spot_img
spot_img

ಪುಸ್ತಕ ಪರಿಚಯ

Must Read

spot_img

ಕನ್ನಡ ಅಧ್ಯಯನ ಪೀಠದ ಹಸ್ತಪ್ರತಿಸೂಚಿ ಸಂಪುಟ : ಎಂಟು

- Advertisement -

ಸಾಹಿತ್ಯ, ಶಾಸ್ತ್ರ, ತತ್ವ ಇತ್ಯಾದಿಗಳಿಗೆ ಸಂಬಂಧಪಟ್ಟ ಈ ಹಸ್ತಪ್ರತಿಗಳ ವಿಷಯ ವೈವಿಧ್ಯ ಅನೇಕ ಅಭ್ಯಾಸಿಗಳನ್ನು ತನ್ನತ್ತ ಆಕರ್ಷಿಸಿದೆ. ಹೀಗಾಗಿ ಇವುಗಳನ್ನು ಆಧರಿಸಿ ಕನ್ನಡ ಅಧ್ಯಯನ ಪೀಠ ಈವರೆಗೆ ನೂರಾರು ಗ್ರಂಥಗಳನ್ನು ಸಂಪಾದಿಸಿ ಪ್ರಕಟಿಸಿದೆ. ರಾಜ್ಯದ ಒಳಹೊರಗಿನ ಅನೇಕ ಸಂಸ್ಥೆಗಳು, ವಿದ್ವಾಂಸರು ಈ ಭಾಂಡಾರದ ಪ್ರಯೋಜನ ಪಡೆದಿದ್ದಾರೆ.

ಇದೆ ಭಾಂಡಾರದ ಹಸ್ತಪ್ರತಿ ಕಟ್ಟುಗಳ ಹಸ್ತಪ್ರತಿ ಸೂಚಿಯ ಎಂಟನೆಯ ಸಂಪುಟವನ್ನು ಸಂಪಾದಿಸಿದವರು ಡಾ.ವೀರಣ್ಣ ರಾಜೂರ ಅವರು. ಇದು 1992 ರಲ್ಲಿ ಪ್ರಸಾರಾಂಗ ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡದಿಂದ ಬೆಳಕುಕಂಡಿದೆ. 272 ಪುಟದ ಹರವು ಪಡೆದಿದೆ.

ಈ ಕೃತಿಯಲ್ಲಿ ಅಳವಟ್ಟ ಒಂದು ಕಟ್ಟಿನ ಸೂಚಿ ಶಿಲ್ಪದ ಒಂದು ಉದಾಹರಣೆಯನ್ನು ಈ ಕೆಳಗಿನಂತೆ ನೋಡಬಹುದು:

- Advertisement -

ಅಕ್ಷರಾಂಕ ಗದ್ಯ
ತ್ರಾ ಪ್ರ:972/23 ಪಾಲ್ಕುರಿಕೆ ಸೋಮನಾಥ ಗದ್ಯ
6.5” x 1.8 ಉರಗಾದ್ರಿಮಠ, ಉರವಕೊಂಡ ಸು. 1195
ಪು. 67ಅ-78ಅ ಸಾಲು: 10
ಆದಿ : ಶ್ರೀಗುರುಬಸವಲಿಂಗಾಯನಮ: || ಅಕ್ಷರಾಂಕ ಗದ್ಯ ||
||ಕಂದ|| ಶ್ರೀಯುತ ನಮ: ಶಿವಾಯ
ತ್ಯಯತ ಪಂಚಾಕ್ಷರ ಪ್ರಣವ ಶಂಭೂತ
ಸ್ವಾಯತ ಭಾವಂನಕ್ಷರ
ಕಾಯಸ್ತನೆ ನಿಮ್ಮ ಪೊಗಳ್ವೆ ನಾಂ ಬಸವೇಶಾ||1||
ಅಂತ್ಯ : ||ಕಂದ|| ಶಿವಮಸ್ತು ಭಕ್ತಿ ವಿಭವೋ
ದ್ಭವ ಮಸ್ತುವಕ್ಷರಾಂಶ ಪಟಣವ ಶ್ರವಣ
ಸ್ತವನಾಶಕ್ತರಿಗೆ ಮಹೋ
ತ್ಸವಮಸ್ತು ವಾಕ್ಷಿದ್ಧಿ ರಸ್ತು ಶಿವಬಸವೇಶಾ||2||
ಅಕ್ಷರಾಂಶ ಗದ್ಯ ಸಮಾಪ್ತ ಮಂಗಳಮಹಾ ಶ್ರೀಶ್ರೀ.

