ಪುಸ್ತಕ ಪರಿಚಯ: ಖಾನಾಪುರ ಕಾನನದ ಐಸಿರಿ

Must Read

ಅಧ್ಯಾತ್ಮ ವಿದ್ಯೆ ಮಕ್ಕಳ ಮೂಲ ಶಿಕ್ಷಣವಾಗಬೇಕು

ಭೂಮಿಯ ಮೇಲಿರುವ ಮಾಯೆ ಎಲ್ಲರಿಗೂ ಮಂಕು ಮಾಡುತ್ತದೆ ಎನ್ನುವುದಕ್ಕೆ ನಮ್ಮ ಅನುಭವವೇ ಸಾಕ್ಷಿ. ಇಲ್ಲಿ ಯಾರೋ ಹಿಂದೆ ಅನುಭವಿಸಿ, ಹೇಳಿ, ಬರೆದಿಟ್ಟ ಸತ್ಯವನ್ನು ನಾವು ಬಹಳ...

ಅರುಣ ಕಿರಣ ಪ್ರತಿದಿನ

. . .🕉. . . . || ಶ್ರೀ ಗುರುಭ್ಯೋ ನಮಃ || || ಓ೦ ಗ೦ ಗಣಪತಯೇ ನಮಃ || 🙏ಶುಭೋದಯ🙏 16: 06: 2021 ಬುಧವಾರ ಕಲಿಯುಗಾಬ್ದ...

ಟೈಮ್ಸ್ ಆಫ್ ಕರ್ನಾಟಕ ವರದಿಗೆ ಸ್ಪಂದನೆ ; ಅಕ್ರಮ ಮರಳು ದಂಧೆಯ ಬಗ್ಗೆ ಸ್ಪಷ್ಟೀಕರಣ ನೀಡಿದ ಎಸಿ

ಸಿಂದಗಿ: "ಅಕ್ರಮ ಮರಳು ಸಾಗಾಟ ನಿರಂತರ ; ಜಾಣ ಕುರುಡರಾದ ಅಧಿಕಾರಿಗಳು " ಎಂಬ ಶೀರ್ಷಿಕೆಯಲ್ಲಿ ನಮ್ಮ ಟೈಮ್ಸ ಆಫ್ ಕರ್ನಾಟಕ ವೆಬ್ ಪತ್ರಿಕೆಯಲ್ಲಿ ದಿ....

ಖಾನಾಪುರ ಕಾನನದ ಐಸಿರಿ

ಪುಸ್ತಕದ ಹೆಸರು : ಖಾನಾಪುರ ಕಾನನದ ಐಸಿರಿ

ಲೇಖಕರು : ಶಬಾನಾ ಇ ಅಣ್ಣಿಗೇರಿ
ಪ್ರಕಾಶಕರು : ಸಪನಾ ಪ್ರಭಾ ಪ್ರಕಾಶನ
ಪುಟಗಳು : 100 ಬೆಲೆ 120/-
ಪ್ರಥಮ ಮುದ್ರಣ : 2021
ಮುದ್ರಣ : ಇಂಪ್ರೆಶನ್ಸ್ ಬೆಳಗಾವಿ.

