ಸಿಲಿಕಾನ್ ಸಿಟಿಯಲ್ಲಿ “ಬಿ.ಎಂ.ಟಿ.ಸಿ ಎಂಬ ಅವವ್ಯಸ್ಥೆಯ ಆಗರ”
ಬೆಂಗಳೂರು : KA- 57- F- 3345 ಬಿ.ಎಂ.ಟಿ.ಸಿ ಬಸ್ ಬನಶಂಕರಿ ಬಸ್ ನಿಲ್ದಾಣದ ಡಿಪೋ ದಿಂದ ಹೊರಟು ಹೆಬ್ಬಾಳ ತಲುಪುವ ಒಂದೇ ಬಸ್ ನಲ್ಲಿ ಇಂದು ಬೆಳಿಗ್ಗೆ 3 ಬಸ್ ಗೆ ಆಗುವಷ್ಟು ಜನರು ಪ್ರಯಾಣ ಮಾಡುತ್ತಾ ಇದ್ದರು,ಅವರಲ್ಲಿ ನಾನು ಸಹ ಒಬ್ಬ.
ವೀರಭದ್ರ ನಗರದ ಹಿಂದಿನ ಬಸ್ ನಿಲ್ದಾಣದಲ್ಲಿ ಅಂದರೆ ಪಿ.ಎಸ್ .ಕಾಲೇಜು ಬಸ್ ನಿಲ್ದಾಣದಲ್ಲಿ ಸುಮಾರು ಮುಕ್ಕಾಲು ಗಂಟೆಗಳ ಕಾಲ ಕಾದರೂ ಸುಮ್ಮನ್ನ ಹಳ್ಳಿ , ಗೋರಗುಂಟೆ ಪಾಳ್ಯ ,ಯಶವಂತಪುರ ಹಾಗೂ ಹೆಬ್ಬಾಳದ ಕಡೆ ಹೋಗುವ ಬಸ್ ಬರದ ಕಾರಣ ಪಿ.ಎಸ್ ಕಾಲೇಜು ಬಳಿ , ನ್ಯಾಯಂದಳ್ಳಿ ಬಸ್ ನಿಲ್ದಾಣದಲ್ಲಿ ಹಾಗೂ ನಾಗರಭಾವಿ ಬಸ್ ನಿಲ್ದಾಣದಲ್ಲಿ ಬಸ್ ಕಾಯುತ್ತಾ ನಿಂತಿದ್ದ ಎಲ್ಲ ನಾಗರಿಕರು ಒಂದೇ ಬಸ್ಸಿನಲ್ಲಿ ಪ್ರಯಾಣ ಮಾಡುವಾಗ ಒಂದೆಡೆ ಕೆಲಸ ಮಾಡುವ ಕಛೇರಿ ತಲಪುವ ತವಕ ಮತ್ತೊಂದೆಡೆ ಬಸ್ ತುಂಬಿ ತುಳುಕುತ್ತಾ ಇದ್ದ ಕಾರಣ ಪ್ರಯಾಣಿಕರಿಗೆ ಉಸಿರುಗಟ್ಟಿ ಹೋಗುತ್ತಾ ಇತ್ತು , ಇವೆಲ್ಲರ ನಡುವೆ ಬಸ್ ನ ನಿರ್ವಾಹಕ ಎಲ್ಲರಿಗೂ ಟಿಕೆಟ್ ವಿತರಿಸುವ ತವಕ ಕಾರಣ ಬಸ್ ನಿಲ್ದಾಣದ ನಂತರ ಸ್ಟೇಜ್ ಬರುವ ಲೆಕ್ಕ , ಬಿ.ಎಂ.ಟಿ.ಸಿ ಅಧಿಕಾರಿಗಳು ಬಂದು ಅವರಿಗೆ ಎಲ್ಲಿ ದಂಡ ವಿಧಿಸಿದರೆ ಎಂಬ ಆತಂಕ !!
