spot_img
spot_img

ಕಾಗದದಲ್ಲಿ ಮಾತ್ರ ಅಭಿವೃದ್ಧಿ ; ಬಿಜೆಪಿ ಆರೋಪ ಸುಳ್ಳು

Must Read

- Advertisement -

ಸಿಂದಗಿ : ಪಟ್ಟಣದ ಬೀದಿ ಬದಿ ವ್ಯಾಪಾರಿಗಳ ಬಗ್ಗೆ ಕಾಳಜಿ ಇದ್ದಿದ್ದರೆ ತಮ್ಮ ೧೩ ವರ್ಷದ ಅವಧಿಯಲ್ಲಿ ಶಾಶ್ವತ ಪರಿಹಾರ ಕಂಡು ಕೊಳ್ಳಬೇಕಾಗಿತ್ತು ಎಲ್ಲರ ಸರ್ವಾನುಮತದ ನಿರ್ಧಾರದಲ್ಲಿ ಅತಿಕ್ರಮಣ ಶೆಡ್ಡುಗಳ ತೆರವು ಕಾರ್ಯಾಚರಣೆಯಲ್ಲಿ ಮಾಜಿ ಶಾಸಕರು ಮೂಗು ತೋರಿಸುತ್ತಿರುವುದು ಸರಿಯಲ್ಲ. ಅಲ್ಲದೆ ಈಗಿನ ಶಾಸಕರು ಅಭಿವೃದ್ಧಿ ಕಾಗದದಲ್ಲಿ ಮಾಡುತ್ತಿದ್ದಾರೆ ಎನ್ನುವ ಬಿಜೆಪಿಯವರ ಆರೋಪ ಶುದ್ದ ಸುಳ್ಳು. ನಮ್ಮ ಅವಧಿಯ ದಾಖಲೆಗಳನ್ನು ಇನ್ನೂ ಕೆಲವೇ ದಿನಗಳಲ್ಲಿ ಪುಸ್ತಕ ರೂಪದಲ್ಲಿ ಬಿಡುಗಡೆ ಗೊಳಿಸುತ್ತೇವೆ ನಿಮ್ಮ ದಾಖಲೆ ಸಾದರ ಪಡಿಸಿ ಎಂದು ಬ್ಲಾಕ್ ಕಾಂಗ್ರೆಸ್ ಸಮಿತಿ ಅದ್ಯಕ್ಷ ಸುರೇಶ ಪೂಜಾರಿ ಸವಾಲು ಹಾಕಿದರು.

ಪಟ್ಟಣದ ಕೃಷಿ ಮಾರುಕಟ್ಟೆ ಪ್ರಾಂಗಣದಲ್ಲಿರುವ ಬ್ಲಾಕ್ ಕಾಂಗ್ರೆಸ್ ಸಮಿತಿ ಕಾರ್ಯಾಲಯದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ನಗರವನ್ನು ಸುಂದರಗೊಳಿಸಲು ಸುಮಾರು ರೂ.೮೮ ಕೋಟಿ ಅನುದಾನ ತಂದು ಅಭಿವೃದ್ಧಿಗೆ ಮುಂದಾಗಿದ್ದಾರೆ ಅದಕ್ಕೆ ಪುರಸಭೆಯ ಎಲ್ಲ ಸದಸ್ಯರು ಸಾಥ್ ನೀಡಿದ್ದು ಅಲ್ಲದೆ ಗೂಡಂಗಡಿಗಳ ತೆರವುಗೊಳಿಸಲು ಯಾರಿಗೂ ಒತ್ತಾಯ ಹೇರಿಲ್ಲ ಎಲ್ಲರೂ ಅಭಿವೃದ್ಧಿಯ ಹಿತದೃಷ್ಠಿಯಿಂದ ಸ್ವಯಂ ಪ್ರೇರಣೆಯಿಂದ ತೆರವುಗೊಳಿಸುತ್ತಿದ್ದಾರೆ ಆದರೆ ತಿಳಿವಳಿಕೆ ಉಳ್ಳ ಮಾಜಿ ಶಾಸಕ ರಮೇಶ ಭೂಸನೂರ ಮತ್ತು ಸಂತೋಷ ಪಾಟೀಲ ಅವರಿಗೆ ಪಟ್ಟಣದ ಎಲ್ಲ ರಸ್ತೆಗಳನ್ನು ತೆರವುಗೊಳಿಸುವ ಕಾರ್ಯದಲ್ಲಿ ಬರದ ಕಾಳಜಿ ಬಸವೇಶ್ವರ ವೃತ್ತದಲ್ಲಿ ಅತಿಕ್ರಮಣ ಗೂಡಂಗಡಿಗಳ ತೆರವು ಕಾರ್ಯದಲ್ಲಿ ಬಿಜೆಪಿ ಕಾರ್ಯಕರ್ತರ ಹಿತ ಕಾಪಾಡುತ್ತಿರುವುದು ಎಷ್ಟು ಸರಿ ಎಂದು ಪ್ರಶ್ನೆ ಎಸೆದರು.