ಖಾನಾಪೂರ ಕಾನನದ ಐಸಿರಿ ತಾಲೂಕಿನ ಅಧ್ಯಯನ ಕೃತಿ ಆಗಿದ್ದು, ಮುನ್ನುಡಿಯನ್ನು ಹಿರಿಯ ಸಾಹಿತಿ ಪತ್ರಕರ್ತರು ಆದ ಶ್ರೀ. ಎಲ್.ಎಸ್. ಶಾಸ್ತ್ರೀಯವರು ಮಾಡಿದ್ದಾರೆ. ಇದರಲ್ಲಿ 31 ಘಟಕಗಳನ್ನು ಮಾಡಿದ್ದು ಪೀಠಿಕೆ ಭೌಗೋಳಿಕ ಸ್ಥಿತಿ, ಇತಿಹಾಸ ಶಾಸನಗಳು, ಗತಕಾಲದ ಗುರುತುಗಳು, ಶಾಕ್ತ ಶಿಲ್ಪಗಳು, ಐತಿಹಾಸಿಕ ಸ್ಥಳಗಳು, ಸ್ವಾತಂತ್ರ್ಯ ಹೋರಾಟ ನಿಸರ್ಗ ತಾಣಗಳು, ಹಸಿರು ಸಂಪತ್ತು ಪ್ರಾಣಿ ಪಕ್ಷಿಗಳು ಜಲಪಾತಗಳು, ನದಿಗಳು, ಹಳ್ಳಿಗಳು, ಖನಿಜ ಸಂಪತ್ತು, ಶೈಕ್ಷಣಿಕ, ಧಾರ್ಮಿಕ ಪರಂಪರೆ, ಗ್ರಾಂಥಿಕ ಸಾಹಿತ್ಯ, ಭಾಷಾ ವೈವಿಧ್ಯತೆ, ಚಿತ್ರರಂಗ ಕಲಾಕ್ಷೇತ್ರಕ್ಕೆ ಕೊಡುಗೆ, ಕ್ರೀಡೆ, ಆಹಾರ ಸಂಸ್ಕೃತಿ ಉಡುಗೆ ತೊಡುಗೆ, ಆರ್ಥಿಕ ಪ್ರಗತಿ, ರಕ್ಷಣಾ ವ್ಯವಸ್ಥೆ ವಿಶಿಷ್ಟ ಗ್ರಾಮಗಳು, ರಾಜಕೀಯ ಬೆಳವಣಿಗೆ, ಆದರ್ಶ ತಖ್ತೆ ಚಿತ್ರಮಾಲೆ ಅನುಬಂಧ ಹೀಗೆ ಮಾಡಿದ್ದು.
ಖಾನಾಪೂರ ತಾಲೂಕಿನ ಇತಿಹಾಸ ಪ್ರಾರಂಭವಾಗುವುದು ಹಲಸಿಯ ಆದಿ ಕದಂಬರ ಇತಿಹಾಸದಿಂದ ಎಂದು ತಜ್ಞರು ಗುರುತಿಸುತ್ತಾರೆ.

- Advertisement -

ಬೇರೆಬೇರೆಯವರ ಪ್ರಕಾರ ಸ್ವಲ್ಪ ಹೆಚ್ಚ ಕಡಿಮೆ ಇವೆ. ಅಸೋಗಾ, ಅಬನಾಳಿ, ದೇಗಾಂವ, ಇಟಗಿ, ಕಕ್ಕೇರಿ, ಬಾಚೋಲಿ, ಮುಂತುರ್ಗಾ, ಕರಂಬಳ, ಖಾನಾಪೂರ, ಗೋಧೋಳಿ ಘಸ್ಟೋಳಿ, ಬರಗಾಂವ, ಬೋರನಕಿ, ಬೋಗುರ, ಮುಗಾವಡೆ, ಮೊದೇಗೊಪ್ಪ, ಹಿರೇಹಟ್ಟಿ ಕೊಳಿ ಬೀಡಿ, ಚಾಪಗಾಂವದಲ್ಲಿ ಕಿರುಶಾಸನಗಳಿವೆ.

ಧರ್ಮಗಳಲ್ಲಿ ಕಾಕ್ತಧರ್ಮ ಕೂಡ ಒಂದಾಗಿದೆ. ‘ಶಾಕ್ತ’ ಎಂದರೆ ಶಕ್ತಿಯ ಬಂದು ಆರಾಧನೆ, ಇವು ಗೌಳಿಹಳ್ಳಿ, ಹಲಸಿ ಕಣಕುಂಬಿಯಲ್ಲಿವೆ. ಹಲಸಿ, ಕಲ್ಮೇಶ್ವರ ಮಂದಿರ, ನಂದಗಡ, ಇಟಗಿ, ಕಮಲನಾರಾಯಣ ದೇವಸ್ಥಾನ ಕಸಮಳಗಿ ಕಕ್ಕೇರಿ ಲಿಂಗನಮಠ, ಬೀಡಿ ಇವು ಐತಿಹಾಸಿಕ ಸ್ಥಳಗಳಾಗಿವೆ. ಕಣಕುಂಬಿ, ಜಾಂಬೋಟಿ, ಅಸೋಗಾ ಭೀಮಗಡ, ನಾಗರಗಾಳಿ, ಹಂಡಿ ಬಡಗನಾಥ ನಿಸರ್ಗ ತಾಣಗಳಾಗಿವೆ.

