ಇತ್ತೀಚಿನ ದಿನಗಳಲ್ಲಿ ಹೆಚ್ಚು ಕಾಡುತ್ತಿರುವ ಹೊಸ ರೋಗವೆಂದರೆ ಬ್ಲಾಕ್ ಫಂಗಸ್. ಕೊರೋನಾದಿಂದ ಚೇತರಿಕೆ ಕಂಡವರಲ್ಲಿ ಇದು ಕಾಣಿಸಿಕೊಳ್ಳುತ್ತಿರುವುದು ವಿಪರ್ಯಾಸ. ಕೊರೋನಾವೇ ಸಾಕಷ್ಟು ಹೈರಾಣ ಮಾಡಿ ಹೋಯಿತು ಎನ್ನುತ್ತಿರುವಾಗಲೇ ಈ ಬ್ಲಾಕ್ ಫಂಗಸ್ ಕಾಣಿಸಿಕೊಂಡು ಜನರ ಜೀವನವನ್ನು ಮತ್ತಷ್ಟು ಹೈರಾಣವಾಗಿಸುತ್ತಿದೆ.
ಕೊರೋನಾ ಟ್ರೀಟ್ಮೆಂಟಿನಲ್ಲಿ ಸಾಕಷ್ಟು ಸ್ಟಿರಾಯ್ಡ್ ಗಳು ಅಂದರೆ ಉದ್ದೀಪನಕಾರಿ ಔಷಧಗಳ ಬಳಕೆಯಿಂದಾಗಿ ಕೊರೋನಾ ನಂತರ ಬ್ಲಾಕ್ ಫಂಗಸ್ ಕಂಡುಬರುತ್ತಿದೆ ಎನ್ನಲಾಗಿದೆ.
ಸಕ್ಕರೆ ರೋಗ ನಿಯಂತ್ರಣದಲ್ಲಿ ಇರದವರಿಗೂ ಇದು ಕಾಣಿಸಿಕೊಳ್ಳುತ್ತಿದ್ದು ಬ್ಲಾಕ್ ಫಂಗಸ್ ಮುಖ್ಯವಾಗಿ ಬಾಯಿ, ವಸಡು, ಕಣ್ಣು, ಮೂಗು, ಕಿವಿಗಳಲ್ಲಿ ತೋರುತ್ತದೆ. ಆದ್ದರಿಂದ ಪ್ರಾಥಮಿಕ ಎಚ್ಚರಿಕೆಯ ಕ್ರಮವಾಗಿ ಬ್ಲಾಕ್ ಫಂಗಸ್ ಬರದಂತೆ ತಡೆಯಲು ದಂತ ತಜ್ಞರು ಕೆಲವು ಸಲಹೆಗಳನ್ನು ನೀಡಿದ್ದಾರೆ. ಅವುಗಳನ್ನು ನೋಡೋಣ ಬನ್ನಿ…
- ಕೋವಿಡ್ ನಿಂದ ಆರಾಮ ಆದ ನಂತರ ಬ್ಲಾಕ್ ಫಂಗಸ್ ಬ್ಯಾಕ್ಟೀರಿಯಾ ಮೂಗಿನ ನಾಳಗಳು, ಶ್ವಾಸಕೋಶ ಹಾಗೂ ಮಿದುಳಿನಲ್ಲಿ ಬೆಳೆಯುತ್ತದೆ ಆದ್ದರಿಂದ ದಿನಕ್ಕೆ ಎರಡು ಮೂರು ಸಲ ಹಲ್ಲು ತಿಕ್ಕಿ ಬಾಯಿ ತೊಳೆಯಬೇಕು. ಇದರಿಂದ ಬ್ಯಾಕ್ಟೀರಿಯಾ ಬೆಳೆಯದಂತೆ ಸಹಾಯವಾಗುತ್ತದೆ.
- ಯಾವುದಾದರೂ ಮೌತ್ ಕ್ಲೀನರ್ ನಿಂದ ಬಾಯಿ ಸ್ವಚ್ಛಗೊಳಿಸಬೇಕು. ಕೊರೋನಾ ನೆಗೆಟಿವ್ ಎಂದು ತೋರಿಸಿದ ಕ್ಷಣದಿಂದಲೆ ಹಲ್ಲು ತಿಕ್ಕುವ ಬ್ರಶ್ ಬದಲಿಸಬೇಕು.
- ಬ್ರಶ್ ಮತ್ತು ನಾಲಿಗೆ ಕ್ಲೀನರ್ ಗಳನ್ನು ಮನೆಯ ಸದಸ್ಯರ ಬ್ರಶ್ ಜೊತೆಯೇ ಒಂದೇ ಕಡೆ ಇಡಬಾರದು. ಇವುಗಳನ್ನು ಆ್ಯಂಟಿಸೆಪ್ಟಿಕ್ ಕ್ಲೀನರ್ ನಿಂದ ಸ್ವಚ್ಛಗೊಳಿಸುತ್ತ ಇರಬೇಕು.
- ಬ್ಲಾಕ್ ಫಂಗಸ್ ತೀರಾ ಅಪಾಯಕಾರಿಯಾಗಿದ್ದು ಮುನ್ನೆಚ್ಚರಿಕೆ ಕೈಗೊಳ್ಳುವುದು ತೀರ ಅಗತ್ಯ. ಬಾಯಿಯ ಸ್ವಚ್ಛತೆ, ಶಾರೀರಿಕ ಸ್ವಚ್ಛತೆ ತುಂಬ ಅವಶ್ಯಕ. ಅದರಲ್ಲೂ ಕೊರೋನಾದಿಂದ ಚೇತರಿಕೆ ಕಂಡವರು ಹಾಗೂ ಸಕ್ಕರೆ ಕಾಯಿಲೆ ಇರುವವರು ಸಕ್ಕರೆ ನಿಯಂತ್ರಣ ಮಾಡುವುದು ತುಂಬಾ ಪ್ರಯೋಜನಕಾರಿ.