ಸಿಂದಗಿ; ನರೇಂದ್ರ ಮೋದಿಜಿ ಅವರ ನೇತೃತ್ವದಲ್ಲಿ ಸಂಘಟನೆ ಮತ್ತು ಪಕ್ಷ ಬಲವಾಗುವ ಜೊತೆಗೆ ದೇಶದ ಅಭಿವೃದ್ಧಿ ಉನ್ನತ ಮಟ್ಟದಲ್ಲಿದ್ದು ಭಾರತ ವಿಶ್ವ ಗುರುವನ್ನಾಗಿಸಲು ಎಲ್ಲರೂ ಪಣತೊಟ್ಟು ಪಕ್ಷ ಸಂಘಟನೆ ಮಾಡಬೇಕಾಗಿದೆ ಎಂದು ಸಂಸದ, ಮಾಜಿ ಸಚಿವ ರಮೇಶ ಜಿಗಜಿಣಗಿ ಹೇಳೀದರು.
ಪಟ್ಟಣದ ಬಿಜೆಪಿ ಕಾರ್ಯಾಲಯದಲ್ಲಿ ಭಾರತೀಯ ಜನತಾ ಪಾರ್ಟಿ ಸಿಂದಗಿ ಮಂಡಲ ಸಂಘಟನಾತ್ಮಕ ಸಭೆಯಲ್ಲಿ ಮಾತನಾಡಿ, ಪ್ರತಿಯೊಬ್ಬರೂ ಕೂಡ ಭಾರತೀಯ ಜನತಾ ಪಾರ್ಟಿಯ ಸದಸ್ಯತ್ವವನ್ನು ಪಡೆದುಕೊಂಡು ಎಲ್ಲಾ ಕಾರ್ಯಕರ್ತರು ಸಕ್ರಿಯ ಸದಸ್ಯರಾಗಬೇಕೆಂದು ವಿನಂತಿಸುತ್ತ, ನಾನು ಸಂಸದನಾಗಿ ಕೇಂದ್ರ ಸಚಿವರಾಗಿ ಹಲವಾರು ಕೆಲಸಗಳನ್ನು ಜಿಲ್ಲೆಯಲ್ಲಿ ಮಾಡಿದ್ದೇನೆ ಇದಕ್ಕೆಲ್ಲ ನೀವು ಕೊಟ್ಟಂತಹ ಒಂದು ಮತದಿಂದ ನನಗೆ ಇಷ್ಟೆಲ್ಲ ಅಭಿವೃದ್ಧಿ ಮಾಡಲು ಸಾಧ್ಯವಾಯಿತು, ಇವತ್ತು ನಮ್ಮ ಸರ್ಕಾರ ಇರದೇ ಇರಬಹುದು ಆದರೆ ಹೋರಾಟದಲ್ಲಿ ನಾವು ಯಾವತ್ತೂ ಸಹಿತ ಮುಂಚೂಣಿಯಲ್ಲಿ ಇರಬೇಕಾದಂಥ ಅನಿವಾರ್ಯತೆ ಇದೆ ಎಂದು ತಿಳಿಸಿದರು,
ಮಾಜಿ ಶಾಸಕ ರಮೇಶ್ ಭೂಸನೂರ್ ಮಾತನಾಡಿ, ಈಗಿನ ಸರ್ಕಾರ ಕೇವಲ ಮಾತಿಗಷ್ಟೆ ಸರ್ಕಾರವಾಗಿದ್ದು ಕೆಲಸದಲ್ಲಿ ಶೂನ್ಯವಾಗಿದೆ, ರೈತರ ಕಷ್ಟ ಗಳನ್ನು ಕೇಳುವವರಿಲ್ಲ, ರೈತರು ಜಮೀನು ಕಳೆದುಕೊಂಡು ಇವತ್ತು ಬೀದಿ ಪಾಲಾಗುವ ಪರಿಸ್ಥಿತಿ ಎದುರಿಸುತ್ತಿದ್ದಾರೆ, ಕೂಡಲೇ ಎಲ್ಲಾ ಆಸ್ತಿಗಳ ಮೇಲಿದ್ದ ಅಂತ ಸರ್ಕಾರದ ವಕ್ಪ್ ಅನ್ನುವಂತದ್ದು ತೆಗೆದು ಹಾಕಿ ಎಲ್ಲ ರೈತರಿಗೂ ನ್ಯಾಯ ಕೊಡಿಸುವಂತಾಗಬೇಕು ಇದರಲ್ಲಿ ನಾವು ಯಾವುದೇ ರೀತಿಯಿಂದ ರೈತರಿಗೆ ತೊಂದರೆ ಆಗದ ಹಾಗೆ ನೋಡಿಕೊಳ್ಳುವ ಜವಾಬ್ದಾರಿ ಮತ್ತು ಹೋರಾಟವನ್ನು ನಿರಂತರವಾಗಿ ಮಾಡುತ್ತೇವೆ ಎಂದರು.