ವಜ್ರಪೊಹಾ, ವಜ್ರಾ, ಕಳಸಾ, ಚಿಕಲೆ, ಸೂರಲ್ ಖಾನಾಪೂರ ತಾಲೂಕಿನ ಜಲಪಾತಗಳು ಆಗಿವೆ. ಮಲಪ್ರಭಾ, ಮಹಾದಾಯಿ, ಪಾಂಡರಿ ಮಾರ್ಕಂಡೇಯ ನದಿಗಳು ಉಪನದಿಗಳಾಗಿವೆ. ಮ್ಯಾಂಗನೀಜ್ ಬಾಕ್ಸೈಟ್ ಸುಣ್ಣದಕಲ್ಲು, ಚಿನಿಮಣ್ಣು, ಗ್ರಾನೈಟ್ ಇಲ್ಲಿ ದೊರೆಯುವ ಖನಿಜ ಸಂಪತ್ತಾಗಿದೆ. ಸಮ್ಮಿಶ್ರ ಭಾಷಾ ಸೌಂದರ್ಯ ಈ ತಾಲೂಕಿನಲ್ಲಿ ಕಾಣಬಹುದು. ಕನ್ನಡ ಮರಾಠಿ ಕೊಂಕಣಿ ಉರ್ದು, ಹಿಂದಿ ಕಾಣಬಹುದು ಅದೇ ರೀತಿ ಜನ ಜನಾಂಗದವರು ಕಾಣಬಹುದು ಹಿಂದೂ ಲಿಂಗಾಯತ ಮುಸ್ಲಿಂ ಕ್ರೈಸ್ತ, ಜೈನ್, ಶೈವ, ಕ್ಷತ್ರಿಯ ಗೊಲ್ಲ, ಸಿದ್ದಿ, ಗೌಳಿ, ಕುರುಬ, ಮರಾಠ, ಡೊಂಬ, ಹಬಸಿ, ಹವ್ಯಕ್ತ, ಪಾರಿ ಕೊಂಕಣಿ, ಬ್ರಾಹ್ಮಣ ಇತ್ಯಾದಿ.

ಭಾರತೀಯ ಸೈನ್ಯ ವಾಯುದಳ, ನೌಕಾದಳದಲ್ಲಿ ತಾಲೂಕಿನ ಸುಮಾರು 3800 ಜನರು ಯೋಧರು ಸೇವಾನಿರತರಾಗಿದ್ದಾರೆ. ಇಲ್ಲಿನ ಆಹಾರ ಬಿದಿರಿನ ಕಳಲೆಯ ಪಲ್ಯ ಕೆಲ ಅಪರೂಪದ ತರಕಾರಿ ಪಲ್ಯ ಕಾಡು ಗಡ್ಡೆಗಳ ಪಲ್ಯ ಅಣಬೆ, ಹಸಿ ಗೋಡಂಬಿ ಬೀಜದ ಪಲ್ಯ ಹಲಸಿ ತೊಳೆಪಲ್ಯ, ಬಾಳೆಕಾಯಿ ಅಕ್ಕಿರೋಟಿ ಮೀನು ಮಾಂಸ ಚಪಾತಿ ರೊಟ್ಟಿ ವಿಶಿಷ್ಟವಾಗಿವೆ.

