ಬೆಂಗಳೂರು – ರಾಜ್ಯ ವಿಧಾನ ಸಭೆಯ ಚುನಾವಣೆಗಳು ಹತ್ತಿರಕ್ಕೆ ಬರುತ್ತಿದ್ದಂತೆಯೇ ರಾಜಕೀಯ ಪಕ್ಷಗಳ ಪ್ರಣಾಳಿಕೆಗಳ ಬಗ್ಗೆ ಎಲ್ಲರ ಕುತೂಹಲ ಗರಿಗೆದರುತ್ತದೆ.
ಈಗಾಗಲೇ ಕಾಂಗ್ರೆಸ್ ಪಕ್ಷವು ತನ್ನ ಪ್ರಣಾಳಿಕೆ ಬಿಡುಗಡೆ ಮಾಡಿದ್ದು ಮತದಾರರಿಗೆ ಅವರ ಸ್ವಾಭಾನವೊಂದನ್ನು ಬಿಟ್ಟು ಎಲ್ಲವನ್ನೂ ಬಿಟ್ಟೀ ಕೊಡುವ ಭರವಸೆ ನೀಡಿ ಚುನಾವಣೆಯತ್ತ ದಾಪುಗಾಲು ಇಡುತ್ತಿದೆ.
ಇಲ್ಲಿಯವರೆಗೂ ಯಾವುದೆ ಪ್ರಣಾಳಿಕೆ ಬಿಡುಗಡೆ ಮಾಡದೆ ಆಶ್ಚರ್ಯ ಮೂಡಿಸಿದ್ದ ಭಾರತೀಯ ಜನತಾ ಪಕ್ಷವು ಇಂದು ತನ್ನದೇ ಆದ ಚುನಾವಣಾ ಪ್ರಣಾಳಿಕೆ ಬಿಡುಗಡೆ ಮಾಡಿ, ಇದರಲ್ಲೂ ತಾನು ವಿಭಿನ್ನ ಎಂಬುದನ್ನು ಮತ್ತೆ ಸಾರಿ ಹೇಳಿದೆ.
ಯಾಕೆಂದರೆ ಈವರೆಗೂ ಯಾವುದೇ ಸೂಚನೆ ಕೊಡದೆ, ಯಾರ ಕಲ್ಪನೆಗೂ ಬರದೇ ಇದ್ದ ಸಿರಿ ಧಾನ್ಯಗಳನ್ನು ಅಕ್ಕಿಯ ಜೊತೆಗೆ ನೀಡುವ ಪ್ರಣಾಳಿಕೆ ಬಿಡುಗಡೆ ಮಾಡಿರುವ ಬಿಜೆಪಿ ಅಚ್ಚರಿ ಮೂಡಿಸಿದೆ ಅಲ್ಲದೆ ವ್ಯಾಪಕ ಪ್ರಶಂಸೆಗೂ ಒಳಗಾಗಿದೆ.
ಹಾಗೆ ನೋಡಿದರೆ ಇತ್ತೀಚಿನ ದಿನಗಳಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಸಿರಿಧಾನ್ಯಗಳ ಮಹತ್ವದ ಬಗ್ಗೆ ತಮ್ಮ ಎಲ್ಲಾ ಭಾಷಣಗಳಲ್ಲಿ ಪ್ರಸ್ತಾಪಿಸುತ್ತಿದ್ದರು.ಈಗ ಚುನಾವಣಾ ಪ್ರಣಾಳಿಕೆಯಲ್ಲಿಯೇ ಸಿರಿಧಾನ್ಯ ನೀಡುವುದಾಗಿ ಘೋಷಣೆ ಮಾಡಿದೆ.
ಇದರ ಜೊತೆಗೆ ಬಿಪಿಎಲ್ ಕುಟುಂಬಕ್ಕೆ ವರ್ಷದಲ್ಲಿ ಮೂರು ಸಿಲಿಂಡರ್ ಉಚಿತ, ನಿವೇಶನ ಇಲ್ಲದವರಿಗೆ ಹತ್ತು ಲಕ್ಷ ಮನೆಗಳ ನಿರ್ಮಾಣ, ಬಿಪಿಎಲ್ ಕುಟುಂಬಕ್ಕೆ ೫ ಕೆಜಿ ಅಕ್ಕಿ ಹಾಗೂ ೫ ಕೆಜಿ ಸಿರಿಧಾನ್ಯ, ಬಿಪಿಎಲ್ ಕುಟುಂಬಕ್ಕೆ ಪ್ರತಿದಿನ ಅರ್ಧ ಲೀಟರ್ ನಂದಿನಿ ಹಾಲು, ಹಿರಿಯ ನಾಗರಿಕರಿಗೆ ಉಚಿತ ಮಾಸ್ಟರ್ ಆರೋಗ್ಯ ಚೆಕಪ್, ಬೆಂಗಳೂರಿನ ಹೊರಗೆ ಇರುವವರಿಗೆ ೧೦ ಲಕ್ಷ ಉದ್ಯೋಗ ನೀಡಿಕೆ….ಹೀಗೆ ಪ್ರಣಾಳಿಕೆಯನ್ನು ಬಿಜೆಪಿ ಬಿಡುಗಡೆ ಮಾಡಿದೆ.