೆ ಇಬ್ಬರು ಒಟ್ಟಿಗೆ ಸೇರಿ  ಈಶ್ವರ ಖಂಡ್ರೆಯವರನ್ನು ಸೋಲಿಸಲು ಅವರ ವಿರುದ್ಧ ಭಾಲ್ಕಿ ಪಟ್ಟಣದಲ್ಲಿ  ದೊಡ್ಡ ಮಟ್ಟದ ಪ್ರತಿಭಟನೆ ನಡೆಸಲು ನಿರ್ಧಾರ ಮಾಡಿದರು.


ವರದಿ: ನಂದಕುಮಾರ ಕರಂಜೆ, ಬೀದರ

- Advertisement -
- Advertisement -

Latest News

ರಿಯಾಯಿತಿ ದರದಲ್ಲಿ ಸಂತಾನ ಪ್ರಾಪ್ತಿ ಚಿಕಿತ್ಸೆ

ಬೆಳಗಾವಿ: ಮಕ್ಕಳಿಲ್ಲದ ಬಡ ದಂಪತಿಗಳಿಗೆ ರಿಯಾಯಿತಿ ದರದಲ್ಲಿ ಸಂತಾನ ಪ್ರಾಪ್ತಿ ಚಿಕಿತ್ಸೆ ಕೊಡಿಸಲು ಕೊಲ್ಲಾಪುರದ ಸಿದ್ಧಗಿರಿ ಮಠದ ದತ್ತಿ ಆಸ್ಪತ್ರೆಯಲ್ಲಿ ಐವಿಎಫ್ ಕೇಂದ್ರ ಸ್ಥಾಪಿಸಲಾಗಿದೆ ಎಂದು ಮುಜರಾಯಿ,...
- Advertisement -

More Articles Like This

- Advertisement -
close
error: Content is protected !!