ಬೆನ್ನುಡಿಯನ್ನು ಡಾ. ಎಚ್.ಬಿ. ಕೋಲ್ಕಾರ ಪ್ರಾಧ್ಯಾಪಕರು ಬರೆದಿದ್ದು ತಾಲೂಕಿನ ಸಾಂಸ್ಕೃತಿಕ ಅಧ್ಯಯನದ ರೂಪವಾಗಿ ಮೂಡಿಬಂದಿದೆ ಸಂಶೋಧನೆಯ ನಿಲುವಿನಿಂದ ಸಾಂಸ್ಕೃತಿಕ ಅರಿವಿನ ಅನಾವರಣವನ್ನು ಮಾಡಲು ಹೊರಟ ಲೇಖಕಿ ಇಲ್ಲಿ ಈ ತಾಲೂಕಿನ ಭೌಗೋಳಿಕ ಸ್ಥಿತಿ ಮತ್ತು ಸ್ವರೂಪದ ವಿವರಣೆಯೊಂದಿಗೆ ಶಾಸನ, ಐತಿಹ್ಯ ಕಥೆ ಇತ್ಯಾದಿ ಇತಿಹಾಸದ ಆಧಾರಗಳನ್ನು ಸಾಧಾರವಾಗಿ ನೀಡುತ್ತಾ ಪೌರಾಣಿಕದಿಂದ ಇಂದಿನ ವರ್ತಮಾನದವರೆಗೆ ಬೆಳೆದು ಬಂದ ಇಲ್ಲಿನ ಬದುಕಿನ ವಿದ್ಯಮಾನಗಳನ್ನು, ಆದ ಪಲ್ಲಟ-ಪರಿವರ್ತನೆಗಳನ್ನು ಶೈಕ್ಷಣಿಕವಾಗಿ ಸಾಮಾಜಿಕವಾಗಿ, ಸಾಂಸ್ಕೃತಿಕವಾಗಿ ಪ್ರಾಕೃತಿಕವಾಗಿ ಆಧುನಿಕ ವಿನ್ಯಾಸದ ಸ್ವರೂಪವಾಗಿ ಹೀಗೆ ಅಧ್ಯಯನಕ್ಕೆ ಭವಿಷ್ಯತ್ತಿನ ತಾತ್ವಿಕ ಬದುಕಿಗೆ ತುಂಬಾ ಅಗತ್ಯವೆಂದು ಸದಾಶಯದ ಅರಿವಿನಲ್ಲಿ ಕಟ್ಟಿಕೊಟ್ಟಿದ್ದಾರೆ ಖಾನಾಪೂರ ತಾಲೂಕಿನ ಬಹುತ್ವದಲ್ಲಿಯ ಆಪ್ತ ಬದುಕಿನ ಮತ್ತು ನಿಸರ್ಗದತ್ತ ಅನನ್ಯ ಪರಿಸರದ ಸಂಪತ್ತಿನ ವಿವೇಚನೆಗೆ ಈ ಕೃತಿ ಉತ್ತಮ ಕಾಣ್ಕೆಯಾಗಿದೆ ಎಂದು ಹಾರೈಸಿದ್ದಾರೆ.

ಇವರ ಎರಡನೆ ಆವೃತಿಯಲ್ಲಿ ಪರ್ಲವಾಡಿ, ಎಲಬು ಮುರಿದ ಔಷಧಿ ಹಾಗೂ ಮಾಚಿಗಡ (ಬಿಜಗರ್ಣಿ) ನಲ್ಲಿಯ ರಾಮಮಂದಿರ ಕಾಪೋಲಿ ಕೆ.ಜಿ.ಯ ಮೌಲಿ ದೇವಸ್ಥಾನ ಪಂಡಾನದಿ ಮರಾಠಿ ಗ್ರಾಮಗಳ ಇನಷ್ಟು ಊರುಗಳಿವೆ ಹಾಗೂ ಶ್ರೀಮತಿ ಲಕ್ಷ್ಮೀ ಹೆಬ್ಬಾಳಕರ ಇದೇ ತಾಲೂಕಿನವರು ಇವುಗಳನ್ನು ಸೇರಿಸಲಿ ಮತ್ತು ಇವರಿಂದ ಇನ್ನೂ ಹೆಚ್ಚಿನ ಕೃತಿಗಳು ಹೊರಬರಲಿ ಎಂದು ಶುಭ ಹಾರೈಸುವೆನು.

ಇವರ ಚಿರವಾಣಿ 9008687369


ಎಂ.ವೈ. ಮೆಣಸಿನಕಾಯಿ.
ಬೆಳಗಾವಿ.
ಮೊ: 9449209570.

- Advertisement -
- Advertisement -

Latest News

ಅಧ್ಯಾತ್ಮ ವಿದ್ಯೆ ಮಕ್ಕಳ ಮೂಲ ಶಿಕ್ಷಣವಾಗಬೇಕು

ಭೂಮಿಯ ಮೇಲಿರುವ ಮಾಯೆ ಎಲ್ಲರಿಗೂ ಮಂಕು ಮಾಡುತ್ತದೆ ಎನ್ನುವುದಕ್ಕೆ ನಮ್ಮ ಅನುಭವವೇ ಸಾಕ್ಷಿ. ಇಲ್ಲಿ ಯಾರೋ ಹಿಂದೆ ಅನುಭವಿಸಿ, ಹೇಳಿ, ಬರೆದಿಟ್ಟ ಸತ್ಯವನ್ನು ನಾವು ಬಹಳ...
- Advertisement -

More Articles Like This

- Advertisement -
close
error: Content is protected !!