ಕೊರೋನಾ ಕುರಿತು ಬಿಜೆಪಿಯ ಬೂಟಾಟಿಕೆ – ಅಕ್ಬರ್ ಮುಲ್ಲಾ ಆರೋಪ

Must Read

ಸಂಚಾರಿ ವಿಜಯ್ ಬ್ರೇನ್ ಡೆಡ್ ; ನಾಳೆ “ನಿಧನ” ರಾಗಲಿರುವ ನಟ. ವಿಚಿತ್ರ ಪರಿಸ್ಥಿತಿ

ಬೆಂಗಳೂರು - ಯುವ ನಟ, ರಾಷ್ಟ್ರ ಪ್ರಶಸ್ತಿ ವಿಜೇತ ಕಲಾವಿದ ಸಂಚಾರಿ ವಿಜಯ್ ಅಪಘಾತದ ಕಾರಣದಿಂದಾಗಿ ಬ್ರೇನ್ ಡೆಡ್ ಆಗಿ ನಿಧನ ಹೊಂದಿದರೆಂದು ಹೇಳುವ ವಿಚಿತ್ರ...

ಜನ ಸಾಮಾನ್ಯರ ತುರ್ತು ಸೇವೆಗಾಗಿ ಅರಭಾವಿ ಕ್ಷೇತ್ರದ ಎಲ್ಲ ಪಿಎಚ್‍ಸಿಗಳಿಗೆ ರಕ್ಷಾ ಕವಚ ವಾಹನ ಸೌಲಭ್ಯ : ಶಾಸಕ ಬಾಲಚಂದ್ರ ಜಾರಕಿಹೊಳಿ

ಮೂಡಲಗಿಯಲ್ಲಿ ಟಾಸ್ಕ್ ಫೋರ್ಸ್ ಸಭೆ ಮೂಡಲಗಿ : ಕೋವಿಡ್ ಎರಡನೆಯ ಅಲೆಯ ವಿರುದ್ದ ಹೋರಾಟ ಮಾಡಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುತ್ತಿರುವ ಕೊರೋನಾ ವಾರಿಯರ್ಸ್‌ ಗಳ ಕಾರ್ಯ...

ಪುರಸಭೆಯ ಸಾಮಾನ್ಯ ಸಭೆ ಕರೆಯಲು ಮನವಿ

ಸಿಂದಗಿ: ಪಟ್ಟಣದ ಹಲವು ವಾರ್ಡುಗಳಲ್ಲಿ ನೀರಿನ ಸಮಸ್ಯೆ, ಗಟಾರಗಳ ಸಮಸ್ಯೆ ಸೇರಿದಂತೆ ಹಲವಾರು ಸಮಸ್ಯೆಗಳು ಉಲ್ಬಣ ಸೇರಿದಂತೆ ಹಲವಾರು ವಿಷಯಗಳ ಕುರಿತು ಚರ್ಚಿಸಲು ಸಾಮಾನ್ಯ ಸಭೆ...