ವಿಷಯ: ಭಕ್ತಿ ಭಾಂಡಾರಿಯೆನಿಸಿದ ಬಸವಣ್ಣನವರ ಸ್ತುತಿ.

ವಿಶೇಷ: ಸಮಗ್ರ; ಉತ್ತಮ, ಅಕ್ಷರದೊಡ್ಡ ಪ್ರಮಾಣ, ದುಂಡಗೆ.
ಈ ಕಟ್ಟಿನಲ್ಲಿರುವ ಇತರ ಕೃತಿಗಳಿಗಾಗಿ ನೋಡಿ : ತಾಪ್ರ. 792/1(ಗುರುರಗಳೆ)

- Advertisement -

ಹೀಗೆ ಡಾ. ವೀರಣ್ಣ ರಾಜೂರ ಅವರು ಈ ಕಟ್ಟಿನ ಪರಿಚಯವನ್ನು ಗ್ರಂಥ ಸಂಪಾದನ ನೆಲೆಯಲ್ಲಿ ಮಾಡಿರುವರು.

ಒಂದನೆಯ ಸಾಲು: ಮಧ್ಯದಲ್ಲಿರುವುದು (ದಪ್ಪಗಾತ್ರದ ಅಂಕಿ) ಕೃತಿಯ ಅನುಕ್ರಮಸಂಖ್ಯೆ.

ಎರಡನೆಯ ಸಾಲು: ಮಧ್ಯದಲ್ಲಿ ಕೃತಿಯ ಹೆಸರು

ಮೂರನೆಯ ಸಾಲು: ಎಡಗಡೆ ಲಿಖಿತ ವಸ್ತು ಹಾಗೂ ಹಸ್ತಪ್ರತಿ ಭಾಂಡಾರದ ಕ್ರಮಸಂಖ್ಯೆ; ಬಲಗಡೆ ಸಾಹಿತ್ಯ ಪ್ರಕಾರ, ಮಧ್ಯದಲ್ಲಿ ಕರ್ತೃವಿನ ಹೆಸರು.

ನಾಲ್ಕನೆಯ ಸಾಲು: ಎಡಗಡೆ ಹಸ್ತಪ್ರತಿಯ ಅಳತೆ (ಉದ್ದ-ಅಗಲ), ಬಲಗಡೆ ಕರ್ತೃವಿನ ಕಾಲ.

ಐದನೆಯ ಸಾಲು: ಮಧ್ಯದಲ್ಲಿ ಹಸ್ತಪ್ರತಿಯ ಒಡೆತನ-ಲಭಿಸಿದ ಸ್ಥಳ, ಎಡಗಡೆ ಕೃತಿಯ ಪುಟ ಸಂಖ್ಯೆ, ಬಲಗಡೆ ಪ್ರತಿಪುಟದಲ್ಲಿರುವ ಸಾಲಿನಸಂಖ್ಯೆ ಎಂದು ಪರಿಚಯಿಸಲಾಗಿದೆ.

ಆ ಮೇಲೆ ಆದಿ ಎಂಬುದರ ಆದಿಯಲ್ಲಿ ಆಯಾ ಕೃತಿಯ ಪ್ರಾರಂಭದ ಸ್ವಲ್ಪ ಪಾಠವನ್ನೂ ಅಂತ್ಯ ಎಂಬುದರ ಕೆಳಗೆ ಆಯಾ ಕೃತಿಯ ಅಂತ್ಯದ ಪಾಠವನ್ನು ಬರೆಯಲಾಗಿದೆ. ಈ ಎರಡೂ ವಿಭಾಗಗಳಲ್ಲಿ ಮುಂದುವರಿದ ಪಾಠವನ್ನಾಗಿ ———- ಎಂಬ ಚಿಹ್ನೆಯನ್ನು, ಲುಪ್ತ ಪಾಠಕ್ಕಾಗಿ xxx ಸಂಕೇತವನ್ನೂ ಬಳಸಲಾಗಿದೆ.