ಸಮಯಕ್ಕೆ ಸರಿಯಾಗಿ ಬಸ್ ಬರದೆ ಇದ್ದಾಗ ಬಗ್ಗೆ ಜನದಟ್ಟಣೆ ಆಗುತ್ತದೆ. ಬಸ್ ನವರು ಮಾತ್ರ ಜನರನ್ನು ಕುರಿ ತುಂಬಿದಂತೆ ತುಂಬುತ್ತಾರೆ ಇದರಿಂದ ವಯಸ್ಸಾದವರಿಗೆ ಹೆಣ್ಣು ಮಕ್ಕಳಿಗೆ ತೊಂದರೆಯಾಗುತ್ತದೆ ಈ ಬಗ್ಗೆ ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದಾಗ ನಿರ್ವಾಹಕ, ನಾನೂ ಒಬ್ಬ ಕೂಲಿ ಸ್ವಾಮಿ ಎಂದು ಬಸ್ ನಲ್ಲಿ ಇದ್ದ ಪ್ರಯಾಣಿಕರಿಗೆ ಟಿಕೆಟ್ ಹಂಚಿಕೆ ಯಲ್ಲಿ ಬ್ಯುಸಿ ಆಗಿದ್ದ. ಬಸ್ ಚಾಲಕ ಮಾತ್ರ ಬಸ್ ಅನ್ನು ಆಮೆ ಗತಿಯಲ್ಲಿ ಚಾಲನೆ ಮಾಡುತ್ತ ಇದ್ದರೆ ನಮಗೆ ಕಛೇರಿ ತಲುಪುವ ಅವಸರ. ಆದರೆ ಕೇಳುವವರಾರು ?
ಬಸ್ ಗಳನ್ನು ಬೆಳಗಿನ ಹೊತ್ತು ಶಾಲೆಗೆ ಹೋಗುವ ಮಕ್ಕಳು , ಕೆಲಸಕ್ಕೆ ಹೋಗುವ ಕೂಲಿ ಕಾರ್ಮಿಕರು ಹಾಗೂ ಕಛೇರಿಗಳಿಗೆ ಹೋಗುವ ನೌಕರರು ಬಳಸುತ್ತಾರೆ. ಬೆಳಗಿನ ವೇಳೆಯಲ್ಲಿ ಸಾಕಷ್ಟು ರಶ್ ಆಗುತ್ತದೆ ಆದರೆ ಬಿಎಂಟಿಸಿಯವರು ಜನದಟ್ಟಣೆ ಕಡಿಮೆ ಮಾಡಲು ಯಾವುದೆ ಕ್ರಮ ಕೈಗೊಂಡಿಲ್ಲ. ಇದನ್ನೇ ಸಿಲಿಕಾನ್ ಸಿಟಿಯಲ್ಲಿ ” ಬಿ.ಎಂ.ಟಿ.ಸಿ ಎಂಬ ಅವವ್ಯಸ್ಥೆಯ ಆಗರ” ಎಂದು ಜನ ಹಿಡಿ ಶಾಪ ಹಾಕಿ ಆಕ್ರೋಶ ವ್ಯಕ್ತಪಡಿಸುತ್ತಾ ಇದ್ದ ದೃಶ್ಯ ಬಸ್ ನಲ್ಲಿ ಕಂಡು ಬಂತು.
ಬೆಳೆಯುತ್ತಿರುವ ಬೆಂಗಳೂರು ನಗರದಲ್ಲಿ ಜನದಟ್ಟಣೆ ಇರುವುದು ಸಹಜ. ಇಂಥ ಜನದಟ್ಟಣೆಯಲ್ಲಿಯೇ ಕಳ್ಳಕಾಕರು ತಮ್ಮ ಕೈಚಳಕ ತೋರಲು ಬರುತ್ತಾರೆ. ಎಷ್ಟೋ ಜನ ಜಣ ಹಾಗೂ ಮೊಬೈಲ್ ಗಳನ್ನು ಕಳೆದುಕೊಂಡು ಪರದಾಡಿದ್ದಾರೆ. ಆದ್ದರಿಂದ ಬಸ್ ಗಳಲ್ಲಿ ದಟ್ಟಣೆ ಕಡಿಮೆ ಮಾಡಲು ಮುಂಬರುವ ದಿನಗಳಲ್ಲಿ ಬಿ.ಎಂ.ಟಿ.ಸಿ ಬಸ್ ಡಿಪೋ ಅಧಿಕಾರಿಗಳು ಸರಿಯಾದ ಸಮಯಕ್ಕೆ ಬಸ್ ನಿಲ್ದಾಣ ದಿಂದ ಬಸ್ ಬಿಡುವ ಮೂಲಕ ಜನ ಸ್ನೇಹಿಯಾಗಲಿ ಎಂದು ಸಾರ್ವಜನಿಕರು ಹಾಗೂ ಪತ್ರಿಕೆಯ ಅಭಿಪ್ರಾಯವಾಗಿದೆ.
ಚಿತ್ರ -ಪೂರಕ ಮಾಹಿತಿ –
ತೀರ್ಥಹಳ್ಳಿ ಅನಂತ ಕಲ್ಲಾಪುರ