ಸಿಂದಗಿ– ಮಾಹಾಮಾರಿ ಕೊರೋನಾ ಸೋಂಕು ಆವರಿಸಿ ಇಡೀ ರಾಜ್ಯದ ಜನತೆ ತತ್ತರಿಸಿ ಹೋಗಿದೆ ಇದರ ತಡೆಗೆ ಸರಕಾರ ಲಾಕ್ ಡೌನ್ ಹೇರಿ ಯಾರೂ ಮನೆ ಬಿಟ್ಟು ಬರಬೇಡಿ ಎಂದು ಮುಖ್ಯಮಂತ್ರಿಗಳು ಹೇಳಿದರೆ ರಾಜ್ಯಾಧ್ಯಕ್ಷ ನಳಿನಕುಮಾರ ಕಟೀಲ ಅವರು ಭೂತ್ ಮಟ್ಟದಲ್ಲಿ ಧುಮುಕಿ ಕಾರ್ಯ ನಿರ್ವಹಿಸಿ ಎಂದು ಹೇಳಿಕೆ ನೀಡುತ್ತಿರುವುದನ್ನು ನೋಡಿದರೆ ಪ್ರಚಾರಕ್ಕಾಗಿ ಕೊರೋನಾ ಎಂಬ ಬೂಟಾಟಿಕೆ ಎಬ್ಬಿಸಿದ್ದು ಸಾಬೀತು ಪಡಿಸಿದಂತಾಗಿದೆ ಎಂದು ಜೆಡಿಎಸ್ ಮಾಜಿ ತಾಪಂ ಸದಸ್ಯ ಅಕ್ಬರ ಮುಲ್ಲಾ ಆರೋಪಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಮೇ ೧ರಿಂದ ೧೮ ವರ್ಷದ ಮೇಲ್ಪಟ್ಟವರಿಗೂ ಕೋವಿಡ್ ಲಸಿಕೆ ಹಾಕಿಕೊಳ್ಳಿ ಎಂದು ಹೇಳುತ್ತಿರುವ ಆರೋಗ್ಯ ಸಚಿವ ಡಾ.ಸುಧಾಕರ ಅವರು ಕೊವಿಡ್ ಗೆ ತುತ್ತಾಗುತ್ತಿರುವರಿಗೆ ವಾಕ್ಸಿನ್, ರೆಮ್ ಡಿಸಿವಿರ್, ಆಕ್ಸಿಜನ್ ಅಲ್ಲದೆ ಸುರಕ್ಷತೆಗಾಗಿ ಬೇಕಾಗುವ ಸಲಕರಣೆಗಳನ್ನು ಪೂರೈಕೆ ಮಾಡಲು ವಿಫಲರಾಗಿದ್ದಾರೆ ಮೊದಲು ಸರಕಾರ ನಡೆಸುವವರು ಒಂದು ಸ್ಥಳದಲ್ಲಿ ಕುಳಿತು ಯಾವ ಕ್ರಮ ಜರುಗಿಸಿದರೆ ಇದರಿಂದ ಮುಕ್ತರಾಗಬಹುದು ಎನ್ನುವ ಚಿಂತನೆ ನಡೆಸಿ ನಂತರ ಪತ್ರಿಕಾ ಹೇಳಿಕೆ ನೀಡಿ ಎಂದು ನೇರವಾಗಿ ಟಾಂಗ್ ನೀಡಿದರು.

ಬಿಜೆಪಿ ಪಡೆ ಕೊರೋನಾ ಕಡೆ ಎಂದು ಬಿಂಬಿಸುವದನ್ನು ಬಿಟ್ಟು ಭೂತ್ ಮಟ್ಟದ ಕಾರ್ಯಕರ್ತರು ಕೊರೊನಾಕ್ಕೆ ಬಲಿಯಾದ ವ್ಯಕ್ತಿಯ ಮನೆಗೆ ತೆರಳಿ ಆ ಸಮಾಜದ ವಿಧಿ ವಿಧಾನಗಳ ಪ್ರಕಾರ ಅಂತ್ಯ ಸಂಸ್ಕಾರ ನಡೆಸಲಿ. ಕೊರೋನಾ ಸೋಂಕು ತಗುಲಿದೆ ಎಂದರೆ ಊರೇ ಖಾಲಿ ಮಾಡುವ ಕಾರ್ಯಕರ್ತರ ಮಧ್ಯೆ ಬೂಟಾಟಿಕೆ ಹೇಳಿಕೆ ನೀಡುವುದನ್ನು ನಿಲ್ಲಿಸಿ ಎಂದು ಕುಟುಕಿದರು.

- Advertisement -
- Advertisement -
- Advertisement -

Latest News

ಸಂಚಾರಿ ವಿಜಯ್ ಬ್ರೇನ್ ಡೆಡ್ ; ನಾಳೆ “ನಿಧನ” ರಾಗಲಿರುವ ನಟ. ವಿಚಿತ್ರ ಪರಿಸ್ಥಿತಿ

ಬೆಂಗಳೂರು - ಯುವ ನಟ, ರಾಷ್ಟ್ರ ಪ್ರಶಸ್ತಿ ವಿಜೇತ ಕಲಾವಿದ ಸಂಚಾರಿ ವಿಜಯ್ ಅಪಘಾತದ ಕಾರಣದಿಂದಾಗಿ ಬ್ರೇನ್ ಡೆಡ್ ಆಗಿ ನಿಧನ ಹೊಂದಿದರೆಂದು ಹೇಳುವ ವಿಚಿತ್ರ...
- Advertisement -

More Articles Like This

- Advertisement -
close
error: Content is protected !!