ಮೋರ್ಚಾ ಉಪಾಧ್ಯಕ್ಷ ವಿವೇಕ್ ಡಬ್ಬಿ ಮಾತನಾಡಿ, ಭಾರತೀಯ ಜನತಾ ಪಾರ್ಟಿ ಕೇವಲ ಸಂಘಟನೆ ಎಲ್ಲ ದೇಶಮುಂಚೂಣಿಯಲ್ಲಿ ನಡೆಸಿರತಕ್ಕಂತ ಅತಿ ದೊಡ್ಡ ಸಂಘಟನೆಯಾಗಿದ್ದು ಇವತ್ತು ಸುಮಾರು ಎಂಟು ಕೋಟಿ ಹೆಚ್ಚು ಸದಸ್ಯರನ್ನು ನೋಂದಾವಣೆ ಮಾಡಿದ್ದಾಗಿದೆ ಇನ್ನೂ ಮುಂದೆ ಹೆಚ್ಚಿನ ಸಂಖ್ಯೆಯಲ್ಲಿ ಸದಸ್ಯತ್ವವನ್ನು ಮಾಡಿ ಸುಮಾರು ನಮ್ಮ ಗುರಿಯನ್ನು ೧೦ ಕೋಟಿ ತಲುಪಬೇಕಾದದ್ದು ನಮ್ಮ ಪಕ್ಷದ ಗುರಿಯಾಗಿದ್ದು ಪ್ರತಿಯೊಬ್ಬರ ಮನೆ ಮನೆಗೆ ತೆರಳಿ ಭಾರತೀಯ ಜನತಾ ಪಾರ್ಟಿಯ ಸದಸ್ಯರನ್ನಾಗಿ ಮಾಡೋಣ ಅದರ ಜೊತೆಗೆ ಯಾವತ್ತು ಪಕ್ಷದ ಪದಾಧಿಕಾರಿಗಳು ಎಲ್ಲರೂ ಸೇರಿ ಸಂಘಟನೆಯಲ್ಲಿ ಭಾಗಿಯಾಗೋಣ ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಮಂಡಲ ಅಧ್ಯಕ್ಷ ಸಂತೋಷ ಪಾಟೀಲ ಡಂಬಳ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮುಳುಗೋಡ್ ಪಾಟೀಲ್, ಈರಣ್ಣ ರಾವೂರ, ಜಿಲ್ಲಾ ಪ್ರಕೋಷ್ಠಗಳ ಸಂಚಾಲಕ ಮಲ್ಲಿಕಾರ್ಜುನ ಜೋಗೂರ, ಜಿಲ್ಲಾ ಪಂಚಾಯತ್ ಸದಸ್ಯರ ಶಂಕರ್ ಬಗಲಿ, ಶ್ರೀಮಂತ ನಾಗೂರ್, ಬಿ ಆರ್ ಎಂಟ್ಮಾನ್, ಸಿದ್ದು ಬುಳ್ಳಾ, ಮಹಿಳಾ ಮಂಡಲ ಅಧ್ಯಕ್ಷೆ ನೀಲಮ್ಮ ಯಡ್ರಾಮಿ, ಅಶೋಕ ಅಲ್ಲಾಪುರ್, ಪ್ರಧಾನ ಕಾರ್ಯದರ್ಶಿ ಗುರು ತಳವಾರ್, ಇತರ ಪಕ್ಷದ ಪದಾಧಿಕಾರಿಗಳು ಹಿರಿಯರು ಮೋರ್ಚಾಗಳ ಅಧ್ಯಕ್ಷರು ಕಾರ್ಯಕರ್ತರು ಭಾಗವಹಿಸಿದ್ದರು