ಬೀದರ – ಶಾಸಕ ಸಿದ್ದು ಪಾಟೀಲ ವಿರುದ್ಧ ಎಮ್ಎಲ್ಸಿ ಚಂದ್ರಶೇಖರ್ ಪಾಟೀಲ್ ಬೆದರಿಕೆ ವಿಚಾರ ಕುರಿತಂತೆ ಹುಮನಾಬಾದ್ ಪಟ್ಟಣದಲ್ಲಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು
ಇತ್ತೀಚೆಗೆ ನಡೆದ ಕಾಂಗ್ರೆಸ್ ಸಮಾರಂಭದಲ್ಲಿ ಸಿದ್ದು ಪಾಟೀಲ ವಿರುದ್ಧ ಚಂದ್ರಶೇಖರ ಪಾಟೀಲ್ ನಾಲಿಗೆ ಹರಿಬಿಟ್ಟಿದರು. ಅವರು ಮಾತನಾಡುತ್ತ ಹುಮನಾಬಾದ ಶಾಸಕ ಸಿದ್ದು ಪಾಟೀಲ್ ಪಾಕೀಟ್ ಎಮ್ಎಲ್ಎ, ಅವನು ಏನಾದರೂ ಮಾತಾಡಿದರೆ ನಾಲಿಗೆ ಕತ್ತರಿಸುತ್ತೇನೆ, ಸ್ವಲ್ಪ ಸಮಯ ಕೊಡಿ ಅವನಿಗೆ ಗಣೇಶನ ಸೊಂಡಿಲಿನಿಂದ ಬೀಸಾಕುತ್ತೇನೆಂದು ಸಿದ್ದು ಪಾಟೀಲ್ ವಿರುದ್ಧ ವಾಗ್ದಾಳಿ ನಡೆಸಿದರು
ಹೀಗಾಗಿ ಕಾಂಗ್ರೆಸ್ ಎಮ್ಎಲ್ಸಿ ಚಂದ್ರಶೇಖರ ಪಾಟೀಲ್ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ನಗರದ ವೀರಭದ್ರೇಶ್ವರ ದೇವಸ್ಥಾನದಿಂದ ಅಂಬೇಡ್ಕರ್ ವೃತದ ವರೆಗೂ ಪ್ರತಿಭಟನಾ ಮೆರವಣಿಗೆ ನಡೆಸಿ ಕಾಂಗ್ರೆಸ್ ನ ಮಾಜಿ ಸಚಿವ ರಾಜಶೇಖರ ಪಾಟೀಲ್, ಎಮ್ಎಲ್ಸಿಗಳಾದ ಭೀಮು ಪಾಟೀಲ್, ಚಂದ್ರಶೇಖರ ಪಾಟೀಲ್ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಪ್ರತಿಭಟನೆ ನಡೆಸಿದರು.
ವರದಿ: ನಂದಕುಮಾರ ಕರಂಜೆ, ಬೀದರ