ವಿಷಯ ವಿಭಾಗದಲ್ಲಿ ಕೃತಿಯ ಕೇಂದ್ರ ವಿಷಯವನ್ನು ಸಂಕ್ತಿಪ್ತವಾಗಿ ಹೇಳಲಾಗಿದೆ. ಹಸ್ತಪ್ರತಿಯ ಸಮಗ್ರತೆ, ಅಸಮಗ್ರತೆ, ಸ್ಥಿತಿ, ಅಕ್ಷರ ಸ್ವರೂಪ ಮುಂತಾದ ಅಂಶಗಳನ್ನು ವಿಶೇಷದಲ್ಲಿ ಸಮಾವೇಶಗೊಳಿಸಿದ್ದಾರೆ.

ಈ ಕಟ್ಟಿನಲ್ಲಿಯ ಕೃತಿಗಳು ವಿಭಾಗದಲ್ಲಿ ಪ್ರತಿಯೊಂದು ಕಟ್ಟಿನಲ್ಲಿರುವ ಎಲ್ಲ ಕೃತಿಗಳ ಪಟ್ಟಿಯನ್ನು ಕೊಡಲಾಗಿದ್ದು, ಕನ್ನಡೇತರ ಭಾಷೆಯ ಕೃತಿಗಳ ಮುಂದೆ ಮಾತ್ರ ದುಂಡ ಕಂಸಿನಲ್ಲಿ ತೆಲಗು, ತಮಿಳು, ಸಂಸ್ಕೃತ ಎಂದು ಸೂಚಿಸಲಾಗಿದೆ. ಈ ಪಟ್ಟಿಯನ್ನು ಆಯಾ ಕಟ್ಟಿನ ಮೊದಲ ಕೃತಿಯ ಪರಿಚಯದ ಕೊನೆಗೆ ಮಾತ್ರ ಕೊಡಲಾಗಿದೆ.

ಆದರೆ ಆ ಕಟ್ಟಿನಲ್ಲಿರುವ ಪ್ರಥಮೇತರ ಕೃತಿಗಳನ್ನು ಸೂಚಿಸುವ ಸಂದರ್ಭದಲ್ಲಿ ಈ ಕಟ್ಟಿನಲ್ಲಿರುವ ಇತರ ಕೃತಿಗಳಿಗಾಗಿ ನೋಡಿ: ತಾಪ್ರ, ಕಾಪ್ರ ಎಂದು ಸೂಚಿಸಿ, ಆ ಕಟ್ಟಿನ ಕ್ರಮ ಸಂಖ್ಯೆಯನ್ನು ಕಂಸಿನಲ್ಲಿ ಇತರ ಕೃತಿಗಳಿಗಾಗಿ ನೋಡಿ:ತಾಪ್ರ:ಕಾಪ್ರ ಎಂಬ ಎರಡೂ ವಿಭಾಗಗಳನ್ನು ಸಹಜವಾಗಿಯೇ ಕೈಬಿಡಲಾಗಿದೆ. ಕರ್ತೃ, ಕಾಲಲಭ್ಯವಿಲ್ಲದಲ್ಲಿ ಪ್ರಶ್ನಾರ್ಥಕ ಚಿಹ್ನೆ ಹಾಕಲಾಗಿದೆ. ಹೀಗೆ ಈ ಸೂಚಿಯ ರೂಪಶಿಲ್ಪವನ್ನು ರೂಪಿಸಿರುವದನ್ನು ಸ್ಪಷ್ಟವಾಗಿ ತಿಳಿಸಿದ್ದಾರೆ.

ಈವರೆಗೆ ಪ್ರಕಟವಾದ ಇಂಥ ಎಲ್ಲ ಸೂಚಿಗಳನ್ನು ಆಳವಾಗಿ ಅಭ್ಯಸಿಸಿ ಅವುಗಳಲ್ಲಿಯ ಕೊರತೆಯನ್ನು ನೀಗಿಸಿಕೊಂಡು ಈ ಸೂಚಿ ಸರ್ವ ಸಮರ್ಪಕವಾಗುವಂತೆ ಯೋಚಿಸಲಾಗಿದೆ.