ಬೀದಿ ಬದಿ ಇರುವ ವ್ಯಾಪಾರಿಗಳ ಸಭೆ ನಡೆಸಿ ಅವರಿಗಾದ ತೊಂದರೆಯನ್ನು ನಿವಾರಿಸುವ ಇರಾದೇ ಹೊಂದಿದ್ದಾರೆ. ಗೂಡಂಗಡಿಗಳೆಂದರೆ ತಳ್ಳುವ ಗಾಡಿಯ ಮೇಲೆ ವಸ್ತುಗಳನ್ನು ದಿನವಿಡಿ ವ್ಯಾಪಾರ ಮಾಡಿಕೊಂಡು ಸಾಯಂಕಾಲ ಗಾಡಿಗಳನ್ನು ಮನೆಗೆ ಒಯ್ಯುವುದು. ಅದನ್ನು ಬಿಟ್ಟು ಅಲ್ಲಿ ಸುಸಜ್ಜಿತ ಶೆಡ್ಡುಗಳನ್ನು ನಿರ್ಮಿಸಿ ಬೇರೆಯವರಿಗೆ ಬಾಡಿಗೆ ಕೊಡುವುದಲ್ಲ. ಅದು ಗೂಡಂಗಡಿ ಎನಿಸಿಕೊಳ್ಳುವುದಿಲ್ಲ. ಈ ಕಾರ್ಯಕ್ಕೆ ಇಡೀ ಮತಕ್ಷೇತ್ರದ ನೂರಾರು ಜನರು ಬೆಂಬಲಿಸುತ್ತಿರುವಾಗ ಬಿಜೆಪಿ ನಾಲ್ಕು ಜನರಿಗಾಗಿ ಅಭಿವೃದ್ಧಿಗೆ ಅಡ್ಡಿ ಪಡಿಸುವುದು ಸರಿಯಲ್ಲ ಎಂದರು.

- Advertisement -

ಈ ವೇಳೆ ಎಂ.ಎ.ಖತೀಬ, ಸೋಮನಗೌಡ ಬಿರಾದಾರ, ರಾಜಶೇಖರ ಕೂಚಬಾಳ, ಮಹ್ಮದಪಟೇಲ ಬಿರಾದಾರ, ಸುರೇಶ ಮಳಲಿ ಮಾತನಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಜಿಪಂ ಮಾಜಿ ಉಪಾಧ್ಯಕ್ಷ ಮಲ್ಲಣ್ಣ ಸಾಲಿ, ಕುಮಾರ ದೇಸಾಯಿ, ಖಾದರ ಬಂಕಲಗಿ ಇದ್ದರು.

- Advertisement -

LEAVE A REPLY

Please enter your comment!
Please enter your name here

- Advertisement -

Latest News

ಬೆಳಗಾವಿಯಿಂದ ಇಂಡಿಗೋ ಏರ್ ಲೈನ್ಸ್ ಪುನಾರಂಭ – ಕಡಾಡಿ ಹರ್ಷ

ಬೆಳಗಾವಿ: ಇಂಡಿಗೋ ಏರ್‌ಲೈನ್ಸ್ ಸಂಸ್ಥೆಯು ಬೆಳಗಾವಿ-ಬೆಂಗಳೂರು ನಡುವೆ ಡಿಸೆಂಬರ್ 20 ರಿಂದ ತನ್ನ ಬೆಳಗಿನ ವೇಳೆಯ ವಿಮಾನ ಸಂಚಾರವನ್ನು ಪುನರಾರಂಭ ಮಾಡುತ್ತಿರುವುದು ಸಂತೋಷದ ವಿಷಯ ಎಂದು...
- Advertisement -

More Articles Like This

- Advertisement -
close
error: Content is protected !!
Join WhatsApp Group