ಅಂದರೆ ಹಸ್ತಪ್ರತಿಯ ಒಡೆತನ-ಲಭಿಸಿದ ಸ್ಥಳ, ಈ ಕಟ್ಟಿನಲ್ಲಿರುವ, ಕೃತಿಗಳ ಸಂಖ್ಯೆ, ಈ ಕಟ್ಟಿನಲ್ಲಿರುವ ಇತರ ಕೃತಿಗಳಿಗಾಗಿ ನೋಡಿ, ತಾಪ್ರ:ಕಾಪ್ರ-ಇದು ಈ ಸೂಚಿ ರಚನೆಯಲ್ಲಿ ನಾವು ಅಳವಡಿಸಿಕೊಂಡ ಹೊಸ ಅಂಶಗಳಾಗಿರುತ್ತವೆ ಎಂದು ಸಂಪಾದಕರು ಸ್ಪಷ್ಟವಾಗಿ ಹೇಳಿದ್ದಾರೆ.

ಸೂಚಿ ರಚನಾಕಾರ್ಯ ಅತ್ಯಂತ ಪರಿಶ್ರಮದಾಯಕವಾದುದು. ಹಸ್ತಪ್ರತಿವಾಚನ ಪರಿಣತಿ, ಆಸಕ್ತಿ ಕಾರ್ಯೋತ್ಸಾಹ ಇತ್ಯಾದಿ ಬಲ-ಛಲಗಳ ಫಲ, ಪ್ರಸ್ತುತ ಹಸ್ತಪ್ರತಿ ಸೂಚಿ. ಎಷ್ಟೇ ಎಚ್ಚರ ವಹಿಸಿದರೂ ಅಚಾತುರ್ಯದಿಂದ ಈ ಕಟ್ಟಿನಲ್ಲಿರುವ ಕೃತಿಗಳು ಎಂಬುದಕ್ಕೆ ಬದಲು ಕಟ್ಟಿನಲ್ಲಿರುವ ಕೃತಿಗಳು ಕಟ್ಟಿನಲ್ಲಿರುವ ಇತರ ಕೃತಿಗಳು ಎಂಬಿವು ಅಚ್ಚಾಗಿವೆ.

ಇವುಗಳನ್ನು ಈ ಕಟ್ಟಿನಲ್ಲಿರುವ ಕೃತಿಗಳು ಎಂದು ಓದಿಕೊಳ್ಳಬೇಕೆಂದು ಸೂಚಿಸಿದ್ದಾರೆ. ಹೀಗೆ ಡಾ. ವೀರಣ್ಣ ರಾಜೂರ ಅವರು ಪರಿಶ್ರಮದ ಮೂಲಕ ಈ ಕೃತಿ ಸಂಪಾದಿಸಿರುವದು ಅರ್ಥಪೂರ್ಣವೆನಿಸಿದೆ.


ಡಾ. ವ್ಹಿ.ಬಿ.ಸಣ್ಣಸಕ್ಕರಗೌಡರ
ಉಪನ್ಯಾಸಕರು, ಬಾದಾಮಿ

- Advertisement -
- Advertisement -

Latest News

ರಾಜ್ಯದ ರಸ್ತೆ ಕಾಮಗಾರಿಗಳು ಸೆ.2024 ರೊಳಗೆ ಪೂರ್ಣ ; ಮೇಲ್ಮನೆಗೆ ಗಡಕರಿ ಉತ್ತರ

ಮೂಡಲಗಿ: ಕೇಂದ್ರ ರಸ್ತೆ ಮತ್ತು ಮೂಲಸೌಕರ್ಯ ನಿಧಿ ಯೋಜನೆಯಡಿ ಕರ್ನಾಟಕ ರಾಜ್ಯದಲ್ಲಿ 663 ಕೋಟಿ ರೂ.ಗಳ ವೆಚ್ಚದಲ್ಲಿ ಸುಮಾರು 241 ಕಿ.ಮೀ ಉದ್ದದ 36 ರಾಜ್ಯ...
- Advertisement -

More Articles Like This

- Advertisement -
close
error: Content is protected !!
Join WhatsApp Group